ಸದ್ಗುರುಗಾಗಿ ‘ಒಎಂಜಿ 2’ ವಿಶೇಷ ಶೋ; ವಿಮರ್ಶೆ ಕೇಳಿ ಹಿಗ್ಗಿದ ಅಕ್ಷಯ್ ಕುಮಾರ್

‘ಒಎಂಜಿ 2’ ಸಿನಿಮಾ ಲೈಂಗಿಕ ಶಿಕ್ಷಣದ ಬಗ್ಗೆ ಇರುವುದರಿಂದ ಇದನ್ನು ಎಲ್ಲರೂ ನೋಡಲೇಬೇಕು ಎಂದು ತಂಡ ಹೇಳುತ್ತಿದೆ. ಸದ್ಗುರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಗುರುಗಾಗಿ ‘ಒಎಂಜಿ 2’ ವಿಶೇಷ ಶೋ; ವಿಮರ್ಶೆ ಕೇಳಿ ಹಿಗ್ಗಿದ ಅಕ್ಷಯ್ ಕುಮಾರ್
ವಾಸುದೇವ-ಅಕ್ಷಯ್ ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Aug 08, 2023 | 8:16 AM

ಇತ್ತೀಚೆಗೆ ಅಕ್ಷಯ್ ಕುಮಾರ್ (Akshay Kumar) ಅವರು ಸಿನಿಮಾಗಳ ಆಯ್ಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಕೇವಲ ಹಾಸ್ಯಪ್ರಧಾನ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಸಮಾಜಕ್ಕೆ ಸಂದೇಶ ರವಾನೆ ಆಗುವಂಥ ಚಿತ್ರಗಳನ್ನೂ ಅವರು ಮಾಡುತ್ತಿದ್ದಾರೆ. ಈಗ ಅವರ ನಟನೆಯ ‘ಒಹ್ ಮೈ ಗಾಡ್ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಇದರ ಭಾಗವಾಗಿ ಸದ್ಗುರು ಅವರಿಗೆ ಅಕ್ಷಯ್ ಕುಮಾರ್ ಅವರು ಸಿನಿಮಾ ತೋರಿಸಿದ್ದಾರೆ. ಸದ್ಗುರು ಅವರು ಈ ಚಿತ್ರದ ವಿಮರ್ಶೆ ತಿಳಿಸಿದ್ದಾರೆ.

‘ಒಎಂಜಿ 2’ ಸಿನಿಮಾ ಆಗಸ್ಟ್ 11ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಎ ಸರ್ಟಿಫಿಕೇಟ್​ (ವಯಸ್ಕರು ಮಾತ್ರ ನೋಡಬಹುದಾದ ಸಿನಿಮಾ) ಸಿಕ್ಕಿರುವುದರಿಂದ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಚಿತ್ರ ಲೈಂಗಿಕ ಶಿಕ್ಷಣದ ಬಗ್ಗೆ ಇರುವುದರಿಂದ ಇದನ್ನು ಎಲ್ಲರೂ ನೋಡಲೇಬೇಕು ಎಂದು ತಂಡ ಹೇಳುತ್ತಿದೆ. ಸದ್ಗುರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಯಿಮತ್ತೂರಿನಲ್ಲಿರುವ ಇಶಾ ಫೌಂಡೇಷನ್​ಗೆ ಅಕ್ಷಯ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸದ್ಗುರುಗೆ ‘ಒಎಂಜಿ 2’ ಚಿತ್ರವನ್ನು ಅವರು ತೋರಿಸಿದ್ದಾರೆ. ‘ನಮಸ್ಕಾರ ಅಕ್ಷಯ್ ಕುಮಾರ್. ನೀವು ಇಶಾ ಯೋಗ ಕೇಂದ್ರದಲ್ಲಿ ಇರುವುದು ಖುಷಿ ನೀಡಿದೆ. ದೈಹಿಕ ಅಗತ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಯುವಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ. ನಮ್ಮ ಯುವಕರಿಗೆ ಅವರ ದೇಹ, ಮನಸ್ಸು ಮತ್ತು ಭಾವನೆಗಳನ್ನು ನಿಭಾಯಿಸಲು ಸಜ್ಜುಗೊಳಿಸುವ ಸಮಯವಾಗಿದೆ’ ಎಂದು ಸದ್ಗುರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ಶಿಕ್ಷಣದ ಬಗ್ಗೆ ಹೇಳಲು ಬಂದ ‘ಒಎಂಜಿ 2’; ವಿವಾದ ಸೃಷ್ಟಿಸಲಿದೆ ಅಕ್ಷಯ್ ಕುಮಾರ್ ಸಿನಿಮಾ?

ಇದನ್ನು ರೀಟ್ವೀಟ್ ಮಾಡಿರುವ ಅಕ್ಷಯ್, ‘ನಮಸ್ಕಾರ ಸದ್ಗುರು. ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ. ಇದು ಅತ್ಯುತ್ತಮ ಅನುಭವ. ಒಎಂಜಿ 2 ವೀಕ್ಷಿಸಿದ್ದಕ್ಕೆ ಮತ್ತು ಫೀಡ್​ಬ್ಯಾಕ್ ನೀಡಿದ್ದಕ್ಕೆ ಧನ್ಯವಾದ. ನಮ್ಮ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಸಿಕ್ಕಿದ್ದಕ್ಕೆ ಇಡೀ ತಂಡ ಆಭಾರಿಯಾಗಿದೆ’ ಎಂದು ಅಕ್ಷಯ್ ಪ್ರತಿಕ್ರಿಯೆ ನೀಡಿದ್ದಾರೆ.

‘ಒಎಂಜಿ’ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. ಇದಾದ 11 ವರ್ಷಗಳ ಬಳಿಕ ಸೀಕ್ವೆಲ್ ಸಿದ್ಧವಾಗಿದೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ ಕೂಡ ಸಿನಿಮಾದಲ್ಲಿದ್ದಾರೆ. ಈ ಚಿತ್ರ ರಿಲೀಸ್​ಗೂ ಮೊದಲೇ ವಿವಾದ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು