‘ರಾಮನ ಆರಾಧಿಸುವವರಿಗೆ ದೊಡ್ಡ ದಿನ’; ಕಾರ್ಯಕ್ರಮ ಮಿಸ್ ಮಾಡಿಕೊಂಡು ಸಂದೇಶ ಕೊಟ್ಟ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರು ಹಲವು ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾರೆ. ಅವರಿಗೆ ಅಯೋಧ್ಯೆಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಆಗಮಿಸುತ್ತಿಲ್ಲ. ಈ ಬಗ್ಗೆ ಅವರು ವಿಡಿಯೋ ಮಾಡಿದ್ದಾರೆ.

‘ರಾಮನ ಆರಾಧಿಸುವವರಿಗೆ ದೊಡ್ಡ ದಿನ’; ಕಾರ್ಯಕ್ರಮ ಮಿಸ್ ಮಾಡಿಕೊಂಡು ಸಂದೇಶ ಕೊಟ್ಟ ಅಕ್ಷಯ್ ಕುಮಾರ್
ಅಕ್ಷಯ್​ ಕುಮಾರ್​

Updated on: Jan 22, 2024 | 12:36 PM

ಅಯೋಧ್ಯೆಯ (Ayodhye) ರಾಮ ಮಂದಿರದಲ್ಲಿ ನಡೆಯುತ್ತಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ನಟ ಅಕ್ಷಯ್ ಕುಮಾರ್ ಅವರಿಗೆ ಆಹ್ವಾನ ಸಿಕ್ಕಿತ್ತು. ಆದರೆ, ಶೂಟಿಂಗ್​ ಹಿನ್ನೆಲೆಯಲ್ಲಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗಿ ಆಗೋಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅವರು ಒಟ್ಟಾಗಿ ವಿಶ್ ಮಾಡಿದ್ದಾರೆ. ಅವರು ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಅವರು ಹಲವು ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾರೆ. ಅವರಿಗೆ ಅಯೋಧ್ಯೆಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಆಗಮಿಸುತ್ತಿಲ್ಲ. ಈ ಬಗ್ಗೆ ಅವರು ವಿಡಿಯೋ ಮಾಡಿದ್ದಾರೆ. ‘ನಮ್ಮಿಬ್ಬರ ಕಡೆಯಿಂದ ಜೈ ಶ್ರೀ ರಾಮ್. ಇಂದು ರಾಮನ ಆರಾಧಿಸುವ ಎಲ್ಲರಿಗೂ ದೊಡ್ಡ ದಿನ. ಹಲವು ಶತಮಾನಗಳ ಬಳಿಕ ರಾಮ ಅಯೋಧ್ಯೆಗೆ ಮರಳುತ್ತಿದ್ದಾನೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ‘ಸಣ್ಣ ವಯಸ್ಸಿನಿಂದ ಈ ಬಗ್ಗೆ ಕೇಳುತ್ತಲೇ ಬರುತ್ತಿದ್ದೇವೆ. ಆ ಕ್ಷಣಕ್ಕೆ ನಾವು ಕಾಯುತ್ತಿದ್ದೇವೆ’ ಎಂದು ಟೈಗರ್ ಶ್ರಾಫ್ ಹೇಳಿದ್ದಾರೆ.

ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಜನಿಕಾಂತ್, ಅನುಪಮ್ ಖೇರ್, ಕಂಗನಾ ರಣಾವತ್ ಸೇರಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ರಿಷಬ್ ಶೆಟ್ಟಿ, ನಿಖಿಲ್ ಕುಮಾರ್, ಚಿರಂಜೀವಿ, ರಾಮ್ ಚರಣ್ ಮೊದಲಾದವರು ಅಯೋಧ್ಯೆಗೆ ತೆರಳಿದ್ದಾರೆ.


ಇದನ್ನೂ ಓದಿ: 50ನೇ ವಯಸ್ಸಿಗೆ ಪದವಿ ಪಡೆದ ಟ್ವಿಂಕಲ್ ಖನ್ನಾ; ಅಕ್ಷಯ್ ಕುಮಾರ್​ಗೆ ಖುಷಿಯೋ ಖುಷಿ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟ್​ನಲ್ಲಿ ಇವರು ಬ್ಯುಸಿ ಇದ್ದಾರೆ. ಪೃಥ್ವಿರಾಜ್​ ಸುಕುಮಾರನ್ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ರಿಲೀಸ್​ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ