Sign In

By signing in or creating an account, you agree with Associated Broadcasting Company's Terms & Conditions and Privacy Policy.

50ನೇ ವಯಸ್ಸಿಗೆ ಪದವಿ ಪಡೆದ ಟ್ವಿಂಕಲ್ ಖನ್ನಾ; ಅಕ್ಷಯ್ ಕುಮಾರ್​ಗೆ ಖುಷಿಯೋ ಖುಷಿ

ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಪರಸ್ಪರ ಪ್ರೀತಿಸಿ ಮದುವೆ ಆದರು. ಅವರ ದಾಂಪತ್ಯಕ್ಕೆ 23 ವರ್ಷ ತುಂಬಿದೆ. ಪತ್ನಿ ಓದುತ್ತೇನೆ ಎಂದಾಗ ಅಕ್ಷಯ್ ಕುಮಾರ್ ಬೆಂಬಲ ನೀಡಿದರು. ಈ ಬೆಂಬಲದಿಂದ ಟ್ವಿಂಕಲ್ ಅವರು ಪದವಿ ಪೂರ್ಣಗೊಳಿಸಿದ್ದಾರೆ.

50ನೇ ವಯಸ್ಸಿಗೆ ಪದವಿ ಪಡೆದ ಟ್ವಿಂಕಲ್ ಖನ್ನಾ; ಅಕ್ಷಯ್ ಕುಮಾರ್​ಗೆ ಖುಷಿಯೋ ಖುಷಿ
ಅಕ್ಷಯ್​-ಟ್ವಿಂಕಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 17, 2024 | 2:41 PM

ನಟ ಅಕ್ಷಯ್ ಕುಮಾರ್ (Akshay Kumar) ಅವರ ಪತ್ನಿ ಟ್ವಿಂಕಲ್ ಖನ್ನಾ ನಟಿಯಾಗಿ ಈ ಮೊದಲು ಗುರುತಿಸಿಕೊಂಡರು. ನಂತರ ಅವರು ನಟನೆ ತೊರೆದರು. ಆ ಬಳಿಕ ಅಂಕಣಕಾರ್ತಿಯಾಗಿ, ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡರು. ತಮ್ಮ ವ್ಯಂಗ್ಯಾತ್ಮಕ ಬರವಣಿಗೆಯ ಶೈಲಿಯಿಂದ ಅವರು ಹೆಸರುವಾಸಿಯಾಗಿದ್ದಾರೆ. ಈಗ ಅವರು ಸುದ್ದಿಯಲ್ಲಿದ್ದಾರೆ. ಹಾಗಂತ ಅವರು ಮತ್ತೆ ನಟನೆಗೆ ಬರುತ್ತಿಲ್ಲ. ಅವರ ಅಪೂರ್ಣ ಕನಸನ್ನು ನನಸಾಗಿಸಿಕೊಂಡಿದ್ದಾರೆ. 50ನೇ ವಯಸ್ಸಿನಲ್ಲಿ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಟ್ವಿಂಕಲ್ ಅವರನ್ನು ಹೊಗಳಿದ್ದಾರೆ. ಈ ಫೋಟೋದಲ್ಲಿ ಟ್ವಿಂಕಲ್ ಪದವಿ ಕ್ಯಾಪ್ ಧರಿಸಿ ಮಿಂಚಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಪ್ರೀತಿಸಿ ಮದುವೆ ಆದರು. ಅವರ ದಾಂಪತ್ಯಕ್ಕೆ ಇಂದಿಗೆ (ಜನವರಿ 17) 23 ವರ್ಷ ತುಂಬಿದೆ. ಪತ್ನಿ ಓದುತ್ತೇನೆ ಎಂದಾಗ ಅಕ್ಷಯ್ ಕುಮಾರ್ ಬೆಂಬಲ ನೀಡಿದರು. ಈ ಬೆಂಬಲದಿಂದ ಟ್ವಿಂಕಲ್ ಅವರು ಪದವಿ ಪೂರ್ಣಗೊಳಿಸಿದ್ದಾರೆ. ಈ ಸಂತೋಷದ ಕ್ಷಣವನ್ನು ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಂಕಲ್​ಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

‘ಎರಡು ವರ್ಷಗಳ ಹಿಂದೆ ನೀನು ಮತ್ತೆ ಓದಬೇಕು ಎಂದು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆದರೆ ನೀನು ಅದಕ್ಕಾಗಿ ಶ್ರಮಿಸುತ್ತಿರುವುದನ್ನು ನೋಡಿದಾಗ ನಾನು ಸೂಪರ್ ವುಮನ್ ಮದುವೆಯಾಗಿದ್ದೇನೆ ಎಂಬುದು ಗೊತ್ತಾಯಿತು. ಮನೆ, ವೃತ್ತಿ ಬದುಕು, ಮಕ್ಕಳ ಪಾಲನೆ ಜೊತೆ ವಿದ್ಯಾರ್ಥಿ ಜೀವನವನ್ನು ನೀನು ಚೆನ್ನಾಗಿ ನಿರ್ವಹಿಸಿದ್ದೀಯ. ನಾನು ಸ್ವಲ್ಪ ಹೆಚ್ಚು ಅಧ್ಯಯನ ಮಾಡಿದ್ದರೆ ನಿನ್ನ ಬಗ್ಗೆ ಎಷ್ಟು ಹೆಮ್ಮೆಪಡುತ್ತೇನೆ ಎಂದು ಹೇಳಲು ಸಾಕಷ್ಟು ಪದಗಳು ಸಿಗುತ್ತಿದ್ದವು ಎಂದು ನನಗೆ ಅನಿಸುತ್ತಿದೆ. ಟೀನಾ.. ಆಲ್ ದಿ ಬೆಸ್ಟ್ ಮತ್ತು ಐ ಲವ್ ಯೂ’ ಎಂದು ಅಕ್ಷಯ್ ಕುಮಾರ್ ತಮ್ಮ ಭಾವನೆಗಳನ್ನು ಶಬ್ದಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಅಕ್ಷಯ್ ಅವರ ಈ ಪೋಸ್ಟ್‌ಗೆ ಟ್ವಿಂಕಲ್ ಕೂಡ ಕಾಮೆಂಟ್ ಮಾಡಿದ್ದಾರೆ. ‘ನನಗೆ ಎತ್ತರಕ್ಕೆ ಹಾರಲು ಪ್ರೋತ್ಸಾಹಿಸುವ ನಿನ್ನಂತ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಬಿದ್ದಾಗ ನನ್ನನ್ನು ಎತ್ತಿಕೊಳ್ಳಲು ನೀನು ಯಾವಾಗಲೂ ಸಿದ್ಧನಾಗಿರುತ್ತೀಯಾ. ನಮ್ಮ ದಾಂಪತ್ಯಕ್ಕೆ 23 ವರ್ಷಗಳು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

2022ರಲ್ಲಿ ಟ್ವಿಂಕಲ್ ಲಂಡನ್ ವಿಶ್ವವಿದ್ಯಾಲಯದ ಗೋಲ್ಡ್ ಸ್ಮಿತ್ಸ್‌ನಲ್ಲಿ ಫಿಕ್ಷನ್ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಅರ್ಜಿ ಸಲ್ಲಿಸಿದರು. ಆ ಸಮಯದಲ್ಲಿ ಅಕ್ಷಯ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ಜನರು ತಮ್ಮ ಮಕ್ಕಳನ್ನು ಶಾಲೆ ಮತ್ತು ಕಾಲೇಜುಗಳಿಗೆ ಬಿಡಲು ಹೋಗುತ್ತಾರೆ. ಆದರೆ ನಾನು ನನ್ನ ಹೆಂಡತಿಯನ್ನು ಲಂಡನ್‌ನ ವಿಶ್ವವಿದ್ಯಾಲಯಕ್ಕೆ ಬಿಡುತ್ತಿದ್ದೇನೆ. ಏಕೆಂದರೆ ಅವಳು ಪದವಿ ಪಡೆಯಲು ಬಯಸುತ್ತಿದ್ದಾಳೆ’ ಎಂದಿದ್ದರು ಅಕ್ಷಯ್ ಕುಮಾರ್.

ಅಕ್ಷಯ್ ಕುಮಾರ್ ಅವರು ಬ್ಯಾಕ್​ ಟು ಬ್ಯಾಕ್ ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕಳೆದ ವರ್ಷ ಅವರ ನಟನೆಯ ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. ಈ ವರ್ಷವೂ ಅವರ ಒಂದಷ್ಟು ಚಿತ್ರಗಳು ರಿಲೀಸ್​ಗೆ ರೆಡಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ