ಫೋಟೋ ತೆಗ್ದಿಲ್ಲ ಅಂದ್ರೇನೆ ಸಮಸ್ಯೆ; ಅಕ್ಷಯ್ ಕುಮಾರ್ ನೇರ ಮಾತು

ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಪರಾಜಿ ಸಂಸ್ಕೃತಿಯ ಬಗ್ಗೆ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಫೋಟೋ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅಕ್ಷಯ್ "ಫೋಟೋ ತೆಗೆದಿಲ್ಲ ಅಂದ್ರೇನೆ ಸಮಸ್ಯೆ" ಎನ್ನುತ್ತಾರೆ. ಇದರಿಂದ ಪಾಪರಾಜಿಗಳಿಗೆ ಆದಾಯ ಸಿಗುತ್ತದೆ ಮತ್ತು ತನ್ನ ಬೇಡಿಕೆ ಕಡಿಮೆಯಾಗಿಲ್ಲ ಎಂದು ಸೂಚಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ಫೋಟೋ ತೆಗ್ದಿಲ್ಲ ಅಂದ್ರೇನೆ ಸಮಸ್ಯೆ; ಅಕ್ಷಯ್ ಕುಮಾರ್ ನೇರ ಮಾತು
ಅಕ್ಷಯ್
Edited By:

Updated on: Mar 28, 2026 | 7:51 AM

ಬಾಲಿವುಡ್, ಸ್ಯಾಂಡಲ್​​ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲೂ ಪಾಪರಾಜಿ ಸಂಸ್ಕೃತಿ ಜೋರಾಗಿದೆ. ಸೆಲೆಬ್ರಿಟಿಗಳು ಎಲ್ಲೇ ಕಾಣಿಸಿಕೊಂಡರೂ ಫೋಟೋ ಕ್ಲಿಕ್ಕಿಸುತ್ತಾರೆ, ವಿಡಿಯೋ ಸೆರೆ ಹಿಡಿಯಲಾಗುತ್ತದೆ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗುತ್ತದೆ. ಈ ವಿಷಯ ಸಾಕಷ್ಟು ಚರ್ಚೆ ಆಗುತ್ತಿದೆ ಎಂದೇ ಹೇಳಬಹುದು. ಕೆಲವರು ಇದನ್ನು ವಿರೋಧಿಸಿದರೆ, ಇನ್ನೂ ಕೆಲವರು ಇದನ್ನು ಬೆಂಬಲಿಸುತ್ತಿದ್ದಾರೆ. ಹೀಗಿರುವಾಗಲೇ ಅಕ್ಷಯ್ ಕುಮಾರ್ ಅವರು ಈ ವಿಷಯವಾಗಿ ಮಾತನಾಡಿದ್ದಾರೆ. ಫೋಟೋ ತೆಗೆದಿಲ್ಲ ಅಂದ್ರೇನೆ ಸಮಸ್ಯೆ ಅಂತ ಅವರು ನೇರವಾಗಿ ಹೇಳೀದ್ದಾರೆ.

ಬಾಲಿವುಡ್​​​ ಅಲ್ಲಿ ಜಯಾ ಬಚ್ಚನ್ ಸೇರಿದಂತೆ ಅನೇಕರು ಇದ್ದಾರೆ. ಅವರಿಗೆ ಪಾಪರಾಜಿಗಳನ್ನು ಕಂಡರೆ ಸಾಕು ಸಾಕಷ್ಟು ಕೋಪ ಬರುತ್ತದೆ. ಅವರು ಸಿಡಿದೇಳುತ್ತಾರೆ. ಆದರೆ, ಅಕ್ಷಯ್ ಕುಮಾರ್ ಅವರು ಆ ರೀತಿ ಅಲ್ಲ. ತಾವು ಸೆಲೆಬ್ರಿಟಿ ಎಂಬುದನ್ನು ಒಪ್ಪಿಕೊಂಡಿದ್ದು, ಫೋಟೋ ಕ್ಲಿಕ್ಕಿಸಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

‘ನಾನು ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುತ್ತೇನೆ. ಕೆಲವೊಮ್ಮೆ ನನ್ನ ಮಕ್ಕಳು, ಪತ್ನಿ ಕೂಡ ಇರ್ತಾರೆ. ನನ್ನ ಫೋಟೋ ಕ್ಲಿಕ್ಕಿಸಿದ್ರೆ ಅವನಿಗೆ ದುಡ್ಡು ಸಿಗುತ್ತೆ. ಅವನಿಗೆ ದುಡ್ಡು ಸಿಗುತ್ತೆ ಅಂದ್ರೆ ಫೋಟೋ ಕ್ಲಿಕ್ಕಿಸಿಕೊಳ್ಳಲಿ. ತೊಂದರೆ ಏನಿದೆ’ ಎಂದು ಅಕ್ಷಯ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

‘ನನ್ನ ಫೋಟೋ ತೆಗೆದರೆ ಅವನ ಮನೆ ನಡೆಯುತ್ತೆ. ಆತ ಖುಷಿ ಪಡುತ್ತಾನೆ. ಪ್ರೈವಸಿ ಅನ್ನೋದು ಎಲ್ಲಿದೆ? ಫೋಟೋ ತೆಗೆದಿಲ್ಲ ಅಂದ್ರೇನೆ ಸಮಸ್ಯೆ. ಆಗ ಯೋಚಿಸಬೇಕು. ಆಗ ಸಮಸ್ಯೆ ಬರುತ್ತದೆ. ನಾನು ಎಲ್ಲಾದರೂ ಬಂದಾಗ ಫೋಟೋ ಕ್ಲಿಕ್ಕಸಿಲು ಜನರೇ ಬಂದಿಲ್ಲ ಎಂದ್ರೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅವರು ಒಂದು ಕಾಲದಲ್ಲಿ ಸಾಕಷ್ಟು ಬೇಡಿಕೆಯ ಹೀರೋ ಆಗಿದ್ದರು. ಆದರೆ, ಇತ್ತೀಚೆಗೆ ಬೇಡಿಕೆ ಕಡಿಮೆ ಆಗಿದೆ. ಅವರ ‘ಭೂತ್ ಬಂಗ್ಲಾ 2’ ಸಿನಿಮಾ ರಿಲೀಸ್ ಆಗುವುದರಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us