ಅಕ್ಷಯ್ ಕುಮಾರ್ಗೆ ಯಾಕೋ ಅದೃಷ್ಟ ಕೈ ಹಿಡಿಯುವ ರೀತಿ ಕಾಣಿಸುತ್ತಿಲ್ಲ. ಸೋಲು ಬೆಂಬಿಡದೆ ಅವರನ್ನು ಕಾಡುತ್ತಿದೆ. ಮಾಡಿದ ಪ್ರತಿ ಸಿನಿಮಾ ಸೋಲುತ್ತಿದೆ. ಅವರ ಸಿನಿಮಾಗಳ ಬಗ್ಗೆ ಜನರು ಆಸಕ್ತಿಯನ್ನೇ ಕಳೆದುಕೊಂಡರೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಈಗ ಅವರ ನಟನೆಯ ‘ಖೇಲ್ ಖೇಲ್ ಮೇ’ ಸಿನಿಮಾ ಕೂಡ ಸೋಲುವ ಭಿತಿಯಲ್ಲಿ ಇದೆ. ಅತ್ತ ‘ಸ್ತ್ರಿ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರುವ ಸನಿಹದಲ್ಲಿ ಇದ್ದರೆ ಅಕ್ಷಯ್ ಕುಮಾರ್ ಚಿತ್ರ 15 ಕೋಟಿ ರೂಪಾಯಿ ಗಳಿಸಲು ಒದ್ದಾಡುತ್ತಿದೆ.
ಆಗಸ್ಟ್ 15ರ ಪ್ರಯುಕ್ತ ‘ಖೇಲ್ ಖೇಲ್ ಮೇ’ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 5 ಕೋಟಿ ರೂಪಾಯಿ. ಆ ಬಳಿಕ ಎರಡನೇ ದಿನ 2 ಕೋಟಿ ರೂಪಾಯಿ, ಮೂರನೇ ದಿನ 3.1 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 3.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 13.95 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ ನಾಲ್ಕು ದಿನಗಳಲ್ಲಿ 15 ಕೋಟಿ ತಲುಪೋದು ಕಷ್ಟ ಆಗಿದೆ ಅನ್ನೋದು ಬೇಸರದ ಸಂಗತಿ.
ಅಕ್ಷಯ್ ಕುಮಾರ್ ಅವರು ಪ್ರತಿ ಚಿತ್ರಕ್ಕೆ 50-60 ಕೋಟಿ ರೂಪಾಯಿ ಪಡೆಯುತ್ತಾರೆ. ಆದರೆ, ಅವರ ಸಿನಿಮಾ ಅಕ್ಷಯ್ ಕುಮಾರ್ ಸಂಭಾವನೆಯ ಅರ್ಧದಷ್ಟೂ ಗಳಿಕೆ ಮಾಡುತ್ತಿಲ್ಲ. ಈ ವರ್ಷ ರಿಲೀಸ್ ಆದ ಅವರ ನಟನೆಯ ಮೂರನೇ ಸಿನಿಮಾ ಇದು. ಈ ಚಿತ್ರವೂ ಸೋಲಿನ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದೆ. ಈ ಮೊದಲು ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಸಿನಿಮಾಗಳು ರಿಲೀಸ್ ಆಗಿ ಸೋತಿವೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾ ಆಯ್ಕೆ ಬಗ್ಗೆ ಆಪ್ತರಿಂದಲೇ ಮೂಡಿದೆ ಪ್ರಶ್ನೆ; ಬೇಸರ ಹೊರಹಾಕಿದ ನಟ
2020ರಿಂದ ಈಚೆ ಅವರ ನಟನೆಯ ಬಹುತೇಕ ಸಿನಿಮಾಗಳು ಸೋತಿವೆ. ‘ಲಕ್ಷ್ಮಿ’, ‘ಬೆಲ್ ಬಾಟಂ’, ‘ಅತ್ರಂಗಿ ರೇ’, ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ಕಟ್ಪುಟ್ಲಿ’, ‘ರಾಮ್ ಸೇತು’, ‘ಸೆಲ್ಫೀ’, ‘ಮಿಷನ್ ರಾಣಿಗಂಜ್’, ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಸೋತ ಸಿನಿಮಾಗಳ ಸಾಲಿನಲ್ಲಿ ನಿಂತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.