80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್​ ಅವರು ಸತತ ಸೋಲು ಕಾಣುತ್ತಿದ್ದಾರೆ. ಅದರ ಜೊತೆಗೆ ಮನೆ ಮಾರಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ. 80 ಕೋಟಿ ರೂಪಾಯಿ ಬೆಲೆಯ ಅಪಾರ್ಟ್​ಮೆಂಟ್​ ಅನ್ನು ಈಗ ಅಕ್ಷಯ್​ ಕುಮಾರ್ ಮಾರಿದ್ದಾರೆ. ಜ.31ರಂದು ಈ ವ್ಯವಹಾರ ನಡೆಸಲಾಗಿದೆ ಎಂದು ಸುದ್ದಿ ಪ್ರಕಟ ಆಗಿದೆ.

80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
Akshay Kumar

Updated on: Feb 06, 2025 | 9:13 PM

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಕ್ಸಸ್ ರೇಟ್ ಮೊದಲಿನಂತಿಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ನಟಿಸಿದ ಎಲ್ಲ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಆದ್ದರಿಂದ ಅವರಿಗೆ ನಿಧಾನವಾಗಿ ಡಿಮ್ಯಾಂಡ್ ಕಡಿಮೆ ಆಗುತ್ತಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಅವರು ಆಸ್ತಿ ಮಾರುತ್ತಿದ್ದಾರೆ ಎಂಬುದು ಶಾಕಿಂಗ್ ಸಂಗತಿ. ಮುಂಬೈನಲ್ಲಿ ತಾವು ಹೊಂದಿದ್ದ ಬಹುಕೋಟಿ ರೂಪಾಯಿ ಬೆಲೆಬಾಳುವ ಅಪಾರ್ಟ್​ಮೆಂಟ್ ಮಾರಿದ್ದಾರೆ ಎಂದು ಸುದ್ದಿ ಆಗಿದೆ. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಮುಂಬೈನ ವರ್ಲಿಯಲ್ಲಿ ಇರುವ 360 ವೆಸ್ಟ್ ಟವರ್​ನಲ್ಲಿ ಅಕ್ಷಯ್ ಕುಮಾರ್ ಅವರು ಅಪಾರ್ಟ್​ಮೆಂಟ್ ಹೊಂದಿದ್ದರು. 39ನೇ ಮಹಡಿಯಲ್ಲಿ ಇರುವ ಈ ಅಪಾರ್ಟ್​ಮೆಂಟ್​ ಈಗ ಮಾರಾಟ ಆಗಿದೆ. ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ಬರೋಬ್ಬರಿ 80 ಕೋಟಿ ರೂಪಾಯಿಗೆ ಈ ಆಸ್ತಿ ಮಾರಿದ್ದಾರೆ. ಹಾಗಾದರೆ ಅಕ್ಷಯ್ ಕುಮಾರ್ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

ಜನವರಿ 31ರಂದು ಈ ವ್ಯವಹಾರ ನಡೆದಿದೆ. 6830 ಚದರ ಅಡಿ ವಿಸ್ತೀರ್ಣ ಇರುವ ಈ ಅಪಾರ್ಟ್​ಮೆಂಟ್​ಗೆ 4 ಕಾರು ಪಾರ್ಕಿಂಗ್ ಜಾಗ ಕೂಡ ಇದೆ. ವರದಿಗಳ ಪ್ರಕಾರ, ಪಲ್ಲವಿ ಜೈನ್ ಎಂಬುವವರು ಈ ಆಸ್ತಿಯನ್ನು ಖರೀದಿ ಮಾಡಿದ್ದಾರೆ. 4.8 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಕಟ್ಟಲಾಗಿದೆ. ಮುಂಬೈನಲ್ಲಿ ಇದು ತುಂಬ ಕಮರ್ಷಿಯಲ್ ಆದ ಜಾಗ. ಹಾಗಾಗಿ ಅತಿ ದುಬಾರಿ ಬೆಲೆಗೆ ಈ ಅಪಾರ್ಟ್​ಮೆಂಟ್ ಮಾರಾಟ ಆಗಿದೆ.

ಇದನ್ನೂ ಓದಿ: ‘ನನ್ನನ್ನು ತೆಗೆದು ಹಾಕಲಾಯಿತು’; ಬಿಗ್ ಬಜೆಟ್​ ಸಿನಿಮಾದಿಂದ ಹೊರಗಿಟ್ಟಿದ್ದಕ್ಕೆ ಅಕ್ಷಯ್ ಬೇಸರ

ವೃತ್ತಿಜೀವನದ ಬಗ್ಗೆ ಹೇಳುವುದಾದರೆ ಅಕ್ಷಯ್​ ಕುಮಾರ್​ ಅವರಿಗೆ ನಿಜಕ್ಕೂ ಅದೃಷ್ಟ ಕೈ ಕೊಟ್ಟಿದೆ. ಅವರು ಮಾಡಿದ ಎಲ್ಲ ಸಿನಿಮಾಗಳು ಸೋಲುತ್ತಿವೆ. ಏನೇ ಪ್ರಯತ್ನ ಮಾಡಿದರೂ ಪ್ರೇಕ್ಷಕರನ್ನು ಮೆಚ್ಚಿಸಲು ಅಕ್ಷಯ್ ಕುಮಾರ್​ ಅವರಿಗೆ ಸಾಧ್ಯವಾಗುತ್ತಿಲ್ಲ. ಈ ವರ್ಷ ಜನವರಿ 24ರಂದು ಅವರು ನಟಿಸಿದ ‘ಸ್ಕೈ ಫೋರ್ಸ್​’ ಸಿನಿಮಾ ಬಿಡುಗಡೆ ಆಯಿತು. ಬಾಕ್ಸ್ ಆಫೀಸ್​ನಲ್ಲಿ ಆ ಚಿತ್ರ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲು ವಿಫಲ ಆಯಿತು. ನೆಗೆಟಿವ್ ವಿಮರ್ಶೆ ಸಿಕ್ಕಿದ್ದರಿಂದ ಪ್ರೇಕ್ಷಕರು ಆ ಸಿನಿಮಾ ಮೇಲೆ ಆಸಕ್ತಿ ತೋರಿಸಲಿಲ್ಲ. ಅದರ ಬೆನ್ನಲ್ಲೇ ಅಕ್ಷಯ್​ ಕುಮಾರ್​ ಅವರು ಅಪಾರ್ಟ್​ಮೆಂಟ್ ಮಾರಿಕೊಂಡಿರುವ ಬಗ್ಗೆ ಸುದ್ದಿ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:13 pm, Thu, 6 February 25