ಅಕ್ಷಯ್​ ಕುಮಾರ್​ ಆ್ಯಕ್ಷನ್ ಸೀನ್ ಕದಿಯುವುದು ಎಲ್ಲಿಂದ? ಸ್ವತಃ ಒಪ್ಪಿಕೊಂಡ ನಟ

|

Updated on: Aug 11, 2024 | 10:59 PM

ಸಿನಿಮಾಗಳಲ್ಲಿ ನಟ ಅಕ್ಷಯ್​ ಕುಮಾರ್​ ಮಾಡುವ ಆ್ಯಕ್ಷನ್​ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಎಂಜಾಯ್​ ಮಾಡುತ್ತಾ ಬಂದಿದ್ದಾರೆ. ಅವುಗಳ ಹಿಂದಿನ ರಹಸ್ಯವನ್ನು ಈಗ ಅಕ್ಷಯ್​ ಕುಮಾರ್​ ಬಹಿರಂಗಪಡಿಸಿದ್ದಾರೆ. ‘ಟಾಮ್​ ಆ್ಯಂಡ್​ ಜೆರಿ’ ಕಾರ್ಟೂನ್​ ಶೋನಿಂದ ತಾವು ಆ್ಯಕ್ಷನ್​ ಕಾನ್ಸೆಪ್ಟ್​ ಕಾಪಿ ಮಾಡಿರುವುದಾಗಿ ಅಕ್ಷಯ್​ ಕುಮಾರ್​ ಒಪ್ಪಿಕೊಂಡಿದ್ದಾರೆ.

ಅಕ್ಷಯ್​ ಕುಮಾರ್​ ಆ್ಯಕ್ಷನ್ ಸೀನ್ ಕದಿಯುವುದು ಎಲ್ಲಿಂದ? ಸ್ವತಃ ಒಪ್ಪಿಕೊಂಡ ನಟ
ಅಕ್ಷಯ್​ ಕುಮಾರ್​
Follow us on

ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅಕ್ಷಯ್​ ಕುಮಾರ್​ ಅವರು ಸೈ ಎನಿಸಿಕೊಂಡಿದ್ದಾರೆ. ಕಾಮಿಡಿ, ಆ್ಯಕ್ಷನ್​ ಎರಡರಲ್ಲೂ ಅವರು ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಬಯೋಪಿಕ್​ಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ. ಈಗ ಅವರು ನಟಿಸಿರುವ ‘ಖೇಲ್​ ಖೇಲ್​ ಮೇ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್​ 15ರಂದು ಈ ಚಿತ್ರ ತೆರೆಕಾಣಲಿದೆ. ‘ಸ್ತ್ರೀ 2’, ‘ವೇದಾ’ ಸಿನಿಮಾಗಳ ಭಾರಿ ಪೈಪೋಟಿ ನಡುವೆ ಖೇಲ್​ ಖೇಲ್​ ಮೇ’ ತೆರೆಕಾಣುತ್ತಿದೆ. ಈ ಸಿನಿಮಾದ ಬಗ್ಗೆ ಮಾತನಾಡುವಾಗ ಅಕ್ಷಯ್​ ಕುಮಾರ್ ಅವರು ಒಂದು ರಹಸ್ಯವನ್ನು ಬಯಲು ಮಾಡಿದ್ದಾರೆ.

ಹೆಲಿಕಾಪ್ಟರ್​ ಸೀನ್​ ಸೇರಿದಂತೆ ಹತ್ತಾರು ಬಗೆಯ ಆ್ಯಕ್ಷನ್​ ದೃಶ್ಯ​ಗಳ ಮೂಲಕ ಅಕ್ಷಯ್​ ಕುಮಾರ್​ ಅವರು ಫೇಮಸ್​ ಆಗಿದ್ದಾರೆ. ಅಷ್ಟಕ್ಕೂ ಅವರು ಇಂಥ ದೃಶ್ಯಗಳನ್ನು ಎಲ್ಲಿಂದ ಕದಿಯುತ್ತಾರೆ ಗೊತ್ತಾ? ‘ಟಾಮ್​ ಆ್ಯಂಡ್ ಜೆರಿ’ ಕಾರ್ಟೂನ್​ ಶೋನಿಂದ! ಈ ವಿಚಾರವನ್ನು ಸ್ವತಃ ಅಕ್ಷಯ್​ ಕುಮಾರ್​ ಅವರು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ನ್ಯಾಷನಲ್​ ಜಿಯೋಗ್ರಾಫಿಕ್​ ಚಾನಲ್​​ ನೋಡಿಗೂ ಆ್ಯಕ್ಷನ್​ ದೃಶ್ಯಕ್ಕೆ ಕಾನ್ಸೆಪ್ಟ್​ ಕಾಪಿ ಮಾಡಿರುವ ಬಗ್ಗೆ ಅಕ್ಷಯ್​ ಕುಮಾರ್​ ಮಾತನಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಖೇಲ್​ ಖೇಲ್​ ಮೇ’ ಸಿನಿಮಾದ ನಟ ಫರ್ದೀನ್​ ಖಾನ್​ ಅವರು, ‘ಟಾಮ್​ ಆ್ಯಂಡ್​ ಜೆರಿ ನನ್ನ ಮೆಚ್ಚಿನ ಕಾಮಿಡಿ ಕಾರ್ಟೂನ್​ ಶೋ’ ಎಂದು ಹೇಳಿದರು. ಆ ಮಾತಿಗೆ ಆಕ್ಷೇಪ ಎತ್ತಿದ ಅಕ್ಷಯ್​ ಕುಮಾರ್​ ಅವರು, ಅದು ಕಾಮಿಡಿ ಶೋ ಅಲ್ಲ ಎಂದು ವಾದಿಸಿದರು. ತಮ್ಮ ಈ ಅಭಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದರು.

ಇದನ್ನೂ ಓದಿ:  ಹಾಜಿ ಅಲಿ ದರ್ಗಾ ನವೀಕರಣಕ್ಕೆ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​

‘ಟಾಮ್​ ಆ್ಯಂಡ್ ಜೆರಿ ಕಾಮಿಡಿ ಶೋ ಅಲ್ಲ. ಅದು ಆ್ಯಕ್ಷನ್​ ಮತ್ತು ಕೌರ್ಯ. ನಾನು ಒಂದು ರಹಸ್ಯವನ್ನು ನಿಮಗೆ ಹೇಳುತ್ತೇನೆ. ನಾನು ಹಲವು ಸಿನಿಮಾಗಳಲ್ಲಿ ಮಾಡಿದ ಆ್ಯಕ್ಷನ್​ ದೃಶಗಳನ್ನು ತೆಗೆದುಕೊಂಡಿದ್ದೇ ಟಾಮ್​ ಆ್ಯಂಡ್ ಜೆರಿಯಿಂದ. ಹೆಲಿಕಾಪ್ಟರ್​ ದೃಶ್ಯವನ್ನು ಪೂರ್ತಿಯಾಗಿ ತೆಗೆದುಕೊಂಡಿದ್ದೇ ಈ ಕಾರ್ಟೂನ್​ನಿಂದ. ಅದೇ ರೀತಿ ನ್ಯಾಷನಲ್​ ಜಿಯೋಗ್ರಾಫಿಕ್​ ಚಾನಲ್​ನಿಂದಲೂ ತೆಗೆದುಕೊಂಡಿದ್ದೇವೆ. ಅಲ್ಲಿಯೂ ನಿಮಗೆ ದೊಡ್ಡ ಆ್ಯಕ್ಷನ್​ ಕಾಣಿಸುತ್ತದೆ’ ಎಂದು ಅಕ್ಷಯ್​ ಕುಮಾರ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಗುಟ್ಕಾ ಪ್ರಚಾರ ಮಾಡುವವರಿಗೆ ಹೊಡೆಯಬೇಕು, ಅಕ್ಷಯ್​ ಕುಮಾರ್​ಗೆ ನಾನು ಬೈಯ್ದಿದ್ದೇನೆ’: ಮುಖೇಶ್​ ಖನ್ನಾ

ಅಕ್ಷಯ್​ ಕುಮಾರ್​ ಅವರು ನಟಿಸಿದ ಈ ಹಿಂದಿನ ಸಿನಿಮಾಗಳಾದ ‘ಬಡೆ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’, ‘ಮಿಷನ್​ ರಾಣಿಗಂಜ್​’, ‘ಸೆಲ್ಫಿ’, ‘ರಾಮ್​ ಸೇತು’ ಮುಂತಾದ ಸಿನಿಮಾಗಳು ಸಾಲು ಸಾಲಾಗಿ ಸೋತಿವೆ. ಈಗ ಅವರು ‘ಖೇಲ್​ ಖೇಲ್​ ಮೇ’ ಸಿನಿಮಾದಿಂದ ಗೆಲ್ಲುತ್ತಾರೋ ಅಥವಾ ಇಲ್ಲವೋ ಎಂಬುದು ಆಗಸ್ಟ್​ 15ರಂದು ಗೊತ್ತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.