‘ಗುಟ್ಕಾ ಪ್ರಚಾರ ಮಾಡುವವರಿಗೆ ಹೊಡೆಯಬೇಕು, ಅಕ್ಷಯ್​ ಕುಮಾರ್​ಗೆ ನಾನು ಬೈಯ್ದಿದ್ದೇನೆ’: ಮುಖೇಶ್​ ಖನ್ನಾ

‘ಬಾಯಲ್ಲಿ ಹೇಳಿ ಕೇಸರಿ’ ಎನ್ನುವ ಸ್ಟಾರ್​ ನಟರಿಗೆ ಮುಖೇಶ್​ ಖನ್ನಾ ಛೀಮಾರಿ ಹಾಕಿದ್ದಾರೆ. ‘ಇಂಥವರಿಗೆ ಹೊಡೆಯಬೇಕು’ ಎಂದು ಅವರು ಸಖತ್​ ಖಾರವಾಗಿ ಹೇಳಿದ್ದಾರೆ. ಅಕ್ಷಯ್​ ಕುಮಾರ್​, ಶಾರುಖ್​ ಖಾನ್​, ಅಜಯ್​ ದೇವಗನ್​ ಮುಂತಾದ ನಟರು ಈ ರೀತಿಯ ಜಾಹೀರಾತಿನಲ್ಲಿ ನಟಿಸಿದ್ದನ್ನು ಮುಖೇಶ್​ ಖನ್ನಾ ಅವರು ಖಂಡಿಸಿ ಮಾತನಾಡಿದ್ದಾರೆ.

‘ಗುಟ್ಕಾ ಪ್ರಚಾರ ಮಾಡುವವರಿಗೆ ಹೊಡೆಯಬೇಕು, ಅಕ್ಷಯ್​ ಕುಮಾರ್​ಗೆ ನಾನು ಬೈಯ್ದಿದ್ದೇನೆ’: ಮುಖೇಶ್​ ಖನ್ನಾ
ಮುಖೇಶ್​ ಖನ್ನಾ, ಅಕ್ಷಯ್​ ಕುಮಾರ್​, ಅಜಯ್ ದೇವಗನ್​ ಶಾರುಖ್​ ಖಾನ್​
Follow us
|

Updated on:Aug 11, 2024 | 9:20 PM

ಬಾಲಿವುಡ್​ನ ಕೆಲವು ಟಾಪ್​ ನಟರು ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಂಥವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದುಂಟು. ಪಾನ್​ ಮಸಾಲಾ ಅಥವಾ ಅಡಿಕೆ ಪುಡಿ ಹೆಸರಿನಲ್ಲಿ ಗುಟ್ಕಾ ಮಾರಾಟ ಮಾಡಲಾಗುತ್ತದೆ. ಅವುಗಳ ಜಾಹೀರಾತಿನಲ್ಲಿ ಸ್ಟಾರ್​ ನಟರು ಕಾಣಿಸಿಕೊಳ್ಳುವುದಕ್ಕೆ ಬಾಲಿವುಡ್​ನ ಹಿರಿಯ ನಟ ಮುಖೇಶ್​ ಖನ್ನಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತುಂಬ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಕ್ಷಯ್​ ಕುಮಾರ್​, ಶಾರುಖ್​ ಖಾನ್​, ಅಜಯ್​ ದೇವಗನ್​ ಮುಂತಾದ ನಟರಿಗೆ ಮುಖೇಶ್​ ಖನ್ನಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ದೊಡ್ಡ ಮೊತ್ತದ ಸಂಭಾವನೆ ಪಡೆದು ಸ್ಟಾರ್​ ನಟನರು ಇಂಥ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಮುಖೇಶ್​ ಖನ್ನಾ ಉತ್ತರಿಸಿದ್ದಾರೆ. ‘ನನ್ನನ್ನು ಕೇಳಿದರೆ, ಅಂಥ ನಟರನ್ನು ಹಿಡಿದು ಹೊಡೆಯಬೇಕು ಎನ್ನುತ್ತೇನೆ. ಅವರಿಗೂ ನಾನು ಇದನ್ನು ಹೇಳಿದ್ದೇನೆ. ಅಕ್ಷಯ್​ ಕುಮಾರ್​ಗೆ ಬೈಯ್ದಿದ್ದೇನೆ. ಅವರು ಆರೋಗ್ಯದ ಬಗ್ಗೆ ಕಾಳಜಿ ಇರುವ ಮನುಷ್ಯ. ಶಾರುಖ್​ ಖಾನ್, ಅಜಯ್​ ದೇವಗನ್​ ಜೊತೆ ಅವರು ಈ ಜಾಹೀರಾತು ಮಾಡಿದ್ದಾರೆ. ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ ನೀವು ಏನು ಕಲಿಸುತ್ತಿದ್ದೀರಿ? ತಾವು ಪಾನ್​ ಮಸಾಲಾ ಮಾಡುತ್ತಿಲ್ಲ, ಅಡಿಕೆ ಪುಡಿ ಮಾರುತ್ತೇವೆ ಎನ್ನುತ್ತಾರೆ. ಆದರೆ ತಾವು ಮಾಡುತ್ತಿರುವುದು ಏನು ಅಂತ ಅವರಿಗೂ ಗೊತ್ತಿದೆ’ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

‘ನೀವು ಕಿಂಗ್​ಫಿಶರ್​ ಜಾಹೀರಾತು ಮಾಡಿದ್ದೀರಿ ಎಂದರೆ ಕಿಂಗ್​ಫಿಶರ್​ ಬಿಯರ್​ ಮಾರುತ್ತಿದ್ದೀರಿ ಅಂದರ್ಥ. ಅದು ಎಲ್ಲರಿಗೋ ಗೊತ್ತು. ಇವರೆಲ್ಲ ಯಾಕೆ ಇಂತ ಜಾಹೀರಾತು ಮಾಡುತ್ತಾರೆ? ಇವರ ಬಳಿ ಹಣ ಇಲ್ಲವೇ? ನಿಮ್ಮ ಬಳಿ ಸಾಕಷ್ಟು ಹಣ ಇದೆ, ಇಂಥದ್ದೆಲ್ಲ ಮಾಡಬೇಡಿ ಎಂದು ಆ ನಟರಿಗೂ ನಾನು ಹೇಳಿದ್ದೇನೆ. ಕೆಲವು ನಟರು ಅದರಿಂದ ಹೊರಗೆ ಬಂದಿದ್ದಾರೆ. ಅಂಥವರ ಪೈಕಿ ಅಕ್ಷಯ್​ ಕುಮಾರ್​ ಒಬ್ಬರು. ನನ್ನ ಮಾಹಿತಿ ಸರಿಯಾಗಿದ್ದರೆ ಅಮಿತಾಭ್​ ಬಚ್ಚನ್​ ಕೂಡ ಹೊರಬಂದಿದ್ದಾರೆ. ಈಗಲೂ ಇಂಥ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಜನರು ಬಾಯಲ್ಲಿ ಹೇಳಿ ಕೇಸರಿ ಎನ್ನುತ್ತಿದ್ದಾರೆ. ನೀವು ಜನರಿಗೆ ಗುಟ್ಕಾ ತಿನ್ನುವುದನ್ನು ಕಲಿಸುತ್ತಿದ್ದೀರಿ’ ಎಂದು ಮುಖೇಶ್​ ಖನ್ನಾ ಖಡಕ್​ ಆಗಿ ಹೇಳಿದ್ದಾರೆ.

ಇದನ್ನೂ ಓದಿ: ಹಾಜಿ ಅಲಿ ದರ್ಗಾ ನವೀಕರಣಕ್ಕೆ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​

ಈ ಮೊದಲು ಮುಖೇಶ್​ ಖನ್ನಾ ಅವರಿಗೂ ಇಂಥ ಜಾಹೀರಾತುಗಳ ಆಫರ್​ ಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದರು. ‘ಶಕ್ತಿಮಾನ್​’ ಧಾರಾವಾಹಿ ಮೂಲಕ ದೇಶಾದ್ಯಂತ ಸೂಪರ್​ ಹೀರೋ ಇಮೇಜ್​ ಗಳಿಸಿದ ನಟ ಅವರು. ಅನೇಕ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಅವರು ನೇರವಾಗಿ ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:44 pm, Sun, 11 August 24

ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ