ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ? ಹಿಂಟ್: ಸುದೀಪ್ ಜೊತೆಯೂ ನಟಿಸಿದ್ದಾರೆ

ಈ ಪುಟ್ಟ ಹುಡುಗಿ ಈಗ ಬಾಲಿವುಡ್​ನ ಸ್ಟಾರ್ ನಟಿ ಯಾರೆಂದು ಗುರುತಿಸಬಲ್ಲಿರಾ? ನಟಿಯಾಗಿ ಹೆಸರು ಮಾಡಿರುವ ಜೊತೆಗೆ ವಿವಾದಗಳಿಂದಲೂ ಅಷ್ಟೆ ಸುದ್ದಿಯಾಗಿದ್ದಾರೆ ಈ ನಟಿ. ಈಕೆಯ ಮೇಲೆ ಇಡಿ, ಸಿಬಿಐ ಕೇಸುಗಳು ಸಹ ಇವೆ.

ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ? ಹಿಂಟ್: ಸುದೀಪ್ ಜೊತೆಯೂ ನಟಿಸಿದ್ದಾರೆ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Aug 11, 2024 | 3:53 PM

ಬಾಲ್ಯದ ಫೋಟೋಗಳನ್ನು ಕಂಡರೆ ಫ್ಯಾನ್ಸ್​ಗೆ ಎಲ್ಲಿಲ್ಲದ ಖುಷಿ. ಈ ರೀತಿಯ ಫೋಟೋಗಳಿಗಾಗಿ ಫ್ಯಾನ್ಸ್ ಕಾಯುತ್ತಾ ಇರುತ್ತಾರೆ. ಈಗ ಸ್ಟಾರ್ ನಟಿಯ ಫೋಟೋ ಒಂದು ಅವರ ಜನ್ಮದಿನದ ಪ್ರಯುಕ್ತ ವೈರಲ್ ಆಗಿದೆ. ಅವರು ಶ್ರೀಲಂಕಾದಲ್ಲಿ ಹುಟ್ಟಿ ಬೆಳೆದಿದ್ದು. ಆ ಬಳಿಕ ಭಾರತಕ್ಕೆ ಬಂದು ಸೆಟಲ್ ಆದರು. ವಿವಾದಗಳ ಮೂಲಕವೂ ಅವರು ಆಗಾಗ ಸುದ್ದಿ ಆಗುತ್ತಾರೆ. ಹಾಗಾದರೆ ಅವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತೀರಾ? ಅವರು ಬೇರಾರೂ ಅಲ್ಲ ನಟಿ ಜಾಕ್ವೆಲಿನ್ ಫರ್ನಾಂಡಿಸ್.

ಜಾಕ್ವೆಲಿನ್ ಅವರಿಗೆ ಇಂದು (ಆಗಸ್ಟ್ 11) ಜನ್ಮದಿನ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ಅವರನ್ನು 7 ಕೋಟಿ ಮಂದಿ ಫಾಲೋ ಮಾಡುತ್ತಾರೆ. ಇಷ್ಟೊಂದು ಖ್ಯಾತಿ ಸಿಗೋದು ಅಷ್ಟು ಸುಲಭದ ಮಾತಲ್ಲ. ಇವರು ಹುಟ್ಟಿದ್ದು ಬಹ್ರೇನ್ನಲ್ಲಿ. ಆ ಬಳಿಕ ಬೆಳೆದು ದೊಡ್ಡವರಾಗಿದ್ದು, ಅವರ ನಾಗರಿಕತ್ವ ಇರೋದು ಶ್ರೀಲಂಕಾದಲ್ಲಿ. ಅವರು 1985ರ ಆಗಸ್ಟ್ 11ರಂದು ಜನಿಸಿದರು. ಈ ವರೆಗೆ ಅವರು ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಈಗ ಅವರಿಗೆ 39 ವರ್ಷ ವಯಸ್ಸು.

2009ರಲ್ಲಿ ರಿಲೀಸ್ ಆದ ‘ಅಲಾದಿನ್’ ಹೆಸರಿನ ಸಿನಿಮಾ ಮೂಲಕ ಜಾಕ್ವೆಲಿನ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರಿಗೆ ಸ್ಪೆಷಲ್ ಡ್ಯಾನ್ಸ್ಗಳಲ್ಲಿ ನಟಿಸೋ ಆಫರ್ಗಳು ಸಿಗೋಕೆ ಆರಂಭಿಸಿದವು. 2022ರಲ್ಲಿ ರಿಲೀಸ್ ಆದ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ವರ್ಷ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ.

ಇದನ್ನೂ ಓದಿ:‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಮತ್ತೆ ಇಡಿ ವಿಚಾರಣೆ

ಜಾಕ್ವೆಲಿನ್ ವಿವಾದಗಳಿಂದ ದೂರ ಇರಲು ಬಯಸುತ್ತಾರೆ. ಆದರೆ, ವಿವಾದಗಳು ಅವರನ್ನು ಹುಡುಕಿ ಬರುತ್ತವೆ. ಇತ್ತೀಚೆಗೆ ಜಾಕ್ವೆಲಿನ್ ಅವರು ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಬಂಧದ ಕಾರಣಕ್ಕೆ ಸುದ್ದಿ ಆಗಿದ್ದಾರೆ. ಈತ 200 ಕೋಟಿ ರೂಪಾಯಿ ವಂಚನೆಯಲ್ಲಿ ಅರೆಸ್ಟ್ ಆಗಿದ್ದಾನೆ. ಜೊತೆಗೆ ಜಾಕ್ವೆಲಿನ್ ಜೊತೆ ಕಳೆದ ಆಪ್ತ ಕ್ಷಣಗಳ ಫೋಟೋ ವೈರಲ್ ಮಾಡಿದ್ದಾನೆ. ಅವರಿಗೆ ದುಬಾರಿ ವಸ್ತುಗಳನ್ನು ಸುಕೇಶ್ ಗಿಫ್ಟ್ ಮಾಡಿದ್ದ. ಇದು ಜಾಕ್ವೆಲಿನ್ಗೆ ಮುಳುವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Sun, 11 August 24

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ