ಸಾಲುಸಾಲು ಸಿನಿಮಾ ಫ್ಲಾಪ್​ ಆದರೂ ಗುಟ್ಕಾ ಜಾಹೀರಾತಿಗೆ 50 ಕೋಟಿ ರೂ. ಸಂಭಾವನೆ? ಕೇಳಿಬಂತು ಹೊಸ ಆರೋಪ

| Updated By: ರಾಜೇಶ್ ದುಗ್ಗುಮನೆ

Updated on: Sep 18, 2022 | 11:26 AM

‘ರಾಜ್​ನೀತಿ’ ಸಿನಿಮಾ, ‘ಆಶ್ರಮ್’ ವೆಬ್​ ಸೀರಿಸ್​ ಸೇರಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಪ್ರಕಾಶ್ ಝಾಗೆ ಇದೆ. ಅವರು ಮಾತನಾಡುತ್ತಾ ಬಾಲಿವುಡ್​ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

ಸಾಲುಸಾಲು ಸಿನಿಮಾ ಫ್ಲಾಪ್​ ಆದರೂ ಗುಟ್ಕಾ ಜಾಹೀರಾತಿಗೆ 50 ಕೋಟಿ ರೂ. ಸಂಭಾವನೆ? ಕೇಳಿಬಂತು ಹೊಸ ಆರೋಪ
ಅಜಯ್-ಶಾರುಖ್- ಅಕ್ಷಯ್
Follow us on

ಬಾಲಿವುಡ್ ಹೀರೋಗಳಾದ ಅಕ್ಷಯ್ ಕುಮಾರ್ (Akshay Kumar), ಅಜಯ್ ದೇವಗನ್, ಶಾರುಖ್ ಖಾನ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಅವರು ಈ ಜಾಹೀರಾತಿನಿಂದ ಹೊರ ಬಂದಿದ್ದಾರೆ. ಉಳಿದ ಇಬ್ಬರು ಸ್ಟಾರ್ಸ್​ಗಳು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇವರ ನಡೆಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಿದೆ. ಈಗ ಬಾಲಿವುಡ್ ನಿರ್ದೇಶಕ ಪ್ರಕಾಶ್ ಝಾ (Prakash Jha) ಅವರು ಈ ನಟರನ್ನು ಟೀಕಿಸಿದ್ದಾರೆ. ಸಿನಿಮಾ ಫ್ಲಾಪ್ ಆದರೂ ಜಾಹೀರಾತಿನಿಂದ ಒಳ್ಳೆಯ ಕಮಾಯಿ ಮಾಡುತ್ತಿದ್ದಾರೆ ಎಂಬ ಮಾತನ್ನು ಅವರು ಹೇಳಿದ್ದಾರೆ.

‘ರಾಜ್​ನೀತಿ’ ಸಿನಿಮಾ, ‘ಆಶ್ರಮ್’ ವೆಬ್​ ಸೀರಿಸ್​ ಸೇರಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಪ್ರಕಾಶ್ ಝಾಗೆ ಇದೆ. ಅವರು ಇಟೈಮ್ಸ್ ಜತೆ ಮಾತನಾಡುತ್ತಾ ಬಾಲಿವುಡ್​ನ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು-ಇಲ್ಲೊಂದು ಸಿನಿಮಾ ಮಾತ್ರ ಗೆಲ್ಲುತ್ತಿದೆ. ಈ ಪರಿಸ್ಥಿತಿಗೆ ಕಾರಣ ಏನಿರಬಹುದು ಎಂಬುದನ್ನು ಅವರು ವಿವರಿಸಿದ್ದಾರೆ. ಸ್ಟಾರ್ ನಟರ ಬಗ್ಗೆ ಅವರು ಟೀಕೆ ಮಾಡಿದ್ದಾರೆ.

‘ಬಾಲಿವುಡ್​ನಲ್ಲಿ 5-6 ನಟರಿದ್ದಾರೆ. ಈ ನಟರ ಸ್ಥಿತಿ ನೋಡಿ. ಗುಟ್ಕಾ ಜಾಹೀರಾತಿನಲ್ಲಿ 50 ಕೋಟಿ ರೂಪಾಯಿ ಸಿಗುವಾಗ ನನ್ನ ಚಿತ್ರಗಳಲ್ಲಿ ಅವರು ಏಕೆ ಕೆಲಸ ಮಾಡುತ್ತಾರೆ? ಈ ನಟರು ಗುಟ್ಕಾ ಮಾರುತ್ತಿದ್ದಾರೆ. ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಈ ಲೆಜೆಂಡರಿ ನಟರು ನಿಜಕ್ಕೂ ಏನು ಮಾಡುತ್ತಿದ್ದಾರೆ’ ಎಂದು ಪ್ರಕಾಶ್ ಪ್ರಶ್ನೆ ಮಾಡಿದ್ದಾರೆ.

‘ನಟರಿಗೆ ಸಮಯವಿಲ್ಲ. ಐದು ಫ್ಲಾಪ್‌ ಸಿನಿಮಾ ಕೊಟ್ಟ ನಟ, 12 ಜಾಹೀರಾತುಗಳನ್ನು ಒಪ್ಪಿಕೊಂಡಿರುತ್ತಾನೆ. ಪ್ರತೀ ಜಾಹೀರಾತಿಗಾಗಿ 10 ಕೋಟಿ ರೂ. ಪಡೆಯುತ್ತಾನೆ. ಕೆಲ ಕಾರ್ಪೊರೇಟ್‌ಗಳು ಈ ಸ್ಟಾರ್​​ಗಳನ್ನು ಖರೀದಿಸಲು ಸಿದ್ಧರಾಗಿದ್ದಾರೆ. ಈ ಕಾರಣಕ್ಕೆ ಅವರು ಸಂತೋಷವಾಗಿದ್ದಾರೆ. ಇಂಡಸ್ಟ್ರಿಯಲ್ಲಿ ಜವಾಬ್ದಾರಿ ಹೊಂದಿರುವ ವ್ಯಕ್ತಿಗಳು ಒಟ್ಟಿಗೆ ಕುಳಿತು ಈ ಬಗ್ಗೆ ಯೋಚಿಸಬೇಕು’ ಎಂದು ಕೋರಿದ್ದಾರೆ ಅವರು.

‘ಈ ಮೊದಲು ಕೆಲವರು ಸಿನಿಮಾ ಮಾಡುತ್ತಿದ್ದರು. ಅದು ಕೆಟ್ಟ ಚಿತ್ರವೋ ಅಥವಾ ಒಳ್ಳೆಯ ಚಿತ್ರವೋ ಅದು ಎರಡನೆಯ ಮಾತು. ಆದರೆ ಅದನ್ನು ಪ್ಯಾಷನ್​ನಿಂದ ಮಾಡುತ್ತಿದ್ದರು. ತಮ್ಮ ಸಿನಿಮಾಗಳಿಗಾಗಿ ಹೋರಾಡುತ್ತಿದ್ದರು. ಅದೆಲ್ಲವೂ ಈಗ ಮಾಯವಾಗಿದೆ. ಈಗ ಎಲ್ಲ ಸ್ಟಾರ್​​ಗಳು ಸಿನಿಮಾ ಮಾಡಲು ಮಾಡಲು ಬಯಸುತ್ತಾರೆ ಅಷ್ಟೇ. ತಮಗೆ ಸಿಗಬೇಕಿರುವ ಕಾರ್ಪೊರೇಟ್ ಹಣ ಬಳಕೆ ಮಾಡಿಕೊಂಡು ಹಾಯಾಗಿದ್ದಾರೆ. ರಿಮೇಕ್ ಸಿನಿಮಾಗಳು ಹೆಚ್ಚುತ್ತಿವೆ’ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್, ಶಾರುಖ್ ಸಿನಿಮಾಗಳು ನಿರಂತರವಾಗಿ ಸೋಲು ಕಾಣುತ್ತಿವೆ. ಪ್ರಕಾಶ್ ಹೇಳಿದ ಮಾತು ಈ ನಟರಿಗೆ ಎನ್ನಲಾಗುತ್ತಿದೆ.

Published On - 9:42 am, Sun, 18 September 22