ಮಗಳ ಆ ವಿಷಯಕ್ಕೆ ಜಗಳವಾಡಿದ ಆಲಿಯಾ-ರಣ್​ಬೀರ್, ಇದು ಎಲ್ಲರ ಮನೆ ವಿಷಯ

Ranbir Kapoor: ಆಲಿಯಾ ಭಟ್ ಮತ್ತು ರಣ್​ಬೀರ್ ಕಪೂರ್ ಮಗಳ ವಿಷಯಕ್ಕೆ ಜಗಳ ಮಾಡಿಕೊಂಡರಂತೆ. ಅದು ಯಾವ ವಿಷಯಕ್ಕೆ, ಜಗಳ ಯಾವ ಕಾರಣಕ್ಕೆ ಆಯ್ತು, ಈ ವಿಷಯವನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ ಆಲಿಯಾ ಭಟ್.

ಮಗಳ ಆ ವಿಷಯಕ್ಕೆ ಜಗಳವಾಡಿದ ಆಲಿಯಾ-ರಣ್​ಬೀರ್, ಇದು ಎಲ್ಲರ ಮನೆ ವಿಷಯ
ರಣ್​ಬೀರ್-ಆಲಿಯಾ
Follow us
ಮಂಜುನಾಥ ಸಿ.
|

Updated on: Sep 20, 2024 | 4:34 PM

ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಬಾಲಿವುಡ್​ನ ಟಾಪ್ ದಂಪತಿ. ಇಬ್ಬರೂ ಅದ್ಭುತ ನಟರು, ಇಬ್ಬರೂ ತಮ್ಮ ವೃತ್ತಿ ಜೀವನದ ಪೀಕ್​ನಲ್ಲಿದ್ದಾರೆ. ವೃತ್ತಿ ಜೀವನದ ಉನ್ನತ ಸ್ಥಾಯಿಯಲ್ಲಿರುವಾಗಲೇ ಮದುವೆಯಾಗಿ ಮಗುವನ್ನೂ ಪಡೆದಿದೆ ಈ ಜೋಡಿ. ಮಗು ಆದ ಬಳಿಕ ಆಲಿಯಾ ಹಾಗೂ ರಣ್​ಬೀರ್ ಇಬ್ಬರೂ ಸಹ ಚಿತ್ರೀಕರಣಕ್ಕೆ ಮರಳಿದ್ದು, ಪ್ರಸ್ತುತ ಆಲಿಯಾ ಭಟ್​ರ ಹೊಸ ಸಿನಿಮಾ ‘ಜಿಗರ’ ಬಿಡುಗಡೆಗೆ ಸಜ್ಜಾಗಿದೆ. ಇದು ಆಕ್ಷನ್ ಸಿನಿಮಾ ಆಗಿದ್ದು, ಆಲಿಯಾ ಭಟ್ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಭಾಗಿಯಾಗಿದ್ದ ಸಂದರ್ಶನವೊಂದರಲ್ಲಿ ಮಗಳು ರಾಹಾ ವಿಚಾರಕ್ಕೆ ಆಲಿಯಾ ಹಾಗೂ ರಣ್​ಬೀರ್ ಮಾಡಿದ ಜಗಳದ ಬಗ್ಗೆ ಮಾತನಾಡಿದ್ದಾರೆ. ಅಸಲಿಗೆ ಇದು ಪ್ರತಿ ಮನೆಯಲ್ಲಿಯೂ ನಡೆಯುವ ಸಾಮಾನ್ಯ ಜಗಳವೇ.

ಮಗಳು ಮೊದಲಿಗೆ ಅಮ್ಮ ಎನ್ನಬೇಕೆ ಅಥವಾ ಅಪ್ಪ ಎನ್ನಬೇಕಾ ಎಂಬ ವಿಷಯಕ್ಕೆ ಈ ದಂಪತಿ ಜಗಳವಾಡಿದ್ದಾರಂತೆ. ರಣ್​ಬೀರ್, ಮೊದಲು ಅಪ್ಪ ಎನ್ನಬೇಕು ಎಂಬ ಆಸೆ ವ್ಯಕ್ತಪಡಿಸಿದರೆ ಆಲಿಯಾ, ಮಗಳು ಅಮ್ಮ ಎಂದೇ ಎನ್ನುತ್ತಾಳೆ ಎಂದರಂತೆ. ಮೊದಲಿಗೆ ಅಮ್ಮ ಪದ ಹೇಳಿಕೊಡಬೇಕು ಎಂದು ಆಲಿಯಾ ಹೇಳಿದರೆ ಇಲ್ಲ ಅಪ್ಪ ಪದ ಹೇಳಿಕೊಡಬೇಕು ಎಂದು ರಣ್​ಬೀರ್ ಕಪೂರ್ ವಾದಿಸಿದರಂತೆ.

ಒಮ್ಮೆ ಆಲಿಯಾ ಮಗಳು ರಾಹಾ ಜೊತೆಗೆ ಆಡುತ್ತಿದ್ದಾಗ ರಾಹಾ ಒಮ್ಮೆಲೆ ‘ಮಮ್ಮಾ’ ಎಂದಿದ್ದಾಳೆ. ಕೂಡಲೇ ಮೊಬೈಲ್ ತೆಗೆದುಕೊಂಡ ಆಲಿಯಾ, ಇನ್ನೊಮ್ಮೆ ಹೇಳು ಇನ್ನೊಮ್ಮೆ ಹೇಳು ಎಂದು ಪೀಡಿಸಿದ್ದಾರೆ. ಆದರೆ ರಾಹಾ ಮಾತ್ರ ಇನ್ನೊಮ್ಮೆ ಮಾಮ ಎಂದು ಹೇಳಿಲ್ಲ. ರಣ್​ಬೀರ್​ ಕಪೂರ್​ಗೆ ಈ ವಿಷಯ ಹೇಳಿದಾಗ ಅವರು ನಂಬಲಿಲ್ಲವಂತೆ. ಆಲಿಯಾ ಬಳಿ ತೋರಿಸಲು ಪ್ರೂಫ್ ಸಹ ಇಲ್ಲ.

ಇದನ್ನೂ ಓದಿ:ಮದುವೆ ಆದ ಬಳಿಕ ಹೆಸರು ಬದಲಿಸಿಕೊಂಡ ಆಲಿಯಾ; ಈಗ ಇರೋ ಹೆಸರೇನು?

‘ಅಪ್ಪ-ಅಮ್ಮ ಸಹಜವಾಗಿಯೇ ಈ ವಿಚಾರವಾಗಿ ಬಹಳ ಹೆಮ್ಮೆ ಪಡುತ್ತೇವೆ. ಪೋಷಕರಿಗೆ ಆ ಕ್ಷಣ ಬಹಳ ಮಹತ್ವದ್ದು ಸಹ ಹೌದು ಎಂದಿರುವ ಆಲಿಯಾ, ಮಗಳು ಜನಿಸಿದ ಬಳಿಕ ನನಗಾಗಿ ಪ್ರತ್ಯೇಕ ಸಮಯ ಎತ್ತಿಡಲು ಸಹ ಸಾಧ್ಯವಾಗುತ್ತಿಲ್ಲ. ಮಗಳ ಜೀವನದಲ್ಲಿ ಅಷ್ಟೊಂದು ತೊಡಗಿಸಿಕೊಂಡು ಬಿಟ್ಟಿದ್ದೇನೆ. ಎಲ್ಲ ನಿರ್ಧಾರಗಳು ಮಗಳನ್ನು ಗಮನದಲ್ಲಿಟ್ಟುಕೊಂಡೇ ಮಾಡುತ್ತಿದ್ದೇವೆ’ ಎಂದಿದ್ದಾರೆ ಆಲಿಯಾ.

ಆಲಿಯಾ ಭಟ್ ನಟನೆಯ ‘ಜಿಗರ’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಗೂಢಚಾರಿ ಅಕ್ಕ ತನ್ನ ತಮ್ಮನನ್ನು ಬಿಡಸಲು ಮಾಡುವ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಜಿಗರ’ ಬಳಿಕ ಪತಿ ರಣ್​ಬೀರ್ ಕಪೂರ್ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದು ಆ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ