ಮದುವೆ ಆದ ಬಳಿಕ ಹೆಸರು ಬದಲಿಸಿಕೊಂಡ ಆಲಿಯಾ; ಈಗ ಇರೋ ಹೆಸರೇನು?
ಆಲಿಯಾ ಭಟ್ ಹಾಗೂ ಸಿದ್ದಾರ್ಥ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ. ಈ ಚಿತ್ರ ಸೂಪರ್ ಹಿಟ್ ಆಯಿತು. ಈಗ ಚಿತ್ರರಂಗದಲ್ಲಿ ಯಶಸ್ವಿ ನಟಿ ಆಗಿದ್ದಾರೆ. ಅವರು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
ನಟಿ ಆಲಿಯಾ ಭಟ್ ಅವರು ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಅವರು ಈಗ ಕಪೂರ್ ಕುಟುಂಬದ ಸೊಸೆ. ಕೆಲವರು ಬೇರೆ ಕುಟುಂಬಕ್ಕೆ ಹೋದ ಬಳಿಕ ಹೆಸರನ್ನು ಬದಲಿಸಿಕೊಂಡಿದ್ದು ಇದೆ. ಈ ಮೊದಲು ಕರೀನಾ ಕಪೂರ್ ಅವರು ಸೈಫ್ನ ಮದುವೆ ಆದ ಬಳಿಕ ಖಾನ್ ಹೆಸರನ್ನು ಸೇರಿಸಿಕೊಂಡಿದ್ದಾರೆ. ಅದೇ ರೀತಿ, ಐಶ್ವರ್ಯಾ ರೈ ಅವರು ಬಚ್ಚನ್ ಹೆಸರನ್ನು ಸೇರಿಸಿಕೊಂಡಿದ್ದಾರೆ. ಈಗ ಆಲಿಯಾ ಭಟ್ ಕೂಡ ಹಾಗೆ ಮಾಡಿದ್ದಾರೆ ಅನ್ನೋದು ಗೊತ್ತಾ? ಆ ಬಗ್ಗೆ ನಾವು ಹೇಳ್ತೀವಿ.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು 2022ರ ಏಪ್ರಿಲ್ನಲ್ಲಿ ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನಡೆಯಿತು. ಇದಾದ ಬಳಿಕ ಆಲಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ಬದಲಿಸಿಕೊಂಡಿಲ್ಲ. ಆದರೆ, ಈಘ ಅವರ ಹೆಸರು ಏನು ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 2’ನಲ್ಲಿ ಹೇಳಿಕೊಂಡಿದ್ದಾರೆ.
‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನೆಟ್ಫ್ಲಿಕ್ಸ್ನಲ್ಲಿ ಈ ಮೊದಲು ಪ್ರಸಾರ ಕಂಡಿತ್ತು. ಆದರೆ, ಕಪಿಲ್ ಶರ್ಮಾ ಅವರ ಈ ಮೊದಲ ಶೋಗಳಂತೆ ಚಾರ್ಮ್ ಉಳಿಸಿಕೊಂಡಿರಲಿಲ್ಲ. ಈಗ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಇದರ ಪ್ರೋಮೋ ರಿಲೀಸ್ ಆಗಿದೆ. ಆಲಿಯಾ ಭಟ್ ಅವರು ‘ಜಿಗ್ರಾ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇದರ ಪ್ರಚಾರಕ್ಕಾಗಿ ಆಲಿಯಾ ಭಟ್ ಅವರು ಇಲ್ಲಿಗೆ ಆಗಮಿಸಿದ್ದಾರೆ.
ಸುನೀಲ್ ಗ್ರೋವರ್ ಅವರನ್ನು ‘ಆಲಿಯಾ ಭಟ್’ ಬಂದರು ಎಂದಿದ್ದಾರೆ. ಇದಕ್ಕೆ ಆಲಿಯಾ ಉತ್ತರ ನೀಡಿದ್ದಾರೆ. ‘ನಾನು ಆಲಿಯಾ ಭಟ್ ಕಪೂರ್’ ಎಂದಿದ್ದಾರೆ. ‘ಜಿಗ್ರಾ’ ಸಿನಿಮಾದಲ್ಲಿ ಅವರು ವೇದಾಂಗ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆಲಿಯಾ ಅವರು ಈ ಚಿತ್ರದಲ್ಲಿ ಕೇವಲ ನಟಿ ಮಾತ್ರ ಅಲ್ಲ. ಸಹ ನಿರ್ಮಾಪಕಿ ಕೂಡ ಹೌದು. 1993ರಲ್ಲಿ ರಿಲೀಸ್ ಆದ ‘ಗುಮ್ರಾ’ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ‘ಗುಮ್ರಾ’ದಲ್ಲಿ ಸಂಜತ್ ದತ್, ಶ್ರೀದೇವಿ, ರಾಹುಲ್ ರಾಯ್ ನಟಿಸಿದ್ದರು.
ಇದನ್ನೂ ಓದಿ: ಆಲಿಯಾ ಭಟ್ ಬಳಿ ಇರೋ ಪ್ರೀತಿಯ ಬೆಕ್ಕನ್ನು ನೀಡಿದ್ದು ಅವರ ಮಾಜಿ ಗೆಳೆಯ ಸಿದ್ದಾರ್ಥ್
ಇದಲ್ಲದೆ, ಆಲಿಯಾ ಭಟ್ ಅವರು ‘ಯಶ್ ರಾಜ್ ಚೋಪ್ರಾ ಫಿಲ್ಮ್ಸ್’ನ ಸ್ಪೈ ಯೂನಿವರ್ಸ್ನ ಭಾಗ ಆಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ವಿಕ್ಕಿ ಕೌಶಲ್ ಕೂಡ ನಟಿಸುತ್ತಿದ್ದಾರೆ. ಮಗು ರಹಾ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.