ಐಶ್ವರ್ಯಾ ತುಟಿಗೆ ಪ್ರೀತಿಯಿಂದ ಮುತ್ತಿಟ್ಟ ಮಗಳು ಆರಾಧ್ಯಾ ಬಚ್ಚನ್; ಇಲ್ಲಿದೆ ವಿಡಿಯೋ
ಐಶ್ವರ್ಯಾ ರೈ ಬಚ್ಚನ್ ಅವರು ಮಗಳು ಆರಾಧ್ಯ ಜೊತೆ ದುಬೈಗೆ ತೆರಳಿದ್ದಾರೆ. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವ ಸಲುವಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆದುಬರುತ್ತಿರುವ ಅವರ ವಿಡಿಯೋ ಮತ್ತು ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ

ಐಶ್ವರ್ಯಾ ರೈ ಬಚ್ಚನ್ ಅವರು ಮಗಳು ಆರಾಧ್ಯಾ ಜೊತೆ ದುಬೈನಲ್ಲಿ ನಡೆದ SIIMA 2024 ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಆರಾಧ್ಯಾ ಬಚ್ಚನ್ ಅವರು ಮೊದಲಿಗಿಂತ ಕ್ಯೂಟ್ ಆಗಿದ್ದಾರೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಆರಾಧ್ಯಾ ಅವರು ಅಮ್ಮನ ತುಟಿಗೆ ಪ್ರೀತಿಯಿಂದ ಮುತ್ತಿಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಶ್ವರ್ಯಾ ರೈ ಅವರು ಎಲ್ಲೇ ಹೋದರೂ ಅಲ್ಲಿ ಆರಾಧ್ಯಾ ಇರುತ್ತಾರೆ. ಈ ಮೊದಲು ಅನೇಕ ಅವಾರ್ಡ್ ಕಾರ್ಯಕ್ರಮಗಳಿಗೆ ಆರಾಧ್ಯಾ ಹಾಗೂ ಐಶ್ವರ್ಯಾ ಒಟ್ಟಾಗಿ ಆಗಮಿಸಿದ್ದರು. ಈಗ SIIMA 2024 ಕಾರ್ಯಕ್ರಮಕ್ಕೂ ಮಗಳ ಜೊತೆ ಐಶ್ವರ್ಯಾ ಹಾಜರಿ ಹಾಕಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿ ಗಮನ ಸೆಳೆದಿವೆ.
ಐಶ್ವರ್ಯಾ ಅವರಿಗೆ ‘ಅತ್ಯುತ್ತಮ ನಟಿ’ (ಕ್ರಿಟಿಕ್ಸ್) ಅವಾರ್ಡ ಸಿಕ್ಕಿದೆ. ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ನಟನೆಗೆ ಅವರಿಗೆ ಈ ಅವಾರ್ಡ್ ದೊರೆತಿದೆ. ಅವರು ಈ ಅವಾರ್ಡ್ನ ಸ್ವೀಕರಿಸಿ ಖುಷಿಪಟ್ಟಿದ್ದಾರೆ. ಆರಾಧ್ಯಾ ಅವರು ಕೆಳಗೆ ಕುಳಿತು ತಾಯಿಯನ್ನು ಚಿಯರ್ಅಪ್ ಮಾಡಿದ್ದಾರೆ.
View this post on Instagram
View this post on Instagram
ಇನ್ನು, ಆರಾಧ್ಯಾ ಹಾಗೂ ಐಶ್ವರ್ಯಾ ಅವರು ಚಿಯಾನ್ ವಿಕ್ರಮ್ ಜೊತೆ ಚರ್ಚೆ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ನಟ ವಿಕ್ರಮ್ಗೆ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ.
ಇದನ್ನೂ ಓದಿ: ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯಾ ರೈ; ಡಿವೋರ್ಸ್ ಮಾತಿಗೆ ಇನ್ನೊಂದು ಸಾಕ್ಷಿ?
ಐಶ್ವರ್ಯಾ ಹಾಗೂ ಅಭಿಷೇಕ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಈ ಮೊದಲಿನಿಂದಲೂ ಚರ್ಚೆ ಆಗುತ್ತಿದೆ. ಬಚ್ಚನ್ ಹಾಗೂ ಐಶ್ವರ್ಯಾ ಮದುವೆ ಆಗಿ 17 ವರ್ಷಗಳು ಕಳೆದಿವೆ. ಅವರು ದುಬೈಗೆ ಆಗಮಿಸಿದಾಗ ಅಭಿಷೇಕ್ ಹಾಕಿದ್ದ ರಿಂಗ್ ಅವರ ಕೈಯಲ್ಲಿ ಇರಲಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇವರು ಬೇರೆ ಆಗದೇ ಇರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.