ಆಲಿಯಾ ಭಟ್​-ರಣಬೀರ್​ ಕಪೂರ್​ ಮದುವೆಗೆ ಸಕಲ ಸಿದ್ಧತೆ; ಮೆಹಂದಿ, ಸಂಗೀತ್​ ಸಮಾರಂಭದ ಡೇಟ್​ ಬಹಿರಂಗ

| Updated By: ಮದನ್​ ಕುಮಾರ್​

Updated on: Apr 08, 2022 | 1:05 PM

Alia Bhatt Ranbir Kapoor Marriage: ಆಲಿಯಾ ಭಟ್​-ರಣಬೀರ್​ ಕಪೂರ್​ ವಿವಾಹದಲ್ಲಿ ಮೆಹಂದಿ ಮತ್ತು ಸಂಗೀತ್​ ಸಮಾರಂಭ ಬಹಳ ಗ್ರ್ಯಾಂಡ್​ ಆಗಿರಲಿದೆ. ಅವುಗಳ ದಿನಾಂಕ ಕೂಡ ಈಗ ಬಹಿರಂಗ ಆಗಿದೆ.

ಆಲಿಯಾ ಭಟ್​-ರಣಬೀರ್​ ಕಪೂರ್​ ಮದುವೆಗೆ ಸಕಲ ಸಿದ್ಧತೆ; ಮೆಹಂದಿ, ಸಂಗೀತ್​ ಸಮಾರಂಭದ ಡೇಟ್​ ಬಹಿರಂಗ
ರಣಬೀರ್​ ಕಪೂರ್​, ಆಲಿಯಾ ಭಟ್
Follow us on

ಬಾಲಿವುಡ್​ನ ಸ್ಟಾರ್​ ಜೋಡಿ ಎನಿಸಿಕೊಂಡಿರುವ ಆಲಿಯಾ ಭಟ್​ (Alia Bhatt) ಮತ್ತು ರಣಬೀರ್​ ಕಪೂರ್​ ಅವರು ಶೀಘ್ರವೇ ಹಸೆಮಣೆ ಏರಲಿದ್ದಾರೆ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯ ಬಹಳ ಹಿಂದೆಯೇ ಬಹಿರಂಗ ಆಗಿತ್ತು. ಕೆಲವು ಸಂದರ್ಶನಗಳಲ್ಲಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ಅವರು ಈ ಬಗ್ಗೆ ಹೇಳಿಕೊಂಡಿದ್ದುಂಟು. ಅವರಿಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಸಿಕ್ಕು ಹಲವು ದಿನಗಳೇ ಕಳೆದಿವೆ. ಈಗ ಮದುವೆಗೆ ಸಂಬಂಧಿಸಿದ ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ. ಶೀಘ್ರದಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆ (Alia Bhatt Ranbir Kapoor Marriage) ಆಗಲಿದ್ದಾರೆ. ಈ ಕುರಿತು ಕುಟುಂಬದವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಹಲವು ಬಗೆಯ ವರದಿಗಳು ಪ್ರಕಟ ಆಗಿವೆ. ಮೂಲಗಳ ಪ್ರಕಾರ ಏ.15ರಂದು ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದ್ದೂರಿಯಾಗಿ ಮದುವೆ ಆಗಲು ಈ ಜೋಡಿ ನಿರ್ಧರಿಸಿದಂತಿದೆ. ಕೊವಿಡ್ ಬಳಿಕ ಕೆಲವು ಸೆಲೆಬ್ರಿಟಿಗಳು ಸಿಂಪಲ್​ ವಿವಾಹವನ್ನು ಇಷ್ಟಪಡುತ್ತಿದ್ದಾರೆ. ಆದರೆ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ (Ranbir Kapoor) ಅವರು ಆ ರೀತಿ ಅಲ್ಲ. ಮೆಹಂದಿ, ಸಂಗೀತ್​ ಸಮಾರಂಭ ಮುಂತಾದ್ದನ್ನು ಭರ್ಜರಿಯಾಗಿ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಉತ್ತರ ಭಾರತದಲ್ಲಿ ಮೆಹಂದಿ ಮತ್ತು ಸಂಗೀತ್​ ಸಮಾರಂಭವನ್ನು ಬಹಳ ಗ್ರ್ಯಾಂಡ್​ ಆಗಿ ಮಾಡಲಾಗುತ್ತದೆ. ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ವಿವಾಹದಲ್ಲಿ ಈ ಸಮಾರಂಭಗಳು ಅದ್ದೂರಿಯಾಗಿ ಇರಲಿವೆ. ಅವುಗಳ ದಿನಾಂಕ ಕೂಡ ಈಗ ಬಹಿರಂಗ ಆಗಿದೆ. ಆಲಿಯಾ ಭಟ್​ ಅವರ ಬಾಂದ್ರಾದ ಮನೆಯಲ್ಲಿ ಏ.13ರಂದು ಮೆಹಂದಿ ಶಾಸ್ತ್ರ ನೆರವೇರಲಿದೆ. ಅದೇ ದಿನ ರಣಬೀರ್​ ಕಪೂರ್​ ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆಯಲಿದೆ. ಏ.14ರಂದು ಹಳದಿ ಹಾಗೂ ಸಂಗೀತ್​ ಸಮಾರಂಭ ಇರಲಿದೆ. ಏ.15ರಂದು ವಿಜೃಂಭಣೆಯಿಂದ ಮದುವೆ ನಡೆಯಲಿದೆ ಎಂದು ‘ಇಂಡಿಯಾ ಟಿವಿ ನ್ಯೂಸ್​’ ವರದಿ ಮಾಡಿದೆ.

ಆಲಿಯಾಗೆ ಬಾಲ್ಯದಲ್ಲೇ ರಣಬೀರ್​ ಮೇಲೆ ಕ್ರಶ್​:

ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ಗೆ ಮನಸೋತಿದ್ದು ಯಾಕೆ? ಇದು ಕೌತುಕ ಪ್ರಶ್ನೆ. ರಣಬೀರ್​ ಕಪೂರ್​ ಇತಿಹಾಸ ಏನು ಎಂಬುದು ಜಗತ್ತಿಗೆ ತಿಳಿದಿದೆ. ದೀಪಿಕಾ ಪಡುಕೋಣೆ ಜೊತೆಗೆ ಅವರು ಡೇಟಿಂಗ್​ ಮಾಡುತ್ತಿದ್ದರು. ನಂತರ ಅದು ಬ್ರೇಕಪ್​ನಲ್ಲಿ ಅಂತ್ಯವಾಯ್ತು. ಕತ್ರಿನಾ ಕೈಫ್​ ಜೊತೆಯೂ ರಣಬೀರ್​ ಕಪೂರ್ ಪ್ರೀತಿಸುತ್ತಿದ್ದರು. ಆ ಲವ್​ ಕೂಡ ಮದುವೆವರೆಗೆ ಮುಂದುವರಿಯಲಿಲ್ಲ. ಹೀಗೆ ಅನೇಕ ಬ್ರೇಕಪ್​ ಮಾಡಿಕೊಂಡಿರುವ ರಣಬೀರ್​ ಕಪೂರ್​ ಜೊತೆ ಆಲಿಯಾ ಭಟ್​ ಅವರಿಗೆ ಪ್ರೀತಿ ಚಿಗುರಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಆ ಬಗ್ಗೆ ಆಲಿಯಾ ಇತ್ತೀಚಿಗೆ ಹೇಳಿಕೊಂಡಿದ್ದರು.

ಹಲವು ವರ್ಷಗಳ ಹಿಂದೆಯೇ ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ಗೆ ಮನಸೋತಿದ್ದರು. ಆಗಿನ್ನೂ ಅವರು ಚಿಕ್ಕ ಬಾಲಕಿ ಆಗಿದ್ದರು. ‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನಾನು ಮಾನಸಿಕವಾಗಿ ರಣಬೀರ್​ ಕಪೂರ್​ ಜೊತೆ ಈಗಾಗಲೇ ಮದುವೆ ಆಗಿದ್ದೇನೆ. ಅದನ್ನೂ ಬಿಡಿ, ನಾನು ಮೊಟ್ಟ ಮೊದಲ ಬಾರಿಗೆ ಅವರನ್ನು ತೆರೆಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಆಗೋದು ಅಂತ ನಿರ್ಧಾರ ಮಾಡಿದ್ದೆ. ಆಗಿನ್ನೂ ನಾನು ಚಿಕ್ಕ ಹುಡುಗಿ ಆಗಿದ್ದೆ. ಆದರೂ ಆಗ ನಾನು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ಒಂದು ರೀತಿಯ ಮನಸ್ಥಿತಿ. ನನ್ನ ಬದುಕಿನಲ್ಲಿ ನಾನು ಕಂಡು ಅತಿ ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ. ಅವರು ನನಗೆ ಸಖತ್​ ಬೆಂಬಲ ನೀಡುತ್ತಾರೆ. ನನ್ನ ಬಗ್ಗೆ ಮಾತನಾಡಲು ಕೂಡ ಅವರಲ್ಲಿ ಸಾಕಷ್ಟು ವಿಷಯ ಇದೆ ಅಂದುಕೊಂಡಿದ್ದೇನೆ. ಆದರೆ ಅದೆಲ್ಲವೂ ಆಗಬೇಕು ಎಂದರೆ ಸೂಕ್ತ ಸಮಯ ಬರಬೇಕು’ ಎಂದು ಆಲಿಯಾ ಹೇಳಿದ್ದರು.

ಇದನ್ನೂ ಓದಿ:

ರಾಜಮೌಳಿ ಬಗ್ಗೆ ಆಲಿಯಾಗೆ ನಿಜಕ್ಕೂ ಬೇಸರವಾಗಿದೆಯೇ?; ಪೋಸ್ಟ್ ಡಿಲೀಟ್​ ಮಾಡಿದ್ದಕ್ಕೆ ಕಾರಣ ನೀಡಿದ ನಟಿ

ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​