Alia Bhatt: ಆಲಿಯಾ ಭಟ್ ಖಾಸಗಿತನಕ್ಕೆ ಧಕ್ಕೆ; ಪೊಲೀಸರ ಮೊರೆ ಹೋದ ನಟಿ

ಆಲಿಯಾ ಭಟ್ ಅವರು ತಮ್ಮ ನಿವಾಸದಲ್ಲಿದ್ದರು. ಈ ವೇಳೆ ಪಕ್ಕದ ಟೆರೇಸ್ ಏರಿದ ಪಾಪರಾಜಿಗಳು ಆಲಿಯಾ ಭಟ್ ಅವರ ಫೋಟೋನ ಕದ್ದು ತೆಗೆದಿದ್ದಾರೆ.

Alia Bhatt: ಆಲಿಯಾ ಭಟ್ ಖಾಸಗಿತನಕ್ಕೆ ಧಕ್ಕೆ; ಪೊಲೀಸರ ಮೊರೆ ಹೋದ ನಟಿ

Updated on: Feb 22, 2023 | 8:25 AM

ಬಾಲಿವುಡ್​ (Bollywood) ಮಂದಿ ಎಲ್ಲಿ ಹೋದರಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಜಿಮ್ ಮುಗಿಸಿ ಬರುವುದನ್ನೇ ಕಾಯುತ್ತಿರುತ್ತಾರೆ. ಅವರು ಬರುತ್ತಿದ್ದಂತೆ ಕ್ಯಾಮೆರಾಗೆ ಪೋಸ್ ನೀಡುವಂತೆ ಕೇಳುತ್ತಾರೆ. ವಿಮಾನ ನಿಲ್ದಾಣ, ಅವರ ನಿವಾಸದ ಹೊರ ಭಾಗ ಸೇರಿದಂತೆ ಎಲ್ಲ ಕಡೆಗಳಲ್ಲೂ ಇದೇ ರೀತಿ ಇದೆ. ಸೆಲೆಬ್ರಿಟಿಗಳ ಮೂಡ್ ಚೆನ್ನಾಗಿದ್ದರೆ ಪೋಸ್ ನೀಡುತ್ತಾರೆ. ಆದರೆ, ಎಲ್ಲ ಸಮಯದಲ್ಲೂ ಹೀಗೆ ಆಗುವುದಿಲ್ಲ. ಇನ್ನು, ಪಾಪರಾಜಿಗಳು ಕೂಡ ಕೆಲವೊಮ್ಮೆ ಮಿತಿಮೀರಿ ನಡೆದುಕೊಳ್ಳುತ್ತಾರೆ. ಇದರಿಂದಲೂ ಸೆಲೆಬ್ರಿಟಿಗಳು ಸಿಟ್ಟಾಗುತ್ತಾರೆ. ಈಗ ಆಲಿಯಾ ಭಟ್ (Alia Bhatt) ಅವರ ಖಾಸಗಿತನಕ್ಕೆ ಧಕ್ಕೆ ಆಗಿದೆ. ಇದಕ್ಕೆ ಎಲ್ಲ ಕಡೆಗಳಿಂದ ವಿರೋಧ ವ್ಯಕ್ತವಾಗಿದೆ.

ಆಲಿಯಾ ಭಟ್ ಅವರು ತಮ್ಮ ನಿವಾಸದಲ್ಲಿದ್ದರು. ಈ ವೇಳೆ ಪಕ್ಕದ ಟೆರೇಸ್ ಏರಿದ ಪಾಪರಾಜಿಗಳು ಆಲಿಯಾ ಭಟ್ ಅವರ ಫೋಟೋನ ಕದ್ದು ತೆಗೆದಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಆಲಿಯಾ ಭಟ್, ‘ನಾನು ನನ್ನ ಮನೆಯಲ್ಲಿ ಕುಳಿತಿದ್ದೆ. ಯಾರೋ ನನ್ನನ್ನು ಗಮನಿಸುತ್ತಿದ್ದಾರೆ ಎನಿಸಿತು. ಈ ಕಾರಣಕ್ಕೆ ಹೊರಗೆ ನೋಡಿದೆ. ಪಕ್ಕದ ಕಟ್ಟಡದಲ್ಲಿ ಇಬ್ಬರು ನನ್ನ ಕಡೆ ಕ್ಯಾಮೆರಾ ಆನ್ ಮಾಡಿ ನಿಂತಿದ್ದರು. ಇದು ಯಾವ ರೀತಿಯಲ್ಲಿ ಓಕೆ? ಇದು ಖಾಸಗಿ ತನಕ್ಕೆ ತಂದ ಧಕ್ಕೆ. ಯಾವಾಗಲೂ ಲೈನ್ ಕ್ರಾಸ್ ಮಾಡಬಾರದು. ಆದರೆ, ಆ ಲೈನ್ ಈಗ ಕ್ರಾಸ್​ ಆಗಿದೆ’ ಎಂದು ಆಲಿಯಾ ಭಟ್ ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಆಲಿಯಾ ಭಟ್​ ಅವರ ಪೋಸ್ಟ್​ಗೆ ಅರ್ಜುನ್ ಕಪೂರ್, ಆಲಿಯಾ ಭಟ್ ಮೊದಲಾದವರು ಬೆಂಬಲಿಸಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ ರೂಂನ ವಿಡಿಯೋ ವೈರಲ್ ಆಗಿತ್ತು. ಇದನ್ನು ಅನುಷ್ಕಾ ಶರ್ಮಾ ಪ್ರಶ್ನೆ ಮಾಡಿದ್ದರು. ಅವರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಲಿಯಾ ಭಟ್ ಪೋಸ್ಟ್​ನ ಶೇರ್ ಮಾಡಿಕೊಂಡಿರುವ ಅನುಷ್ಕಾ ಪಾಪರಾಜಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಜಾಹೀರಾತಿನ ಪೋಸ್ಟ್​​ನೊಂದಿಗೆ ಮಗುವಿನ ಫೋಟೋ ಹಂಚಿಕೊಂಡ ಆಲಿಯಾ ಭಟ್

ಆಲಿಯಾ ಭಟ್ ಸದ್ಯ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ರಾಣಿ ಔರ್ ರಾಕಿ ಕಿ ಪ್ರೇಮ್ ಕಹಾನಿ’ ಸಿನಿಮಾ ತೆರೆಗೆ ಬರಲು ರೆಡಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ