ರಣಬೀರ್ ನಟನೆಯ ‘ಬ್ರಹ್ಮಾಸ್ತ್ರ’ ಗೆಲುವಿನಲ್ಲಿ ಆಲಿಯಾ ಭಟ್​ಗಿಲ್ಲ ಪಾಲು; ಯಾಕೀ ತಾರತಮ್ಯ?

ಆಲಿಯಾ ಭಟ್ ಅವರ ಟ್ಯಾಲೆಂಟ್ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ‘ರಾಜಿ’, ‘ಗಂಗೂಬಾಯಿ ಕಾಠಿಯಾವಾಡಿ’ ಮೊದಲಾದ ಸಿನಿಮಾಗಳ ಮೂಲಕ ಅವರು ತಮ್ಮ ತನವನ್ನು ಪ್ರೂವ್ ಮಾಡಿದ್ದಾರೆ.

ರಣಬೀರ್ ನಟನೆಯ ‘ಬ್ರಹ್ಮಾಸ್ತ್ರ’ ಗೆಲುವಿನಲ್ಲಿ ಆಲಿಯಾ ಭಟ್​ಗಿಲ್ಲ ಪಾಲು; ಯಾಕೀ ತಾರತಮ್ಯ?
ಆಲಿಯಾ
Updated By: ರಾಜೇಶ್ ದುಗ್ಗುಮನೆ

Updated on: Sep 14, 2022 | 2:50 PM

ರಣಬೀರ್ ಕಪೂರ್ (Ranbir Kapoor) ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುತ್ತಿದೆ. ಬಾಕ್ಸ್ ಆಫೀಸ್​​ನಲ್ಲಿ ಬಿಸ್ನೆಸ್ ಕಾಣದ ಬಾಲಿವುಡ್​ಗೆ ಈ ಚಿತ್ರದಿಂದ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಈ ಚಿತ್ರ ಮೂರು ದಿನಕ್ಕೆ 225 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಶೀಘ್ರದಲ್ಲೇ ಈ ಚಿತ್ರ 300 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ. ಈ ಚಿತ್ರದಿಂದ ರಣಬೀರ್ ಕಪೂರ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಆದರೆ, ಈ ಯಶಸ್ಸಿನಲ್ಲಿ ಆಲಿಯಾ ಭಟ್​ಗೆ ಪಾಲು ಸಿಗುತ್ತಿಲ್ಲ.

‘ಬ್ರಹ್ಮಾಸ್ತ್ರ’ ಸಿನಿಮಾಗೆ ಅಯಾನ್ ಮುಖರ್ಜಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಕೆಲಸ ಆರಂಭ ಆಗಿದ್ದು ನಾಲ್ಕು ವರ್ಷಗಳ ಹಿಂದೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಕಾಂಬಿನೇಷನ್​ ನೋಡಲು ಫ್ಯಾನ್ಸ್ ಕಾತುರರಾಗಿದ್ದರು. ಅಂತೆಯೇ ಸಿನಿಮಾ ರಿಲೀಸ್ ಆಗಿ ಉತ್ತಮ ಕಮಾಯಿ ಮಾಡುತ್ತಿದೆ. ಆದರೆ, ಆಲಿಯಾ ಭಟ್​ಗೆ ಹೆಚ್ಚು ಸ್ಕ್ರೀನ್​ಸ್ಪೇಸ್​ ಸಿಕ್ಕಿಲ್ಲ ಎಂಬ ಬೇಸರ ಅಭಿಮಾನಿಗಳನ್ನು ಕಾಡುತ್ತಿದೆ.

ಇದನ್ನೂ ಓದಿ
ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು
KRK ಬಂಧನಕ್ಕೆ ‘ಬ್ರಹ್ಮಾಸ್ತ್ರ’ ಟೀಮ್​ ಕಾರಣ ಎಂದು ಆರೋಪಿಸಿದ ನೆಟ್ಟಿಗರು; ಏನಿದು ಹುನ್ನಾರ?
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರನ್ನು ಹೆಚ್ಚು ಹೈಲೈಟ್ ಮಾಡಲಾಗಿದ್ದು, ಆಲಿಯಾ ಭಟ್ ಕೆಲವೇ ದೃಶ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬುದು ಫ್ಯಾನ್ಸ್ ಆರೋಪ. ಸಿನಿಮಾ ಉದ್ದಕ್ಕೂ ಅವರು ‘ಎಲ್ಲಿದ್ದೀಯಾ ಶಿವ? ಏನಾಯಿತು ಶಿವ’ ಎಂದು ಹೇಳಿಕೊಂಡು ಇರುತ್ತಾರೆ. ಇದನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಆಲಿಯಾ ಕೆಲವೇ ದೃಶ್ಯಕ್ಕೆ ಸೀಮಿತವಾಗಿರುವುದರಿಂದ ಯಾರೊಬ್ಬರೂ ಅವರಿಗೆ ಗೆಲುವಿನಲ್ಲಿ ಪಾಲು ನೀಡುತ್ತಿಲ್ಲ. ಈ ಬಗ್ಗೆ ಕೆಲವರು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: Alia Bhatt: ಬೇಬಿ ಬಂಪ್ ತೋರಿಸಿದ ಆಲಿಯಾ ಭಟ್; ನಟಿಗೆ ಎಷ್ಟು ತಿಂಗಳು?

ಆಲಿಯಾ ಭಟ್ ಅವರ ಟ್ಯಾಲೆಂಟ್ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ‘ರಾಜಿ’, ‘ಗಂಗೂಬಾಯಿ ಕಾಠಿಯಾವಾಡಿ’ ಮೊದಲಾದ ಸಿನಿಮಾಗಳ ಮೂಲಕ ಅವರು ತಮ್ಮ ತನವನ್ನು ಪ್ರೂವ್ ಮಾಡಿದ್ದಾರೆ. ಆದರೆ, ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಇನ್ನಷ್ಟು ಒತ್ತು ಸಿಗಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಲಿಯಾ ಭಟ್ ನಟನೆಯ ನಾಲ್ಕು ಸಿನಿಮಾಗಳು ತೆರೆಗೆ ಬಂದವು. ‘ಗಂಗೂಬಾಯಿ ಕಾಠಿಯಾವಾಡಿ’, ‘ಆರ್​ಆರ್​ಆರ್’ ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್ ಆದರೆ, ‘ಡಾರ್ಲಿಂಗ್ಸ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ಈಗ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.