ನಟಿಯರ ಕೈಗೆ ಉಗಿಯುತ್ತಿದ್ದ ಆಮಿರ್ ಖಾನ್; ಈ ಕೆಟ್ಟ ಸಂಪ್ರದಾಯದ ಹಿಂದಿನ ಕಾರಣ ಏನು?

ಆಮಿರ್ ಖಾನ್ ನಟಿಯರ ಕೈಗೆ ಉಗುಳುತ್ತಿದ್ದರು ಎಂಬ ವಿಡಿಯೋ ವೈರಲ್ ಆಗಿದೆ. ಇದನ್ನು ಅವರು ಒಪ್ಪಿಕೊಂಡಿದ್ದಾರೆ. ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ಅವರ ಕೈಗೆ ಉಗುಳಿದ್ದನ್ನು ಖಚಿತಪಡಿಸಿದ್ದಾರೆ.

ನಟಿಯರ ಕೈಗೆ ಉಗಿಯುತ್ತಿದ್ದ ಆಮಿರ್ ಖಾನ್; ಈ ಕೆಟ್ಟ ಸಂಪ್ರದಾಯದ ಹಿಂದಿನ ಕಾರಣ ಏನು?
ನಟಿಯರ ಕೈಗೆ ಉಗಿಯುತ್ತಿದ್ದ ಆಮಿರ್ ಖಾನ್; ಈ ಕೆಟ್ಟ ಸಂಪ್ರದಾಯದ ಹಿಂದಿನ ಕಾರಣ ಏನು?
Edited By:

Updated on: Nov 25, 2024 | 10:25 AM

ಆಮಿರ್ ಖಾನ್ ಅವರು ಇತ್ತೀಚೆಗೆ ಸಿನಿಮಾ ಮಾಡಿದ್ದು ಕಡಿಮೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಹೆಚ್ಚೆಚ್ಚು ಸಿನಿಮಾ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆಮಿರ್ ಖಾನ್ ಅವರು ಹೀರೋಯಿನ್​ಗಳ ಕೈಗೆ ಉಗಿಯುತ್ತಿದ್ದರು. ಇದಕ್ಕೆ ಅವರು ನೀಡುತ್ತಿದ್ದ ಕಾರಣ ವಿಚಿತ್ರವಾಗಿತ್ತು. ದಂಗಲ್ ನಟಿಯರಾದ ಫಾತಿಮಾ ಸನಾ ಶೇಖ್, ಸಾನ್ಯಾ ಮಲ್ಹೋತ್ರಾ ಮೊದಲಾದವರು ಇದನ್ನು ಖಚಿತಪಡಿಸಿದ್ದರು.

2016ರಲ್ಲಿ ಆಮಿರ್ ಖಾನ್ ಅವರ ಬಗ್ಗೆ ವೇದಿಕೆ ಮೇಲೆ ಫರಾ ಖಾನ್ ಹೇಳಿದ್ದರು. ಆಮಿರ್ ಖಾನ್ ಮಾಡಿದ ಪ್ರ್ಯಾಂಕ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಆಮಿರ್ ಖಾನ್ ಅವರು ಎಲ್ಲರಿಗೂ ಹೀಗೆಯೇ ಮಾಡುತ್ತಿದ್ದರು. ನಿಮ್ಮ ಕೈ ನೋಡಿ ಭವಿಷ್ಯ ಹೇಳುತ್ತೇನೆ ಎಂದು ಹೇಳಿ ಅವರು ಕೈ ಹಿಡಿದು ಅದಕ್ಕೆ ಉಗಿದು ಓಡಿ ಹೋಗುತ್ತಿದ್ದರು’ ಎಂದಿದ್ದರು ಫರಾ ಖಾನ್.

‘ನಾನು ಹೀರೋಯಿನ್​ಗಳ ಕೈಗೆ ಏಕೆ ಉಗಿಯುತ್ತಿದ್ದೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ನಾನು ಯಾವ ಹೀರೋಯಿನ್​ಗಳ ಕೈ ಮೇಲೆ ತುಪ್ಪೊತ್ತಿದ್ದೆನೋ ಅವರು ನಂಬರ್ ಒನ್ ಆಗುತ್ತಿದ್ದರು’ ಎಂದಿದ್ದ ಆಮಿರ್ ಖಾನ್, ಫಾತಿಮಾ ಹಾಗೂ ಸಾನ್ಯಾ ಕೈಗಳ ಮೇಲೆ ಉಗಿದಿದ್ದನ್ನು ಒಪ್ಪಿಕೊಂಡಿದ್ದರು.

ಈ ವಿಡಿಯೋ ಈಗ ವೈರಲ್ ಆಗಿದೆ. ‘ಆಮಿರ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಹಾಗೂ ಥಗ್ಸ್ ಆಫ್ ಹಿಂದೂಸ್ತಾನ ಸಿನಿಮಾಗಳ ಮೇಲೂ ಎಂಜಲು ಉಗಿಯಬೇಕಿತ್ತು. ಆಗಲಾದರೂ ಸಿನಿಮಾ ಹಿಟ್ ಆಗುತ್ತಿತ್ತೇನೋ’ ಎಂದು ಕೆಲವರು ಕಾಲೆಳೆದಿದ್ದಾರೆ. ‘ಸೆಲೆಬ್ರಿಟಿ ಹಾಗೂ ಶ್ರೀಮಂತರು ಏನೇ ಮಾಡಿದರೂ ಅದು ಫನ್ನಿ ಎಂದು ಅವರೇ ಅಂದುಕೊಳ್ಳಬೇಕು’ ಎಂದಿದ್ದಾರೆ ಅವರು. ‘ಇದೆಂಥಾ ಲಾಜಿಕ್? ಇದು ಪ್ರ್ಯಾಂಕ್​ ಎನ್ನಬಹುದೇ? ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಈ ಮೊದಲು ಆಮಿರ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಮಧ್ಯೆ ವೈಮನಸ್ಸು ಮೂಡಿತ್ತು. ಇದಕ್ಕೆ ಆಮಿರ್ ಖಾನ್ ಮಾಡಿದ್ದ ಪ್ರ್ಯಾಂಕ್ ಕಾರಣ. ಆಮಿರ್ ಖಾನ್ ಅವರು ಮಾಧುರಿ ದೀಕ್ಷಿತ್ ಅವರ ಕೈ ಹಿಡಿದುಕೊಂಡು ತುಪ್ಪಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

Aamir Khan spits on heroines hands to make the number 1 . Did it on Juhi too.
byu/bhasadkweeen inBollyBlindsNGossip

ಇದನ್ನೂ ಓದಿ: ಆಮಿರ್ ಖಾನ್​, ಕಿಚ್ಚ ಸುದೀಪ್ ಭೇಟಿ; ವೈರಲ್ ಫೋಟೋ ಬೆನ್ನಲ್ಲೇ ದೊಡ್ಡ ಸುದ್ದಿ ನಿರೀಕ್ಷೆ

ಆಮಿರ್ ಖಾನ್ ಅವರು ಸದ್ಯ ಸಿನಿಮಾ ನಿರ್ಮಾದಲ್ಲಿ ಬ್ಯುಸಿ ಇದ್ದಾರೆ. ಅವರು ‘ಸಿತಾರೆ ಜಮೀನ್​ಪರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 10:22 am, Mon, 25 November 24