AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್​, ಕಿಚ್ಚ ಸುದೀಪ್ ಭೇಟಿ; ವೈರಲ್ ಫೋಟೋ ಬೆನ್ನಲ್ಲೇ ದೊಡ್ಡ ಸುದ್ದಿ ನಿರೀಕ್ಷೆ

ಕಿಚ್ಚ ಸುದೀಪ್ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಲ್ಲ. ದಕ್ಷಿಣ ಭಾರತದಲ್ಲಿ ಅವರ ಹವಾ ಇನ್ನೊಂದು ಲೆವೆಲ್​ನಲ್ಲಿದೆ. ಅವರ ಖ್ಯಾತಿ ದೇಶಾದ್ಯಂತ ಇದೆ. ಬಾಲಿವುಡ್​ನಲ್ಲೂ ಅವರು ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಒಂದು ಫೋಟೋ ಸಖತ್ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಆಮಿರ್ ಖಾನ್​ ಮತ್ತು ಕಿಚ್ಚ ಸುದೀಪ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಆಮಿರ್ ಖಾನ್​, ಕಿಚ್ಚ ಸುದೀಪ್ ಭೇಟಿ; ವೈರಲ್ ಫೋಟೋ ಬೆನ್ನಲ್ಲೇ ದೊಡ್ಡ ಸುದ್ದಿ ನಿರೀಕ್ಷೆ
ವೈರಲ್ ಫೋಟೋದಲ್ಲಿ ಆಮಿರ್​ ಖಾನ್, ಕಿಚ್ಚ ಸುದೀಪ್
ಮದನ್​ ಕುಮಾರ್​
|

Updated on: Nov 21, 2024 | 4:57 PM

Share

ಸೋಶಿಯಲ್​ ಮೀಡಿಯಾದಲ್ಲಿ ಕಿಚ್ಚ ಸುದೀಪ್​ ಅವರ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಾಲಿವುಡ್​ ನಟ ಆಮಿರ್ ಖಾನ್​ ಜೊತೆ ಸುದೀಪ್​ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಸ್ಟಾರ್​ ನಟರು ಭೇಟಿ ಆಗಿದ್ದು ಯಾಕೆ ಎಂಬ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಕಾರಣ ಇಲ್ಲದೇ ಇಂಥ ಭೇಟಿ ನಡೆಯುವುದಿಲ್ಲ. ಹಾಗಾಗಿ ಯಾವುದೋ ಪ್ರಾಜೆಕ್ಟ್​ ಸಲುವಾಗಿ ಕಿಚ್ಚ ಸುದೀಪ್​ ಮತ್ತು ಆಮಿರ್ ಖಾನ್ ಅವರು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಫೋಟೋ ವೈರಲ್ ಆದ ಬೆನ್ನಲ್ಲೇ ದೊಡ್ಡದೊಂದು ಸುದ್ದಿ ಹೊರಬರಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.

ಒಂದೆಡೆ ಸಿನಿಮಾ, ಇನ್ನೊಂದೆಡೆ ಬಿಗ್ ಬಾಸ್ ನಿರೂಪಣೆ. ಈ ಎರಡೂ ಕೆಲಸಗಳಲ್ಲಿ ಸುದೀಪ್ ಅವರು ಬ್ಯುಸಿ ಆಗಿದ್ದಾರೆ. ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ಬಿಲ್ಲ ರಂಗ ಭಾಷಾ’ ಲೈನ್​ಅಪ್​ನಲ್ಲಿದೆ. ಅತ್ತ, ಆಮಿರ್ ಖಾನ್​ ಅವರು ಸಿನಿಮಾಗಳ ಆಯ್ಕೆಯಲ್ಲಿ ತುಂಬ ಚ್ಯೂಸಿ ಆಗಿದ್ದಾರೆ. ಹಾಗಾದರೆ ಸುದೀಪ್ ಮತ್ತು ಆಮಿರ್ ಖಾನ್ ಅವರು ಯಾವ ಸಿನಿಮಾದ ಸಲುವಾಗಿ ಭೇಟಿ ಮಾಡಿರಬಹುದು ಎಂಬ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ಅದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಕೆಲವು ವರದಿಗಳ ಪ್ರಕಾರ, ಆಮಿರ್ ಖಾನ್ ಅವರ ಮನೆಗೆ ಕಿಚ್ಚ ಸುದೀಪ್ ತೆರಳಿದ್ದಾರೆ. ಅಲ್ಲಿಯೇ ಈ ಫೋಟೋ ತೆಗೆಯಲಾಗಿದೆ ಎಂದು ಕೂಡ ಕೇಳಲಾಗುತ್ತಿದೆ. ಸದ್ಯ ಆಮಿರ್ ಖಾನ್ ಅವರಾಗಲಿ, ಸುದೀಪ್​ ಅವರಾಗಲೀ ಈ ಭೇಟಿಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದಷ್ಟು ಬೇಗ ಸ್ಪೆಷಲ್ ನ್ಯೂಸ್ ಸಿಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇದೆ. ಫೋಟೋ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಸ್ಪರ್ಧಿಗಳು

ಆಮಿರ್ ಖಾನ್​ ಮತ್ತು ಸುದೀಪ್​ ಅವರು ಹಲವು ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿರುವುದು ಗೊತ್ತೇ ಇದೆ. ಯಾವುದೋ ಜಾಹೀರಾತಿನ ಶೂಟಿಂಗ್​ ಸಂದರ್ಭದಲ್ಲಿಯೂ ಈ ಭೇಟಿ ನಡೆದಿರಬಹುದು ಎಂದು ಕೂಡ ಕೆಲವರು ಊಹಿಸಿದ್ದಾರೆ. ಸುದೀಪ್ ಅಭಿಮಾನಿಗಳು ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ. ಕಾರಣಾಂತರಗಳಿಂದ ಈ ಚಿತ್ರದ ರಿಲೀಸ್ ವಿಳಂಬ ಆಗಿದೆ. ಅತ್ತ, ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.