
ಅಮಿತಾಭ್ ಬಚ್ಚನ್ (Amitabh Bachchan) ಅವರು ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಸಿನಿಮಾ ರಂಗದಲ್ಲಿ ಅವರು ಐದು ದಶಕಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಕಿರುತೆರೆಯಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರು ತುಂಬಾನೇ ಶಿಸ್ತಿನ ವ್ಯಕ್ತಿ. ನಟನೆಯ ಜೊತೆಗೆ ಅವರು ಶಿಸ್ತನ್ನು ರೂಢಿಸಿಕೊಂಡು ಬಂದಿದ್ದಾರೆ. ಅವರನ್ನು ರಾತ್ರಿ 8 ಗಂಟೆ ಬಳಿಕ ಇಂಡಸ್ಟ್ರಿಯವರು ಭೇಟಿ ಮಾಡಲು ಸಾಧ್ಯವಿಲ್ಲ.
ಸಾಮಾನ್ಯವಾಗಿ ಬಾಲಿವುಡ್ ಹೀರೋಗಳು ಹೆಚ್ಚೆಚ್ಚು ಪಾರ್ಟಿ ಮಾಡೋಕೆ ಇಷ್ಟಪಡುತ್ತಾರೆ. ಅವರ ರಾತ್ರಿ ಜೀವನವೇ ಬೇರೆ ರೀತಿ ಇರುತ್ತದೆ. ಬೇರೆ ಹೀರೋಗಳು ಕರೆದರು ಎಂದು ಪಾರ್ಟಿಗೆ ಜಾಯಿನ್ ಆಗುತ್ತಾರೆ. ಇಲ್ಲವೇ ಸಿನಿಮಾ ಶೂಟ್ನಲ್ಲಿ ರಾತ್ರಿಯಿಡಿ ಪಾಲ್ಗೊಳ್ಳುತ್ತಾರೆ. ಆದರೆ, ಖಾಸಗಿ ಜೀವನವನ್ನು ಅಮಿತಾಭ್ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು, ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದಾರೆ.
ರಾಜಾ ಬುಂದೇಲಾ ಅವರು ಅಮಿತಾಭ್ ಬಚ್ಚನ್ ಜೊತೆ 1989ರ ‘ಮೇ ಆಜಾದ್ ಹೂ’ ಸಿನಿಮಾದಲ್ಲಿ ನಟಿಸಿದ್ದರು. ಅವರು ಅಮಿತಾಭ್ ಕುರಿತ ಒಂದಷ್ಟು ವಿಷಗಳನ್ನು ಹಂಚಿಕೊಂಡಿದ್ದಾರೆ. ‘ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಅವರ ಜೊತೆ ಒಂದು ಸಿನಿಮಾ ಮಾಡಿದ್ದೆ. ಅವರಿಗೆ ಎಲ್ಲಾ ಸಂಭಾಷಣೆಗಳು ಚೆನ್ನಾಗಿ ನೆನಪಿದ್ದವು’ ಎಂದಿದ್ದಾರೆ.
‘ಒಮ್ಮೆ ನಾವು ಗೋವಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ, ಅಮಿತಾಭ್ ಬಚ್ಚನ್ ಮುಂಬೈನಲ್ಲಿಯೇ ಉಳಿದುಹೋಗಿವೆ ಎಂದು ತಿಳಿದುಬಂತು. ಈ ಹಿಂದೆ ಅದೇ ಶೂನಲ್ಲಿ ಶೂಟ್ ಮಾಡಿದ್ದರಿಂದ ಕಂಟ್ಯೂನಿಟಿಗೆ ಅದೇ ಶೋಗಳು ಬೇಕಾಗಿದ್ದವು. ಆ ದಿನಗಳಲ್ಲಿ ವಿಮಾನದ ಕನೆಕ್ಟಿವಿಟಿ ಇಷ್ಟಾಗಿ ಇರಲಿಲ್ಲ’ ಎಂದಿದ್ದಾರೆ ಅವರು.
‘ಮರುದಿನ ಶೂಟ್ ಇರಲ್ಲ ಎಂದು ಎಲ್ಲರೂ ಖುಷಿಪಟ್ಟರು. ಆದರೆ, ಅಮಿತಾಭ್ ಅದೇ ಶೋಗಳ ಜೊತೆ ಮರುದಿನ 7.30ಕ್ಕೆ ಸೆಟ್ನಲ್ಲಿ ಇದ್ದರು. ಅದು ಶಿಸ್ತು’ ಎಂದಿದ್ದಾರೆ ಬುಂದೇಲಾ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮನೆಯಲ್ಲಿದೆ ಚಿನ್ನದ ಟಾಯ್ಲೆಟ್
‘ಅವರು ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತಾರೆ. ನಾವು ಅವರ ಮನೆಯಲ್ಲಿ ಭೇಟಿಯಾದಾಗಲೂ ಅವರು ಎಂದಿಗೂ ಗಾಸಿಪ್ ಮಾಡುತ್ತಿರಲಿಲ್ಲ. ನಾನು ಕೇಳಿರುವಂತೆ, ರಾತ್ರಿ 8 ಗಂಟೆಯ ನಂತರ ಅವರು ಉದ್ಯಮದ ಯಾರನ್ನೂ ತಮ್ಮ ಮನೆಗೆ ಬಿಡುತ್ತಿರಲಿಲ್ಲ. ಅವರು ತಮ್ಮ ಬಾಗಿಲುಗಳಿಗೆ ಬೀಗ ಹಾಕಿಕೊಳ್ಳುತ್ತಿದ್ದರು. ಅವರು ತಮ್ಮ ವ್ಯವಹಾರ ಮತ್ತು ಕುಟುಂಬದ ನಡುವೆ ಆ ಸಮತೋಲನವನ್ನು ಕಾಯ್ದುಕೊಳ್ಳಲು ಇಷ್ಟಪಡುತ್ತಾರೆ’ ಎಂದಿದ್ದಾರೆ ರಾಜಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:07 am, Fri, 23 January 26