ಶ್ರೀದೇವಿ ಮನ ಒಲಿಸಲು ಒಂದು ಟ್ರಕ್ ಗುಲಾಬಿ ಕಳುಹಿಸಿದ್ದ ಅಮಿತಾಭ್ ಬಚ್ಚನ್

ಶ್ರೀದೇವಿ ಮತ್ತು ಅಮಿತಾಭ್ ಬಚ್ಚನ್ ಅವರು ‘ಖುದಾ ಗವಾ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ, ಆರಂಭದಲ್ಲಿ ಶ್ರೀದೇವಿ ಈ ಚಿತ್ರದಲ್ಲಿ ನಟಿಸಲು ಇಚ್ಛಿಸಿರಲಿಲ್ಲ. ಅಮಿತಾಭ್ ಅವರು ಶ್ರೀದೇವಿಯನ್ನು ಮನವೊಲಿಸಲು ಒಂದು ಟ್ರಕ್ ಗುಲಾಬಿ ಹೂಗಳನ್ನು ಕಳುಹಿಸಿದ್ದರು. ಈ ಘಟನೆಯನ್ನು "ಶ್ರೀದೇವಿ: ದಿ ಎಟರ್ನಲ್ ಸ್ಕ್ರೀನ್ ಗಾಡೆಸ್" ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಶ್ರೀದೇವಿ ಮನ ಒಲಿಸಲು ಒಂದು ಟ್ರಕ್ ಗುಲಾಬಿ ಕಳುಹಿಸಿದ್ದ ಅಮಿತಾಭ್ ಬಚ್ಚನ್
ಅಮಿತಾಭ್-ಶ್ರೀದೇವಿ
Updated By: ರಾಜೇಶ್ ದುಗ್ಗುಮನೆ

Updated on: Aug 13, 2025 | 8:09 AM

ನಟಿ ಶ್ರೀದೇವಿ (Sridevi) ಅವರು ಇಂದು ನಮ್ಮ ಜೊತೆ ಇಲ್ಲ. ಆದರೆ, ಅವರು ಮಾಡಿದ ಸಿನಿಮಾಗಳು, ಅವರು ಬಿಟ್ಟು ಹೋದ ನೆನಪು ಇಂದು ನಮ್ಮ ಜೊತೆಗೆ ಇದೆ. ಶ್ರೀದೇವಿ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಆದರೆ, ಅವರ ಜೀವನ ದುರಂತ ಸಾವಿನ ಜೊತೆ ಅಂತ್ಯವಾಯಿತು. ಇಂದು (ಆಗಸ್ಟ್ 13) ಅವರ ಜನ್ಮದಿನ ಮತ್ತು ಈ ದಿನ ಅವರ ಬಗ್ಗೆ ವಿಶೇಷ ನೆನಪುಗಳನ್ನು ಮಾಡಿಕೊಳ್ಳೋಣ. ಅಮಿತಾಭ್ ಬಚ್ಚನ್ ಅವರು ಒಮ್ಮೆ ಶ್ರೀದೇವಿಗಾಗಿ ಒಂದು ಟ್ರಕ್ ಗುಲಾಬಿ ಹೂಗಳನ್ನು ಕಳುಹಿಸಿಕೊಟ್ಟಿದ್ದರು.

ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ‘ಖುದಾ ಗವಾ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರ 1992 ರಲ್ಲಿ ಬಿಡುಗಡೆಯಾಯಿತು. ಆದರೆ ಆರಂಭದಲ್ಲಿ ಶ್ರೀದೇವಿ ಈ ಚಿತ್ರಕ್ಕೆ ಸಿದ್ಧರಿರಲಿಲ್ಲ. ಆದರೆ ಅಮಿತಾಭ್ ಶ್ರೀದೇವಿಯನ್ನು ಮನವೊಲಿಸಲು ಅಂತಹ ತಂತ್ರವನ್ನು ಬಳಸಿದರು, ಅದನ್ನು ನಟಿ ಊಹಿಸಲೂ ಸಾಧ್ಯವಾಗಲಿಲ್ಲ. ಈ ಘಟನೆಯನ್ನು ‘ಶ್ರೀದೇವಿ: ದಿ ಎಟರ್ನಲ್ ಸ್ಕ್ರೀನ್ ಗಾಡೆಸ್’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

‘ಖುದಾ ಗವಾ’ ಚಿತ್ರಕ್ಕೂ ಮುನ್ನ ಶ್ರೀದೇವಿ ಮತ್ತು ಅಮಿತಾಭ್ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ‘ಖುದಾ ಗವಾ’ ಚಿತ್ರದ ನಿರ್ದೇಶಕ ಮುಕುಲ್ ಎಸ್ ಆನಂದ್ ಅವರು ಬಿಗ್ ಬಿ ಅವರನ್ನು ಸ್ಕ್ರಿಪ್ಟ್‌ನೊಂದಿಗೆ ಸಂಪರ್ಕಿಸಿದಾಗ, ಶ್ರೀದೇವಿ ತಮ್ಮೊಂದಿಗೆ ಚಿತ್ರದಲ್ಲಿ ಇರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ
ಸಹೋದರನ ರೀತಿ ಕಾಣುತ್ತಿದ್ದ ಬೋನಿಯನ್ನೇ ವಿವಾಹ ಆಗಿದ್ದ ಶ್ರೀದೇವಿ
‘ಕೂಲಿ’ ಹೆಸರಲ್ಲಿ ವಸೂಲಿ; ಹೇಳೋರೂ ಇಲ್ಲ, ಕೇಳೋರೂ ಇಲ್ಲ
‘ಸು ಫ್ರಮ್ ಸೋ’ ಕಲೆಕ್ಷನ್​ನಲ್ಲಿ ವಿದೇಶಿಗರ ಪಾಲೆಷ್ಟು? ಪರಭಾಷೆಯವರದ್ದೆಷ್ಟು
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ

ಇದನ್ನೂ ಓದಿ: ಸಹೋದರನ ರೀತಿ ಕಾಣುತ್ತಿದ್ದ ಬೋನಿಯನ್ನೇ ವಿವಾಹ ಆಗಿದ್ದ ಶ್ರೀದೇವಿ

ಆದರೆ, ಶ್ರೀದೇವಿ ಚಿತ್ರದಲ್ಲಿ ಕೆಲಸ ಮಾಡಲು ಒಪ್ಪಲಿಲ್ಲ. ಪದೇಪದೇ ಒಂದೇ ಹೀರೋ ಜೊತೆ ನಟಿಸೋದು ಸರಿಯಲ್ಲ ಎಂದು ಭಾವಿಸಿದ್ದರು. ನಂತರ ಅವರನ್ನು ಮನವೊಲಿಸಲು, ಅಮಿತಾಭ್ ಶ್ರೀದೇವಿಗಾಗಿ ಗುಲಾಬಿಗಳಿಂದ ತುಂಬಿದ ಟ್ರಕ್ ಅನ್ನು ಕಳುಹಿಸಿದರು. ಅಮಿತಾಭ್ ಅವರ ಈ ತಂತ್ರವು ಕೆಲಸ ಮಾಡಿತು.

ಈ ಷರತ್ತಿಗೆ ಶ್ರೀದೇವಿ ಒಪ್ಪಿಕೊಂಡರು.

ಅಮಿತಾಭ್ ಮಾಡಿದ್ದಕ್ಕೆ ಶ್ರೀದೇವಿ ಆಘಾತಕ್ಕೊಳಗಾದರು. ಆದರೂ ಅವರು ಚಿತ್ರದಲ್ಲಿ ಕೆಲಸ ಮಾಡಲು ಒಂದು ಷರತ್ತು ಹಾಕಿದರು. ‘ಖುದಾ ಗವಾ’ ಚಿತ್ರದಲ್ಲಿ ತಾಯಿ ಮತ್ತು ಮಗಳಿಬ್ಬರ ಪಾತ್ರವನ್ನು  ತಾವೇ ನಿರ್ವಹಿಸುವುದು ಅವರ ಷರತ್ತಾಗಿತ್ತು. ನಿರ್ಮಾಪಕರು ಆ ಷರತ್ತನ್ನು ಒಪ್ಪಿಕೊಂಡರು ಮತ್ತು ನಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ತೆಲುಗು ನಟ ನಾಗಾರ್ಜುನ ಕೂಡ ಚಿತ್ರದ ಭಾಗವಾಗಿದ್ದರು. ಈ ಚಿತ್ರ ಪ್ರೇಕ್ಷಕರಿಂದ ತುಂಬಾ ಇಷ್ಟವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.