ಮುಸ್ಲಿಂ ಧರ್ಮದವರ ಪವಿತ್ರ ಹಬ್ಬ ರಂಜಾನ್ ಆಚರಣೆ ವಿಶ್ವಾದ್ಯಂತ ಜೋರಾಗಿದೆ. ಈ ಸಂದರ್ಭದಲ್ಲಿ ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಒಂದು ಕಡೆ ಸೇರಿದ್ದಾರೆ. ಈ ಫೋಟೋನ ಸಲ್ಮಾನ್ ಖಾನ್ (Salman Khan) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ ಅನ್ನೋದು ವಿಶೇಷ. ಶಾರುಖ್ ಖಾನ್ (Shah Rukh Khan) ಅವರು ಈ ಫೋಟೋದಲ್ಲಿ ಮಿಸ್ ಆಗಿದ್ದಾರೆ ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.
ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. 1994ರಲ್ಲಿ ತೆರೆಗೆ ಬಂದ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ತೆರೆಹಂಚಿಕೊಂಡಿದ್ದರು. ಸಲ್ಮಾನ್ ಖಾನ್ ಚಿತ್ರಕ್ಕೆ ಆಮಿರ್ ಖಾನ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿಯೂ ಇತ್ತೀಚೆಗೆ ಹರಿದಾಡಿತ್ತು. ಆದರೆ, ಆ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಹೀಗಿರುವಾಗಲೇ ಈದ್ ದಿನ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ಈ ವಾರ ಸಲ್ಮಾನ್ ಖಾನ್ ಸಿನಿಮಾ ಅಬ್ಬರ; ಪೈಪೋಟಿ ನೀಡಲಿವೆ ಕನ್ನಡದ ಹಲವು ಚಿತ್ರಗಳು
ಸಲ್ಮಾನ್ ಖಾನ್ ಕಪ್ಪು ಬಣ್ಣದ ಬಟ್ಟೆ ಹಾಕಿದ್ದಾರೆ. ಆಮಿರ್ ಖಾನ್ ಟೀ ಶರ್ಟ್ ಧರಿಸಿದ್ದಾರೆ. ಅನೇಕರು ಇದು ಆಮಿರ್ ಖಾನ್ ಮನೆಯಲ್ಲಿ ನಡೆದ ಭೇಟಿ ಎಂದು ಊಹಿಸಿದ್ದಾರೆ. ಈ ಪೋಸ್ಟ್ಗೆ ‘ಚಾಂದ್ ಮುಬಾರಕ್’ ಎಂದು ಸಲ್ಲು ಕ್ಯಾಪ್ಶನ್ ನೀಡಿದ್ದಾರೆ. ಶಾರುಖ್ ಖಾನ್ ಕೂಡ ಈ ಫೋಟೋದಲ್ಲಿದ್ದರೆ ಮತ್ತಷ್ಟು ಖುಷಿ ಆಗುತ್ತಿತ್ತು ಎನ್ನುವ ಅಭಿಪ್ರಾಯ ಫ್ಯಾನ್ಸ್ ವಲಯದಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಬೆಂಬಲಿಸಿದ ರಾಖಿ ಸಾವಂತ್ಗೂ ಸಂಕಷ್ಟ; ಬಿಷ್ಣೋಯ್ ಗ್ಯಾಂಗ್ನಿಂದ ಬಂತು ಎಚ್ಚರಿಕೆ
ಈದ್ ಪ್ರಯುಕ್ತ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಈ ಚಿತ್ರ ರಿಮೇಕ್ ಆಗಿರುವುದರಿಂದ ನಟ, ನಿರ್ಮಾಪಕ ಸಲ್ಮಾನ್ ಖಾನ್ಗೆ ಭಯ ಇದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ನೋಡಿದರೆ ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿಯಲ್ಲಿ ಪರ್ಫಾರ್ಮೆನ್ಸ್ ಮಾಡಬಹುದು ಎನ್ನುವ ಅಂದಾಜು ಸಿಗಲಿದೆ. ಆಮಿರ್ ಖಾನ್ ಸದ್ಯ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಡ್ರೀಮ್11 ಜಾಹೀರಾತಿನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:06 am, Sat, 22 April 23