AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

23 ವರ್ಷದ ಹಿಂದಿನ ಕ್ಲಾಸಿಕ್ ಸಿನಿಮಾಕ್ಕೆ ಸೀಕ್ವೆಲ್

Anil-Shankar: 23 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕ್ಲಾಸಿಕ್ ಸಿನಿಮಾದ ಸೀಕ್ವೆಲ್ ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ. ಯಾವುದು ಆ ಸಿನಿಮಾ? ನಟ-ನಿರ್ದೇಶಕ ಯಾರು?

23 ವರ್ಷದ ಹಿಂದಿನ ಕ್ಲಾಸಿಕ್ ಸಿನಿಮಾಕ್ಕೆ ಸೀಕ್ವೆಲ್
ಮಂಜುನಾಥ ಸಿ.
|

Updated on: Mar 30, 2024 | 7:44 PM

Share

ಹಳೆಯ ಕ್ಲಾಸಿಕ್ ಹಾಡುಗಳನ್ನು ರೀಮಿಕ್ಸ್ ಮಾಡುವುದು, ಹಳೆಯ ಕ್ಲಾಸಿಕ್ ಸಿನಿಮಾಗಳ ಪ್ರೀಕ್ವೆಲ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ‘ಶಕ್ತಿಮಾನ್’ ಧಾರಾವಾಹಿಯನ್ನು ಸಿನಿಮಾ ಮಾಡಲಾಗುತ್ತಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ ‘ಅನ್ನಿಯನ್’ ಸಿನಿಮಾವನ್ನು ಹಿಂದಿಯಲ್ಲಿ ಮತ್ತೆ ಸಿನಿಮಾ ಮಾಡಲಾಗುತ್ತಿದೆ. ಹಳೆಯ ‘ಡಾನ್’ (Don) ಸಿನಿಮಾವನ್ನು ಮತ್ತೆ ಮಾಡಲಾಗಿದೆ. ಇದೀಗ ‘ಡಾನ್ 3’ ಸಹ ಬರುತ್ತಿದೆ. ಇದೀಗ 23 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಬ್ಲಾಕ್ ಬಸ್ಟರ್ ಸಿನಿಮಾ ಒಂದನ್ನು ಮತ್ತೆ ನಿರ್ಮಿಸಲು ಯೋಜನೆ ರೆಡಿಯಾಗುತ್ತಿದೆ. ಅದುವೇ ‘ನಾಯಕ್’.

ಅನಿಲ್ ಕಪೂರ್ ನಟಿಸಿದ್ದ ‘ನಾಯಕ್’ ಸಿನಿಮಾ 2001 ರಲ್ಲಿ ಬಿಡುಗಡೆ ಆಗಿತ್ತು. ತಮಿಳಿನಲ್ಲಿ ಅರ್ಜುನ್ ಸರ್ಜಾ ನಟಿಸಿದ್ದ ‘ಮೊದಲ್ವನ್’ ಸಿನಿಮಾದ ರೀಮೇಕ್ ಇದು. ‘ಮೊದಲ್ವನ್’ ಸೂಪರ್ ಹಿಟ್ ಆಗಿತ್ತು. ಅಂತೆಹೇ ‘ನಾಯಕ್’ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಯ್ತು. ಪತ್ರಕರ್ತನೊಬ್ಬ ಒಂದು ದಿನದ ಕಾಲ ಸಿಎಂ ಆಗಿ ಭ್ರಷ್ಟರನ್ನೆಲ್ಲ ಜೈಲಿಗೆ ಕಳಿಸುವ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು. ತಮಿಳಿನಲ್ಲಿ ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ಶಂಕರ್ ಅವರೇ, ‘ನಾಯಕ್’ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಸೀಕ್ವೆಲ್ ಮಾಡಲಿದ್ದಾರೆ ಎನ್ನಲಾಗುತ್ತಿದ್ದು, ಈ ಗಾಳಿ ಸುದ್ದಿಗೆ ಪೂರಕವಾದ ಚಿತ್ರ, ವಿಡಿಯೋಗಳು ಇದೀಗ ಬಿಡುಗಡೆ ಆಗಿದೆ.

ಅನಿಲ್ ಕಪೂರ್ ಹಾಗೂ ನಿರ್ದೇಶಕ ಶಂಕರ್ ಇತ್ತೀಚೆಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ‘ನಾಯಕ್ 2’ ಸಿನಿಮಾಕ್ಕಾಗಿ ಈ ಜೋಡಿ ಒಂದಾಗುತ್ತಿದೆ. ‘ನಾಯಕ್ 2’ ಸಿನಿಮಾದ ಕತೆ ಅನಿಲ್​ಗೆ ಇಷ್ಟವಾಗಿದ್ದು, ಮುಂದಿನ ವರ್ಷ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:‘12th ಫೇಲ್​’ ಚಿತ್ರದಿಂದ ಬದಲಾಯಿತು ಮೇಧಾ ಶಂಕರ್ ಬದುಕು

ಶಂಕರ್ ಪ್ರಸ್ತುತ ಬಹಳ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಇದರ ಜೊತೆಗೆ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾದ ನಿರ್ದೇಶನವನ್ನೂ ಮಾಡಲಿದ್ದಾರೆ. ‘ಇಂಡಿಯನ್ 2’ ಸಿನಿಮಾ ಅರ್ಧಕ್ಕೆ ನಿಂತಿತ್ತು, ಅದನ್ನು ಶಂಕರ್ ಮುಂದುವರೆಸಿದ್ದಾರೆ. ಇವರೆಡರ ಬಳಿಕ ವಿಕ್ರಂ ನಟಿಸಿದ್ದ ‘ಅನ್ನಿಯನ್’ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದು, ರಣ್​ವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಶಂಕರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗಳ ಬಳಿಕವಷ್ಟೆ ‘ನಾಯಕ್ 2’ ಸಿನಿಮಾವನ್ನು ಶಂಕರ್ ಕೈಗೆತ್ತಿಕೊಳ್ಳಲಿದ್ದಾರೆ.

ಇನ್ನು ಅನಿಲ್ ಕಪೂರ್ ತಮ್ಮ 67ನೇ ವರ್ಷದಲ್ಲಿಯೂ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಹೌಸ್ ಓನರ್’, ‘ವೆಲ್ ಕಮ್ ಟು ಜಂಗಲ್’, ‘ಅನಿಮಲ್ 2’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ