20ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು

| Updated By: ರಾಜೇಶ್ ದುಗ್ಗುಮನೆ

Updated on: Jul 19, 2024 | 2:24 PM

2003ರ ಸೆಪ್ಟೆಂಬರ್ 6ರಂದು ತಿಶಾ ಅವರು ಜನಿಸಿದರು. ಅವರು ಕೃಷ್ಣ ಹಾಗೂ ತಾನ್ಯಾ ಸಿಂಗ್ ಮಗಳು. ದಂಪತಿಗೆ ಇರುವ ಏಕೈಕ ಮಗಳು ಇವರಾಗಿದ್ದರು. ಅವರ ಬಗ್ಗೆ ಹೊರ ಜಗತ್ತಿಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ತಿಶಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ.

20ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು
20ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು
Follow us on

‘ಅನಿಮಲ್’, ‘ಭೂಲ್ ಭುಲಯ್ಯ 2’ ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಕೃಷ್ಣ ಕುಮಾರ್​ಗೆ ಶಾಕ್ ಎದುರಾಗಿದೆ. ಅವರ ಮಗಳು ತಿಶಾ ಕುಮಾರ್ ಅವರು ಕೇವಲ 20ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳೋಕೆ ಕುಟುಂಬದ ಬಳಿ ಸಾಧ್ಯವಾಗಿಲ್ಲ. ಜುಲೈ 18ರಂದು ತಿಶಾ ನಿಧನ ಹೊಂದಿದ್ದು, ಇಂದು (ಜುಲೈ 19) ಕುಟುಂಬದವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೃಷ್ಣ ಕುಮಾರ್ ಅವರು ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರಿಸ್​ನ ಭಾಗವಾಗಿದ್ದಾರೆ. ಟಿ-ಸೀರಿಸ್ ನಿರ್ಮಾಣದ ಸಿನಿಮಾಗಳಲ್ಲಿ ಇವರ ಪಾಲೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಟಿ-ಸೀರಿಸ್ ಕಡೆಯಿಂದ ಸುತ್ತೋಲೆ ರಿಲೀಸ್ ಮಾಡಲಾಗಿದೆ. ‘ಕೃಷ್ಣ ಕುಮಾರ್ ಅವರ ಮಗಳು ತಿಶಾ ಅವರು ತೀರಿಕೊಂಡಿದ್ದಾರೆ. ಅನಾರೋಗ್ಯದ ವಿರುದ್ಧ ಅವರು ಹೋರಾಡುತ್ತಿದ್ದರು. ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ’ ಎಂದು ಕೋರಿದ್ದಾರೆ.

ಕೆಲವು ಮೂಲಗಳ ಪ್ರಕಾರ ತಿಶಾ ಅವರು ಕ್ಯಾನ್ಸರ್​ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರಂತೆ. ಅವರು ಅಲ್ಲಿಯೇ ನಿಧನ ಹೊಂದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಸಣ್ಣ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.

ತಿಶಾ ಅವರು 2003ರ ಸೆಪ್ಟೆಂಬರ್ 6ರಂದು ಜನಿಸಿದರು. ಅವರು ಕೃಷ್ಣ ಹಾಗೂ ತಾನ್ಯಾ ಸಿಂಗ್ ಮಗಳು. ದಂಪತಿಗೆ ಇರುವ ಏಕೈಕ ಮಗಳು ಇವರಾಗಿದ್ದರು. ಅವರ ಬಗ್ಗೆ ಹೊರ ಜಗತ್ತಿಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ತಿಶಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಟಿ-ಸೀರಿಸ್ ಸಿನಿಮಾ ಪ್ರದರ್ಶನಗಳ ವೇಳೆ ಅವರು ಆಗಮಿಸಿದ್ದು ಇದೆ.

ಇದನ್ನೂ ಓದಿ: ನಟನಿಗೂ ಕಾಮುಕರ ಕಾಟ; ಕಾಸ್ಟಿಂಗ್​ ಕೌಚ್​ ಅನುಭವ ವಿವರಿಸಿದ ‘ಅನಿಮಲ್​’ ಕಲಾವಿದ

ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಇದನ್ನು ಟಿ-ಸೀರಿಸ್ ನಿರ್ಮಾಣ ಮಾಡಿದೆ. ಈ ಸಿನಿಮಾದ ಪ್ರೀಮಿಯರ್ ಸಂದರ್ಭದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಸಂದರ್ಭದ ಫೋಟೋ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.