ಹಾರ್ದಿಕ್-ನತಾಶಾ To ನಿವೇದಿತಾ-ಚಂದನ್; ಏಳೇ ತಿಂಗಳಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳ ವಿಚ್ಛೇದನ
ಈ ಮೊದಲು ಹಲವು ಸೆಲೆಬ್ರಿಟಿಗಳು ವಿಚ್ಛೇದನ ಪಡೆದುಕೊಂಡಿದ್ದು ಇದೆ. 2024ರಲ್ಲೂ ವಿಚ್ಛೇದನಗಳ ಮೇಲೆ ವಿಚ್ಛೇದನ ನಡೆದಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಂದ ಹಿಡಿದು ಹಾರ್ದಿಕ್ ಪಾಂಡ್ಯ ಹಾಗೂ ನಾತಾಶಾವರೆಗೆ ಅನೇಕ ಸೆಲೆಬ್ರಿಟಿಗಳು ಡಿವೋರ್ಸ್ ಪಡೆದಿದ್ದಾರೆ.
2024ನೇ ವರ್ಷದಲ್ಲಿ ಇನ್ನೂ ಏಳು ತಿಂಗಳುಗಳು ಪೂರ್ಣಗೊಂಡಿಲ್ಲ. ಆಗಲೇ ಅನೇಕ ಸೆಲೆಬ್ರಿಟಿ ಜೋಡಿಗಳ ವಿಚ್ಛೇದನಗಳು ನಡೆದು ಹೋಗಿವೆ. ಕನ್ನಡದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ತೆಗೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಕೂಡ ಡಿವೋರ್ಸ್ ಪಡೆದ ಬಗ್ಗೆ ಘೋಷಣೆ ಮಾಡಿದ್ದಾರೆ. ಈವರೆಗೆ ಆದ ಡಿವೋರ್ಸ್ಗಳ ಬಗ್ಗೆ ಇಲ್ಲಿದೆ ಮಾಹಿತಿ
ನಿವೇದಿತಾ-ಚಂದನ್
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಬಿಗ್ ಬಾಸ್ನಲ್ಲಿ ಪರಸ್ಪರ ಭೇಟಿ ಆದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಕೊವಿಡ್ ಸಂದರ್ಭದಲ್ಲಿ ಇವರು ಮದುವೆ ಆಗಿದ್ದರು. ಕೆಲವೇ ವರ್ಷಗಳಲ್ಲಿ ಇವರು ವಿಚ್ಛೇದನ ಪಡೆದಿದ್ದಾರೆ. ಇವರ ಡಿವೋರ್ಸ್ಗೆ ಕಾರಣವನ್ನು ಇವರು ರಿವೀಲ್ ಮಾಡಿದ್ದಾರೆ. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವಾಗದೆ ಇರುವುದೇ ಇದಕ್ಕೆಲ್ಲ ಕಾರಣ.
ಯುವ-ಶ್ರೀದೇವಿ
ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಕೋರ್ಟ್ ಇವರಿಗೆ ಇನ್ನೂ ಡಿವೋರ್ಸ್ ನೀಡಿಲ್ಲ. ಸದ್ಯ ಈ ಪ್ರಕರಣ ಕೋರ್ಟ್ನಲ್ಲಿದೆ. ಇವರಿಬ್ಬರೂ ವಿಚ್ಛೇದನ ಪಡೆಯೋದು ಖಚಿತವಾಗಿದೆ.
ಹಾರ್ದಿಕ್-ನತಾಶಾ
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಇಬ್ಬರೂ ಬೇರೆ ಆಗುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಈ ದಂಪತಿಗೆ ಅಗಸ್ತ್ಯ ಹೆಸರಿನ ಮಗ ಇದ್ದಾನೆ. ಈ ದಂಪತಿ ಕಳೆದ ಕೆಲ ತಿಂಗಳಿಂದ ದೂರವೇ ಇದ್ದರು. ಇವರು ವಿಚ್ಛೇದನಕ್ಕೆ ಕಾರಣ ರಿವೀಲ್ ಮಾಡಿಲ್ಲ.
ಇಶಾ ಕೊಪ್ಪಿಕರ್ ಹಾಗೂ ಟಿಮ್ಮಿ ನಾರಂಗ್
ನಟಿ ಇಶಾ ಕೊಪ್ಪಿಕರ್ ಹಾಗೂ ಉದ್ಯಮಿ ಟಿಮ್ಮಿ ನಾರಂಗ್ ಅವರು ಈ ವರ್ಷದ ಆರಂಭದಲ್ಲಿ ಬೇರೆ ಆಗುವ ನಿರ್ಧಾರ ಘೋಷಿಸಿದರು. 2009ರಲ್ಲಿ ಇವರು ಮದುವೆ ಆಗಿದ್ದರು. ಇವರಿಗೆ ರಿಯಾನಾ ಹೆಸರಿನ ಮಗಳು ಇದ್ದಾಳೆ. ಮಗಳನ್ನು ಒಟ್ಟಾಗಿ ಬೆಳೆಸೋದಾಗಿ ಹೇಳಿದ್ದಾರೆ.
ಇಶಾ ಡಿಯೋಲ್ ಹಾಗೂ ಭರತ್ ತಕ್ತಾನಿ
ಬಾಲಿವುಡ್ ನಟಿ ಇಶಾ ಡಿಯೋಲ್ ಅವರು ಉದ್ಯಮಿ ಭರತ್ ತಕ್ತಾನಿ ಅವರನ್ನು 2012ರಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಅವರು ಈ ವರ್ಷ ಬೇರೆ ಆಗುವ ನಿರ್ಧಾರ ಘೋಷಣೆ ಮಾಡಿದರು.
ದಿಲ್ಜೀತ್ ಕೌರ್ ಹಾಗೂ ನಿಖಿಲ್ ಪಟೇಲ್
ಟಿವಿ ನಟಿ ದಿಲ್ಜೀತ್ ಕಭರ್ ಹಾಗೂ ಪತಿ ನಿಖಿಲ್ ಪಟೇಲ್ ಅವರು 2024ರಲ್ಲಿ ಬೇರೆ ಆಗುವ ಬಗ್ಗೆ ಘೋಷಣೆ ಮಾಡಿದ್ದಾರೆ. ನಿಖಿಲ್ ಅವರು ಕೀನ್ಯಾದಲ್ಲಿರುವ ಉದ್ಯಮಿ. ಒಬ್ಬರಿಗೊಬ್ಬರು ಇವರು ಆರೋಪ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ಸುದ್ದಿ ಬಳಿಕ ಪರೋಕ್ಷವಾಗಿ ತಿರುಗೇಟು ನೀಡಿದ ಮಲೈಕಾ, ಅರ್ಜುನ್ ಕಪೂರ್
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಮಧ್ಯೆ ಆಪ್ತತೆ ಇತ್ತು. ಇಬ್ಬರೂ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇವರು ಮದುವೆ ಆಗಿಲ್ಲ, ಬದಲಿಗೆ ಬೇರೆ ಆದರು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.
ಐಶ್ವರ್ಯಾ-ಅಭಿಷೇಕ್?
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಕೂಡ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ನಡೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.