ಅರ್ಜುನ್ ಕಪೂರ್ ಬಳಿಕ ಹೊಸ ವ್ಯಕ್ತಿ ಜತೆ ಮಲೈಕಾ ಅರೋರಾ ಡೇಟಿಂಗ್; ಫೋಟೋ ವೈರಲ್
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಸಂಬಂಧ ಅಂತ್ಯವಾಗಿದೆ. ಈಗ ಮಲೈಕಾ ಬದುಕಿನಲ್ಲಿ ಬೇರೆ ಪುರುಷನ ಎಂಟ್ರಿ ಆಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಫೋಟೋ ವೈರಲ್ ಆಗಿದೆ. ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಮಲೈಕಾ ಅರೋರಾ ಅವರು ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಹೊಸ ಸುದ್ದಿ ನೀಡಿದ್ದಾರೆ.

ನಟಿ ಮಲೈಕಾ ಅರೋರಾ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು ಬ್ರೇಕಪ್ ಕಾರಣದಿಂದ. ನಟ ಅರ್ಜುನ್ ಕಪೂರ್ ಜೊತೆ ಅವರು ಹಲವು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರು ಬ್ರೇಕಪ್ ಮಾಡಿಕೊಂಡರು ಎಂಬ ವಿಷಯ ಬಹಿರಂಗ ಆಯಿತು. ಈ ಬಗ್ಗೆ ಮಲೈಕಾ ಅವರಾಗಲಿ, ಅರ್ಜುನ್ ಕಪೂರ್ ಅವರಾಗಲಿ ಈವರೆಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಅಷ್ಟರಲ್ಲಾಗಲೇ ಮಲೈಕಾ ಅರೋರಾ ಅವರು ಹೊಸ ವ್ಯಕ್ತಿ ಜೊತೆ ಡೇಟಿಂಗ್ ಮಾಡಲು ಆರಂಭಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಮಲೈಕಾ ಅರೋರಾ ಅವರು ಸದ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸ್ಪೇನ್ನಲ್ಲಿ ಅವರು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅವರಲ್ಲಿ ಹೊಸ ವ್ಯಕ್ತಿಯನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಹಾಗಂತ ಈ ಫೋಟೋದಲ್ಲಿ ಆ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿ ಕಾಣುವುದಿಲ್ಲ. ಮುಖ ಕಾರಣದ ರೀತಿಯಲ್ಲಿ ಬ್ಲರ್ ಮಾಡಿ ಈ ಫೋಟೋವನ್ನು ಮಲೈಕಾ ಅರೋರಾ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಲೈಕಾ ಅರೋರಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಿಲೇಷನ್ಶಿಪ್ ಕುರಿತು ಒಂದು ನೋಟ್ ಹಂಚಿಕೊಂಡಿದ್ದರು. ‘ನಿಮ್ಮ ಹೃದಯ, ಮನಸ್ಸು ಹಾಗೂ ದೇಹದ ಜೊತೆ ನೀವು ಹೊಂದಿರುವ ಸಂಬಂಧವೇ ನಿಮ್ಮ ಜೀವನದಲ್ಲಿನ ಅತಿ ದೀರ್ಘವಾದ ರಿಲೇಷನ್ಶಿಪ್’ ಎಂದು ಅವರು ಬರೆದುಕೊಂಡಿದ್ದರು. ಅರ್ಜುನ್ ಕಪೂರ್ ಅವರ ಸಹವಾಸವನ್ನು ಅವರು ಸಂಪೂರ್ಣ ತೊರೆದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: ನಾನು ಕೊನೆಯವರೆಗೂ ಪ್ರೀತಿಗಾಗಿ ಹೋರಾಡುತ್ತೇನೆ ಎಂದ ಮಲೈಕಾ ಅರೋರಾ
ನಟಿಯಾಗಿ, ಡ್ಯಾನ್ಸರ್ ಆಗಿ, ಮಾಡೆಲ್ ಆಗಿ ಮಲೈಕಾ ಅರೋರಾ ಅವರು ಫೇಮಸ್ ಆಗಿದ್ದಾರೆ. ಈಗ ಅವರಿಗೆ 50 ವರ್ಷ ವಯಸ್ಸು. ಈಗಲೂ ಸಖತ್ ಬೇಡಿಕೆ ಹೊಂದಿರುವ ಅವರು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ಕಪೂರ್ ಅವರನ್ನು ಮರೆತಿರುವ ಅವರು ಈಗ ಹೊಸ ಜೀವನ ಕಂಡುಕೊಳ್ಳಲು ಮುಂದಾಗಿದ್ದಾರೆ. ತಮ್ಮ ಜೀವನದಲ್ಲಿ ಬಂದಿರುವ ಹೊಸ ವ್ಯಕ್ತಿಯ ಗುರುತನ್ನು ಮಲೈಕಾ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




