ನಾನು ಕೊನೆಯವರೆಗೂ ಪ್ರೀತಿಗಾಗಿ ಹೋರಾಡುತ್ತೇನೆ ಎಂದ ಮಲೈಕಾ ಅರೋರಾ

ಹೆಲೋ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಮಲೈಕಾ ಮಾತನಾಡಿದ್ದಾರೆ. ‘ಏನೇ ಆಗಲಿ, ನಿಜವಾದ ಪ್ರೀತಿಯ ಪರಿಕಲ್ಪನೆಯಲ್ಲಿ ನಾನು ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ವೃಶ್ಚಿಕ ರಾಶಿಯವರು ಹಾಗೆಯೇ ಇರುತ್ತಾರೆ. ನಾನು ಕೊನೆಯವರೆಗೂ ಪ್ರೀತಿಗಾಗಿ ಹೋರಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ನಾನು ಕೊನೆಯವರೆಗೂ ಪ್ರೀತಿಗಾಗಿ ಹೋರಾಡುತ್ತೇನೆ ಎಂದ ಮಲೈಕಾ ಅರೋರಾ
ಅರ್ಜುನ್​ ಕಪೂರ್​, ಮಲೈಕಾ ಅರೋರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 28, 2024 | 1:07 PM

ಬಾಲಿವುಡ್‌ನ ಬಹುಚರ್ಚಿತ ಜೋಡಿಗಳಲ್ಲಿ ನಟಿ ಮಲೈಕಾ ಅರೋರಾ  ಮತ್ತು ಅರ್ಜುನ್ ಕಪೂರ್ ಕೂಡ ಒಂದು. ಇವರ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎಂದು ವರದಿ ಆಗಿದೆ. ಈ ಚರ್ಚೆಯ ಬೆನ್ನಲ್ಲೇ ಅವರು ಅರ್ಜುನ್ ಹುಟ್ಟುಹಬ್ಬದ ಆಚರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಹ ಹಾಕಿಲ್ಲ. ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಅರ್ಜುನ್ ಮತ್ತು ಮಲೈಕಾ ಪರೋಕ್ಷವಾಗಿ ಒಬ್ಬರ ಬಗ್ಗೆ ಒಬ್ಬರು ಮಾತನಾಡುತ್ತಲೇ ಇರುತ್ತಾರೆ. ಇದೀಗ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಪ್ರೀತಿಯ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅರ್ಜುನ್ ಜೊತೆ ಬ್ರೇಕ್ ಅಪ್ ಸುದ್ದಿ ಹರಿದಾಡಿದರೂ ಪ್ರೇಮದ ಮೇಲೆ ಇನ್ನೂ ನಂಬಿಕೆ ಇದೆ ಎಂದಿದ್ದಾರೆ ಅವರು. ‘ನಿಜವಾದ ಪ್ರೀತಿಯ ಕಲ್ಪನೆಯನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ’ ಎಂದು ಮಲೈಕಾ ಹೇಳಿದ್ದಾರೆ.

ಹೆಲೋ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಮಲೈಕಾ ಮಾತನಾಡಿದ್ದಾರೆ. ‘ಏನೇ ಆಗಲಿ, ನಿಜವಾದ ಪ್ರೀತಿಯ ಪರಿಕಲ್ಪನೆಯಲ್ಲಿ ನಾನು ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ವೃಶ್ಚಿಕ ರಾಶಿಯವರು ಹಾಗೆಯೇ ಇರುತ್ತಾರೆ. ನಾನು ಕೊನೆಯವರೆಗೂ ಪ್ರೀತಿಗಾಗಿ ಹೋರಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ಇದು ನಾನು ಕಾಲಾನಂತರದಲ್ಲಿ ಮಾಡಲು ಕಲಿತ ವಿಷಯ. ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾನು ಹೇಳಿದರೆ ನಾನು ಸುಳ್ಳು ಹೇಳುತ್ತೇನೆ ಎಂದಾಗುತ್ತದೆ. ಟ್ರೋಲ್ ಮಾಡಿದರೆ ನಾನು ಅಳುತ್ತೇನೆ. ನಾನು ಮನುಷ್ಯ. ಆದರೆ ಇದನ್ನು ಸಾರ್ವಜನಿಕವಾಗಿ ಮಾಡಲ್ಲ’ ಎಂದಿದ್ದಾರೆ ಅವರು.

ಈ ಸಂದರ್ಶನದಲ್ಲಿ ಮಲೈಕಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿರುವ ಬಗ್ಗೆಯೂ ವ್ಯಕ್ತಪಡಿಸಿದ್ದಾರೆ. ‘ಎಷ್ಟೇ ಋಣಾತ್ಮಕತೆ ನನ್ನನ್ನು ಸುತ್ತುವರೆದರೂ, ಅದು ನನ್ನ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಅದು ಜನರು, ಕೆಲಸ ಅಥವಾ ಸಾಮಾಜಿಕ ಮಾಧ್ಯಮಗಳ ಬಗ್ಗೆ ಇರಲಿ. ಆ ನಕಾರಾತ್ಮಕ ಶಕ್ತಿಯನ್ನು ನಾನು ಅನುಭವಿಸಿದ ಕ್ಷಣ ನಾನು ಅವರಿಂದ ದೂರ ಆಗುತ್ತೇನೆ. ಮೊದಮೊದಲು ಇಂತಹ ವಿಷಯಗಳಿಂದ ನನಗೆ ಬೇಸರವಾಗುತ್ತಿತ್ತು. ನನಗೆ ರಾತ್ರಿ ಮಲಗಲು. ನಾನು ಕೂಡ ಮನುಷ್ಯ ಮತ್ತು ನಾನು ಅಳಬಹುದು, ನನಗೂ ಕೂಡ ಸುಸ್ತಾಗುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮಲೈಕಾ ಅರೋರಾ ಧರಿಸಿರುವ ಈ ನಿಂಬೆಹಣ್ಣಿನ ಬಣ್ಣದ ಉಡುಗೆಯ ಬೆಲೆ ಬಲು ದುಬಾರಿ

ಮದುವೆಯಾದ 19 ವರ್ಷಗಳ ನಂತರ ಮಲೈಕಾ ಮತ್ತು ಅರ್ಬಾಜ್ 2017ರಲ್ಲಿ ವಿಚ್ಛೇದನ ಪಡೆದರು. ಇಬ್ಬರಿಗೂ ಅರ್ಹಾನ್ ಹೆಸರಿನ ಮಗನಿದ್ದಾನೆ. ಅರ್ಜುನ್ ಜೊತೆಗಿನ ಸಂಬಂಧದಿಂದಾಗಿ ಮಲೈಕಾ ಆಗಾಗ್ಗೆ ಟ್ರೋಲ್ ಎದುರಿಸುತ್ತಿದ್ದರು. ಆದರೆ ಈ ಟ್ರೋಲಿಂಗ್ ಹೊರತಾಗಿಯೂ, ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.