ಭಯೋತ್ಪಾದನೆ ನಂಟು ಇರುವ ಪಾಕ್ ವ್ಯಕ್ತಿ ಜತೆ ಮಾಧುರಿ ದೀಕ್ಷಿತ್ ಕಾರ್ಯಕ್ರಮ? ಜನರ ಆಕ್ರೋಶ
ಪಾಕಿಸ್ತಾನ ಮೂಲದ ಇವೆಂಟ್ ಮ್ಯಾನೇಜರ್ ಆಗಿರುವ ರಿಹಾನ್ ಸಿದ್ಧಿಖಿ ಮೇಲೆ ಭಾರತದ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಅಂಥ ವ್ಯಕ್ತಿಯ ಜೊತೆ ಮಾಧುರಿ ದೀಕ್ಷಿತ್ ಕೈಜೋಡಿಸುತ್ತಾರೆ ಎಂಬ ಸುದ್ದಿ ತಿಳಿದು ಎಲ್ಲರಿಗೂ ಶಾಕ್ ಆಗಿದೆ. ಆಗಸ್ಟ್ 16ರಂದು ರಿಹಾನ್ ಸಿದ್ಧಿಖಿ ಆಯೋಜನೆ ಮಾಡಲಿರುವ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ನಟಿ ಮಾಧುರಿ ದೀಕ್ಷಿತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನದ ವ್ಯಕ್ತಿ ಜೊತೆ ಮಾಧುರಿ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಕುರಿತಂತೆ ಒಂದು ಪೋಸ್ಟರ್ ವೈರಲ್ ಆಗಿದೆ. ಅದನ್ನು ನೋಡಿ ಎಲ್ಲರಿಗೂ ಶಾಕ್ ಆಗಿದೆ. ಪಾಕಿಸ್ತಾನ ಮೂಲಕ ರಿಹಾನ್ ಸಿದ್ಧಿಖಿ ಜೊತೆ ಮಾಧುರಿ ದೀಕ್ಷಿತ್ ಅವರು ಅಮೆರಿಕದಲ್ಲಿ ಒಂದು ಕಾರ್ಯಕ್ರಮ ಮಾಡಲಿದ್ದಾರೆ ಎಂಬ ಮಾಹಿತಿ ಆ ಪೋಸ್ಟರ್ನಲ್ಲಿದೆ. ಇದು ಫೇಕ್ ಪೋಸ್ಟರ್ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.
ಪಾಕಿಸ್ತಾನ ಮೂಲದ ರಿಹಾನ್ ಸಿದ್ಧಿಖಿ ಇವೆಂಟ್ ಮ್ಯಾನೇಜರ್ ಆಗಿದ್ದಾನೆ. ಅಮೆರಿಕದಲ್ಲಿ ಆತ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಮೊದಲು ಕೆಲವು ಬಾಲಿವುಡ್ ಕಲಾವಿದರನ್ನು ಆತ ಗೆಸ್ಟ್ ಆಗಿ ಆಹ್ವಾನಿಸಿದ್ದ. ಆತನಿಗೆ ಭಾರತ ವಿರೋಧಿ ವ್ಯಕ್ತಿಗಳ ಜೊತೆ ನಂಟು ಇರುವುದು ಬಹಿರಂಗ ಆಯಿತು. ಸೆಲೆಬ್ರಿಟಿಗಳನ್ನು ಆಹ್ವಾನಿಸಿ ನಡೆಸಿದ ಕಾರ್ಯಕ್ರಮದಿಂದ ಬಂದ ಹಣವನ್ನು ಆದ ಭಾರತ ವಿರೋಧಿ ಕೆಲಸಗಳಿಗೆ ನೀಡಿದ್ದಾನೆ ಎಂಬ ಆರೋಪ ಇದೆ. ಹಾಗಾಗಿ ಆತನನ್ನು ಭಾರತ ಸರ್ಕಾರವು ಕಪ್ಪುಪಟ್ಟಿಗೆ ಸೇರಿಸಿದೆ.
ಪೋಸ್ಟರ್ನಲ್ಲಿ ಇರುವ ಮಾಹಿತಿ ಪ್ರಕಾರ, ಮಾಧುರಿ ದೀಕ್ಷಿತ್ ಅವರು ಆಗಸ್ಟ್ 16ರಂದು ಅಮೆರಿಕದ ಟೆಕ್ಸಾಸ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವುದು ಪಾಕಿಸ್ತಾನ ಮೂಲದ ರಿಹಾನ್ ಸಿದ್ಧಿಖಿ. ಈ ಪೋಸ್ಟರ್ ಬಗ್ಗೆ ಮಾಧುರಿ ದೀಕ್ಷಿತ್ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಮಾಧುರಿ ದೀಕ್ಷಿತ್ ಈ ರಾಜಮನೆತನದ ಸೊಸೆ ಆಗಬೇಕಿತ್ತು; ಒಂದು ಅಪೂರ್ಣ ಪ್ರೇಮಕಥೆ
‘ಭಾರತೀಯ ಗುಪ್ತಚರ ಇಲಾಖೆಯು ರಿಹಾನ್ ಸಿದ್ಧಿಖಿ ಮೇಲೆ ಕಣ್ಣಿಟ್ಟಿದೆ. ಅಂಥ ವ್ಯಕ್ತಿಯ ಜೊತೆ ಮಾಧುರಿ ದೀಕ್ಷಿತ್ ಅವರು ಕಾರ್ಯಕ್ರಮವೊಂದಲ್ಲಿ ಭಾಗಿ ಆಗುತ್ತಾರೆ ಎಂಬ ಮಾಹಿತಿ ತಿಳಿದು ಅಚ್ಚರಿ ಆಯಿತು. ಆತನ ಹಿನ್ನೆಲೆ ಬಗ್ಗೆ ಯಾರಾದರೂ ಮಾಧುರಿ ದೀಕ್ಷಿತ್ಗೆ ಮಾಹಿತಿ ನೀಡಿ’ ಎಂದು ಅಂಕಣಗಾರ್ತಿ ಸುನಂದಾ ವಸಿಷ್ಠ್ ಅವರು ಟ್ವೀಟ್ ಮಾಡಿದ್ದಾರೆ.
Shocked to see @MadhuriDixit collaborate with Pakistani origin promoter who has been on the radar of Indian agencies and has been blacklisted by Govt of India. Minister @kishanreddybjp as MoS Home had publicly announced that Houston based Pakistani origin promoter, Rehan Siddiqi… pic.twitter.com/Kqu7lttt3k
— Sunanda Vashisht (@sunandavashisht) June 28, 2024
ಅವರು ಹಂಚಿಕೊಂಡಿರುವ ಪೋಸ್ಟರ್ನ ವಿನ್ಯಾಸ ಗಮನಿಸಿದರೆ ಇದು ಫೇಕ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಿಹಾನ್ ಸಿದ್ಧಿಖಿ ಕೂಡ ಇದೇ ಪೋಸ್ಟರ್ ಹಂಚಿಕೊಂಡಿರುವುದರಿಂದ ಅನುಮಾನ ಹೆಚ್ಚಾಗಿದೆ. ಈ ಬಗ್ಗೆ ಮಾಧುರಿ ದೀಕ್ಷಿತ್ ಅಬರು ಸ್ಪಷ್ಟನೆ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.