AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನಿಗೂ ಕಾಮುಕರ ಕಾಟ; ಕಾಸ್ಟಿಂಗ್​ ಕೌಚ್​ ಅನುಭವ ವಿವರಿಸಿದ ‘ಅನಿಮಲ್​’ ಕಲಾವಿದ

‘ಆದಿಪುರುಷ್​’, ‘ಅನಿಮಲ್​’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸಿದ್ಧಾಂತ್​ ಕಾರ್ಣಿಕ್​ ಅವರು ಒಂದು ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 22 ವರ್ಷದ ಪ್ರಾಯದಲ್ಲಿ ಸಿದ್ಧಾಂತ್​ ಅವರಿಗೆ ಕಾಸ್ಟಿಂಗ್​ ಕೌಚ್​ ಅನುಭವ ಆಗಿತ್ತು. ಅವಕಾಶ ನೀಡುವುದಾಗಿ ಕರೆಸಿಕೊಂಡಿದ್ದ ವ್ಯಕ್ತಿಯೊಬ್ಬನು ರಾಜಿ ಆಗಬೇಕು ಎಂದು ಒತ್ತಾಯಿಸಿದ್ದ. ಆ ಬಗ್ಗೆ ಸಿದ್ಧಾಂತ್​ ವಿವರಿಸಿದ್ದಾರೆ.

ನಟನಿಗೂ ಕಾಮುಕರ ಕಾಟ; ಕಾಸ್ಟಿಂಗ್​ ಕೌಚ್​ ಅನುಭವ ವಿವರಿಸಿದ ‘ಅನಿಮಲ್​’ ಕಲಾವಿದ
ಸಿದ್ಧಾಂತ್​ ಕಾರ್ಣಿಕ್​
ಮದನ್​ ಕುಮಾರ್​
|

Updated on: Jul 16, 2024 | 10:38 PM

Share

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ಕಾರಣದಿಂದ ಕಿರುಕುಳ ಅನುಭವಿಸಿದ ಹಲವು ನಟಿಯರು ಇದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಇಂಥ ಕಹಿ ಅನುಭವ ಆಗಿದೆ. ಈ ಬಗ್ಗೆ ‘ಅನಿಮಲ್​’ ಸಿನಿಮಾದ ನಟ ಸಿದ್ಧಾಂತ್​ ಕಾರ್ಣಿಕ್​ ಅವರು ಈಗ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಅವಕಾಶ ಕೇಳಲು ಹೋದಾಗ ವ್ಯಕ್ತಿಯೊಬ್ಬನಿಂದ ಸಿದ್ಧಾಂತ್​ ಕಾರ್ಣಿಕ್​ಗೆ ಕಾಸ್ಟಿಂಗ್ ಕೌಚ್​ ಅನುಭವ ಆಗಿತ್ತು. ಆ ಶಾಕಿಂಗ್​ ಘಟನೆಯನ್ನು ಅವರು ಈಗ ನೆನಪಿಸಿಕೊಂಡಿದ್ದಾರೆ.

ಸಿದ್ಧಾಂತ್​ ಕಾರ್ಣಿಕ್​ ಅವರಿಗೆ ಈಗ 41 ವರ್ಷ ವಯಸ್ಸು. ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. ಆದರೆ ಚಿತ್ರರಂಗಕ್ಕೆ ಬಂದಾಗ ಅವರಿಗೆ ಯಾವುದೇ ಗಾಡ್​ ಫಾದರ್​ ಇರಲಿಲ್ಲ. ಆಗ ಅವಕಾಶ ಕೇಳಿಕೊಂಡು ವ್ಯಕ್ತಿಯೊಬ್ಬರ ಬಳಿ ಸಿದ್ಧಾಂತ್​ ಹೋಗಿದ್ದರು. ರಾತ್ರಿ ಮನೆಗೆ ಬರಲು ಹೇಳಿದ್ದ ಆತನಿಂದ ಅನುಮಾನದ ವರ್ತನೆ ಎದುರಾಗಿತ್ತು.

‘ಅದು 2005ರ ಸಮಯ. ಆಗ ನನಗೆ 22 ವರ್ಷ ವಯಸ್ಸು. ಆಗಷ್ಟೇ ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಸಂಘಟಕರೊಬ್ಬರನ್ನು ನಾನು ಭೇಟಿಯಾದೆ. ನನ್ನ ಬಗೆಗಿನ ವಿವರಗಳನ್ನು ಹಿಡಿದುಕೊಂಡು ರಾತ್ರಿ 10.30ಕ್ಕೆ ಮನೆಗೆ ಬರುವಂತೆ ಆತ ಹೇಳಿದೆ. ನನಗೆ ಸ್ವಲ್ಪ ವಿಚಿತ್ರ ಎನಿಸಿತು. ಆದರೂ ಅಲ್ಲಿಗೆ ಹೋದೆ. ಮನೆಯಲ್ಲಿ ಆತನ ಫ್ಯಾಮಿಲಿ ಫೋಟೋ ನೋಡಿದ ಬಳಿಕ ಅದು ಸುರಕ್ಷಿತ ಜಾಗ ಎನಿಸಿತು. ಆದರೆ ಮಾತುಕಥೆ ಶುರು ಮಾಡುತ್ತಾ ಆತ ರಾಜಿಯಾಗಬೇಕು ಎಂದು ಹೇಳಿದ’ ಎಂದಿದ್ದಾರೆ ಸಿದ್ಧಾಂತ್​ ಕಾರ್ಣಿಕ್​.

‘ಚಿತ್ರರಂಗದ ನಿಯಮಗಳ ಬಗ್ಗೆ ಆತ ವಿವರಿಸಿದ. ರಾಜಿಯಾಗಬೇಕು ಎಂಬ ಬಗ್ಗೆ ಸಣ್ಣ ಸುಳಿವು ನೀಡಿದ. ರಾಜಿ ಆಗುವ ತನಕ ಅವಕಾಶ ಸಿಗುವುದಿಲ್ಲ ಅಂತ ಹೇಳಿದ. ನಾನು ಆಗ ಚಿಕ್ಕವನಾಗಿದ್ದೆ. ಆತ ನನ್ನ ಹತ್ತಿರಕ್ಕೆ ಬಂದ. ಆಗ ನಾನು ಇದಕ್ಕೆಲ್ಲ ಸಿದ್ಧನಿಲ್ಲ ಅಂತ ಹೇಳಿದೆ. ನನ್ನ ವೃತ್ತಿಜೀವನವನ್ನು ನಾಶ ಮಾಡುವುದಾಗಿ ಆತ ಬೆದರಿಕೆ ಹಾಕಿದ. ಆದರೆ ನಾನು ಅದಕ್ಕೆಲ್ಲ ಹೆದರದೇ ಹೊರಬಂದೆ’ ಎಂದು ಸಿದ್ಧಾಂತ್​ ಕಾರ್ಣಿಕ್​ ಹೇಳಿದ್ದಾರೆ.

ಇದನ್ನೂ ಓದಿ: ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ

2023ರಲ್ಲಿ ಸಿದ್ಧಾಂತ್​ ಕಾರ್ಣಿಕ್​ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ‘ಆದಿಪುರುಷ್​’ ಸಿನಿಮಾದಲ್ಲಿ ವಿಭೀಷಣನ ಪಾತ್ರ ಮಾಡಿ ಅವರು ಗಮನ ಸೆಳೆದರು. ನಂತರ ಬಿಡುಗಡೆ ಆದ ‘ಅನಿಮಲ್​’ ಸಿನಿಮಾದಲ್ಲಿ ಅವರಿಗೆ ನೆಗೆಟಿವ್​ ಶೇಡ್​ನ ಪಾತ್ರ ಸಿಕ್ಕಿತು. ಆ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.