200 ರೂಪಾಯಿಗಾಗಿ ಅವಕಾಶ ಕೇಳುತ್ತಿದ್ದ ವಿಕ್ಕಿ ಕೌಶಲ್; ಬದುಕು ಬದಲಿಸಿತು ಬಣ್ಣದ ಲೋಕ

ಅಕ್ಷಯ್ ಕುಮಾರ್, ಕರೀನಾ ಕಪೂರ್, ದಿಲ್ಜಿತ್ ಹಾಗೂ ಕಿಯಾರಾ ಅಡ್ವಾಣಿ 2019ರಲ್ಲಿ ‘ಗುಡ್ ನ್ಯೂಸ್’ ಸಿನಿಮಾ ಮಾಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತು. ಇದರ ಸೀಕ್ವೆಲ್ ರೀತಿಯಲ್ಲಿ ‘ಬ್ಯಾಡ್ ನ್ಯೂಸ್’ ಮೂಡಿ ಬಂದಿದೆ. ಈ ಚಿತ್ರದ ಪ್ರಚಾರದ ವೇಳೆ ವಿಕ್ಕಿ ಕೌಶಲ್ ಅವರು ಆರಂಭದ ದಿನಗಳ ಬಗ್ಗೆ ಮಾತನಾಡಿದ್ದಾರೆ.

200 ರೂಪಾಯಿಗಾಗಿ ಅವಕಾಶ ಕೇಳುತ್ತಿದ್ದ ವಿಕ್ಕಿ ಕೌಶಲ್; ಬದುಕು ಬದಲಿಸಿತು ಬಣ್ಣದ ಲೋಕ
ವಿಕ್ಕಿ ಕೌಶಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 17, 2024 | 12:53 PM

ವಿಕ್ಕಿ ಕೌಶಲ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ ಆಗುತ್ತಿದ್ದಾರೆ. ಹಲವು ರೀತಿಯ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಅವರ ಬದುಕು ಬದಲಿಸಿದ್ದು ‘ಉರಿ’ ಹಾಗೂ ಸಂಜು’ ಸಿನಿಮಾಗಳು. ಈಗ ಅವರು ‘ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಈ ವಾರ ರಿಲೀಸ್ ಆಗುತ್ತಿದೆ. ವಿಕ್ಕಿ ಕೌಶಲ್ ಅವರ ಜರ್ನಿ ಅಷ್ಟು ಸುಲಭದ್ದಾಗಿರಲಿಲ್ಲ. ಈ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ ಚಿತ್ರದ ಪ್ರಚಾರದ ವೇಳೆ ಅವರು ಮಾತನಾಡಿದ್ದಾರೆ.

‘ಗ್ಯಾಂಗ್ಸ್ ಆಫ್ ವಸೇಪುರ್’ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರು ಸಹಾಯಕ ನಿರ್ದೇಶಕರಾಗಿದ್ದರು. ಹೀಗೆ ಅವರ ಬಣ್ಣದ ಬದುಕು ಆರಂಭ ಆಯಿತು. ಆ್ಯಕ್ಷನ್ ನಿರ್ದೇಶಕ ಶ್ಯಾಮ್ ಕೌಶಲ್ ಅವರ ಮಗನಾದರೂ ವಿಕ್ಕಿ ಜರ್ನಿ ಸುಲಭದಲ್ಲಿ ಇರಲಿಲ್ಲ. 200-300 ರೂಪಾಯಿ ಪಡೆಯಲು ಅವರು ಪಾತ್ರಕ್ಕಾಗಿ ಬೇಡಿಕೆ ಇಡುತ್ತಿದ್ದರು.

‘ನನಗೆ ಇನ್ನೂ ನೆನಪಿದೆ, ನಾನು 200-300 ರೂಪಾಯಿಗಾಗಿ ಸಣ್ಣ ಪಾತ್ರಗಳನ್ನು ಕೇಳುತ್ತಿದ್ದೆ. ನಾನು ಈಗ ಎಲ್ಲಿದ್ದೇನೋ ಅದಕ್ಕೆ ನಾನು ಚಿರಋಣಿ ಆಗಿದ್ದೇನೆ. 10-12 ವರ್ಷಗಳ ಹಿಂದೆ ಯಾರಾದರೂ ಬಂದು ನನ್ನ ಬಳಿ ನಿಮ್ಮ ಸಾಂಗ್ ಹಿಟ್ ಆಗಲಿದೆ, ನಿಮಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಲಿದೆ ಎಂದು ಯಾರಾದರೂ ಹೇಳಿದ್ದರೆ ನಾನು ಖಂಡಿತವಾಗಿಯೂ ನಗುತ್ತಿದ್ದೆ. ಯಾಕೆ ಜೋಕ್ ಮಾಡುತ್ತೀರೀ ಎಂದು ಕೇಳುತ್ತಿದ್ದೆ. ದೇವರ ದಯೆ, ಹಾಗೂ ಪಾಲಕರ ಆಶೀರ್ವಾದದಿಂದ ಇಲ್ಲಿದ್ದೇನೆ’ ಎಂದಿದ್ದಾರೆ ಅವರು.

‘ನನ್ನ ಕಡೆಗೆ ಬಂದ ಅವಕಾಶಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇದಕ್ಕಿಂತ ಒಳ್ಳೆಯ ಫೀಲಿಂಗ್ ಮತ್ತೊಂದು ಇರಲು ಸಾಧ್ಯವಿಲ್ಲ. ನಾನು ಬಣ್ಣದ ಬದುಕಲ್ಲಿ ಕೆಲಸ ಪ್ರಾರಂಭಿಸಿದಾಗ ನಾನು ಇಲ್ಲಿಂದ ಎಲ್ಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಎಂದಿಗೂ ಭರವಸೆಯನ್ನು ಬಿಡಲಿಲ್ಲ. ದೇವರು ನನ್ನನ್ನು ಆಶೀರ್ವದಿಸಿದ್ದಾನೆ ಹೀಗಾಗಿ ನನಗೆ ಕೆಲಸ ಸಿಕ್ಕಿತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಗ್ಲಾಮರ್ ಗೊಂಬೆ ತೃಪ್ತಿಯನ್ನು ತಬ್ಬಿ ಹಿಡಿದ ಕತ್ರಿನಾ ಪತಿ ವಿಕ್ಕಿ ಕೌಶಲ್

ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ್ದಾರೆ. ‘ಮಸಾನ್’ ಅವರ ನಟನೆಯ ಮೊದಲ ಸಿನಿಮಾ. ಇದಕ್ಕಾಗಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಶೇಷ ಪೋಸ್ಟ್ ಹಾಕಿದ್ದಾರೆ. ವಿಕ್ಕಿ ಕೌಶಲ್ ಅವರ ನಟನೆಯ ‘ಬ್ಯಾಡ್ ನ್ಯೂಸ್’ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಕಥೆ ‘ಗುಡ್ ನ್ಯೂಸ್’ ಸಿನಿಮಾದ ರೀತಿಯಲ್ಲೇ ಇರಲಿದೆಯಂತೆ. ‘ಬ್ಯಾಡ್ ನ್ಯೂಸ್’ ಚಿತ್ರದ ‘ಥೋಬಾ ಥೋಬಾ..’ ಹಾಡು ಸಖತ್ ಹಿಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ