ಗ್ಲಾಮರ್ ಗೊಂಬೆ ತೃಪ್ತಿಯನ್ನು ತಬ್ಬಿ ಹಿಡಿದ ಕತ್ರಿನಾ ಪತಿ ವಿಕ್ಕಿ ಕೌಶಲ್
ತೃಪ್ತಿ ದಿಮ್ರಿ ಅವರು ‘ಅನಿಮಲ್’ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅವರು ‘ಬ್ಯಾಡ್ ನ್ಯೂಸ್’ ಚಿತ್ರದಲ್ಲೂ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅವರನ್ನು ವಿಕ್ಕಿ ತಬ್ಬಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಟೀಕೆಗಳ ಸುರಿಮಳೆ ಸುರಿಸಿದ್ದಾರೆ.
ವಿವಾಹದ ಬಳಿಕ ಹೀರೋ/ಹೀರೋಯಿನ್ಗಳು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುವಾಗ, ಫೋಟೋ ಹಂಚಿಕೊಳ್ಳುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಟ್ರೋಲ್ ಆಗೋದು ಪಕ್ಕಾ. ಈಗ ವಿಕ್ಕಿ ಕೌಶಲ್ಗೂ ಹಾಗೆಯೇ ಆಗಿದೆ. ‘ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ವಿಕ್ಕಿ ಹಾಗೂ ‘ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿಗಾಗಿ ತೃಪ್ತಿ ಹಾಟ್ ಅವತಾರ ತಾಳಿದ್ದಾರೆ. ಅವರನ್ನು ವಿಕ್ಕಿ ತಬ್ಬಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಟೀಕೆಗಳ ಸುರಿಮಳೆ ಸುರಿಸಿದ್ದಾರೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹ ಆಗಿದ್ದಾರೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಿಗಿರುವಾಗ ವಿಕ್ಕಿ ಅವರು ಕತ್ರಿನಾ ಬದಲು ತೃಪ್ತಿಯನ್ನು ಅಪ್ಪಿ ನಿಂತಿದ್ದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಈ ಕಾರಣದಿಂದ ಅನೇಕರು ಈ ಫೋಟೋನ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟು ಹಾಟ್ ಆಗಿ ಕಾಣಿಸಿಕೊಂಡ ತೃಪ್ತಿಯನ್ನು ತಬ್ಬೋ ಅವಶ್ಯಕತೆ ಏನಿತ್ತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಇದು ‘ಬ್ಯಾಡ್ ನ್ಯೂಸ್’ ಚಿತ್ರದ ಫೋಟೋ. ಈ ಸಿನಿಮಾದ ‘ಜಾನಂ’ ಸಿನಿಮಾದ ಹಾಡಿಗಾಗಿ ವಿಕ್ಕಿ ಹಾಗೂ ತೃಪ್ತಿ ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಈಗ ಅದರ ಝಲಕ್ ತೋರಿಸುವ ರೀತಿಯಲ್ಲಿ ಈ ಪೋಸ್ಟರ್ ಮೂಡಿ ಬಂದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಕತ್ರಿನಾ ಅವರ ಕಡೆಯಿಂದ ಡಿಸ್ಲೈಕ್’ ಎನ್ನುವ ಕಮೆಂಟ್ನ ಫ್ಯಾನ್ ಮಾಡಿದ್ದಾರೆ. ಈ ಕಮೆಂಟ್ 17 ಸಾವಿರ ಲೈಕ್ಸ್ ಪಡೆದಿದೆ!
View this post on Instagram
ಅಕ್ಷಯ್ ಕುಮಾರ್, ಕರೀನಾ ಕಪೂರ್, ದಿಲ್ಜಿತ್ ಹಾಗೂ ಕಿಯಾರಾ ಅಡ್ವಾಣಿ 2019ರಲ್ಲಿ ‘ಗುಡ್ ನ್ಯೂಸ್’ ಸಿನಿಮಾ ಮಾಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತು. ಇದರ ಸೀಕ್ವೆಲ್ ರೀತಿಯಲ್ಲಿ ‘ಬ್ಯಾಡ್ ನ್ಯೂಸ್’ ಮೂಡಿ ಬಂದಿದೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಇದೆ. ಜುಲೈ 19ರಂದು ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ತಮ್ಮಿಂದ ನಿರ್ಮಾಣ ಸಂಸ್ಥೆಗೆ ಭರ್ಜರಿ ನಷ್ಟ; ಅಕ್ಷಯ್ ಕುಮಾರ್ಗೆ ಶುರುವಾಗಿದೆ ಚಿಂತೆ
ಸೆಲೆಬ್ರಿಟಿಗಳ ಮಟ್ಟದಲ್ಲಿ ಈ ಫೋಟೋ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಕತ್ರಿನಾ ಅವರಿಗೆ ಈ ವಿಚಾರಗಳನ್ನು ವಿಕ್ಕಿ ಮೊದಲೇ ತಿಳಿಸಿರುತ್ತಾರೆ. ಕತ್ರಿನಾ ಕೂಡ ಇದೊಂದು ಒಂದು ಪಾತ್ರ ಎಂಬ ರೀತಿಯಲ್ಲಿ ನೋಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.