ಸಂಸದ ತೇಜಸ್ವಿ ಸೂರ್ಯ ಅವರು ಟ್ರಯಥ್ಲಾನ್‌ನಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಅದನ್ನು ಪೂರ್ತಿಗೊಳಿಸಿದ್ದರು. ಅನುಪಮ್ ಖೇರ್ ನಟನೆಯ ‘ವಿಜಯ್ 69’ ಸಿನಿಮಾದಲ್ಲಿಯೂ ಟ್ರಯಥ್ಲಾನ್ ಬಗ್ಗೆ ಇದೆ. ಇವರಿಬ್ಬರೂ ಸೇರಿ ಇನ್‌ಸ್ಟಾಗ್ರಾಮ್ ಲೈವ್ ನಡೆಸಿದ್ದಾರೆ. ಇಬ್ಬರೂ ಟ್ರಯಾಥ್ಲನ್ ಬಗ್ಗೆ ಮಾತನಾಡಿದ್ದಾರೆ. ಅನುಪಮ್ ಅವರು ‘ವಿಜಯ್ 69’ ಚಿತ್ರಕ್ಕೆ ಹಾಕಿದ ಶ್ರಮಕ್ಕೆ ತೇಜಸ್ವಿ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋನ ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಯಾಥ್ಲನ್ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಐರನ್ ಮ್ಯಾನ್ 70.3 ಈವೇಂಟ್ ಗೋವಾದಲ್ಲಿ ನಡೆದಿತ್ತು. ಇದರಲ್ಲಿ ಟ್ರಯಾಥ್ಲನ್ ಇರುತ್ತದೆ. ಮೂರು ವಿವಿಧ ಚಟುವಟಿಕೆ ಇರುತ್ತವೆ. ಅರೇಬಿಯಾ ಸಮುದ್ರದಲ್ಲಿ 1.9 ಕಿಲೋ ಮೀಟರ್ ಈಜಬೇಕು. 19 ಕಿಲೋ ಸೈಕಲಿಂಗ್ ಇರುತ್ತದೆ, ಆ ಬಳಿಕ 21.1 ರನ್ನಿಂಗ್ ಇರುತ್ತದೆ’ ಎಂದಿದ್ದಾರೆ ತೇಜಸ್ವಿಸೂರ್ಯ. ಇದು ಹಾಫ್ ಐರನ್‌ಮ್ಯಾನ್. ಇದನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸಿದ್ದಾರೆ.
ಅನುಪಮ್ ಅವರು ಸಿನಿಮಾ ಬಗ್ಗೆ ವಿವರಿಸಿದ್ದಾರೆ. ‘ಅಕ್ಷಯ್ ರಾಯ್ ಅವರು ಬಂದು ಕಥೆ ಹೇಳಿದಾಗ ಖುಷಿ ಆಯ್ತು. ಜನರು ನನ್ನನ್ನು ಲೆಜೆಂಡ್ ಎಂದು ಕರೆಯುತ್ತಿದ್ದರು. ಆದರೆ, ಈಗ ಅಂಕಲ್ ಎಂದು ಕರೆಯುತ್ತಾರೆ. ನಾನು ಅದನ್ನು ತಪ್ಪು ಎಂದು ಸಾಬೀತು ಪಡಿಸಬೇಕು ಎಂದುಕೊಂಡೆ. ನನಗೆ ಕಳೆದ ವರ್ಷ ಸ್ವಿಮ್ಮಿಂಗ್ ಬರುತ್ತಿರಲಿಲ್ಲ. ಇದಕ್ಕೆ ಈಜು ಕಲಿಯಬೇಕು ಎಂದರು. ನಂತರ ವಿಎಫ್ಎಕ್ಸ್ ಮಾಡೋಣ ಎಂದರು ನಿರ್ದೇಶಕರು. ಆದರೆ, ನಾನು ಕಲಿಯುತ್ತೇನೆ ಎಂದು ಕಲಿತೆ’ ಎಂದಿದ್ದಾರೆ ಅನುಪಮ್ ಖೇರ್. ಅನುಪಮ್ ಅವರು ತೇಜಸ್ವಿಯನ್ನು ‘ಯೂತ್ ಐಕಾನ್’ ಎಂದು ಕರೆದಿದ್ದಾರೆ.
ಇದನ್ನೂ ಓದಿ: 68ನೇ ವಯಸ್ಸಿಗೆ ಈಜು ಕಲಿತ ಅನುಪಮ್ ಖೇರ್; ಈ ವಯಸ್ಸಲ್ಲಿ ಚಾಲೆಂಜ್ ಸ್ವೀಕರಿಸೋದೇಕೆ?
‘ನಾವು ಹಲವು ಬಾರಿ ರೀಟೇಕ್ ಮಾಡಿದ್ದೇವೆ. ಹೀಗಾಗಿ, ಸಾಕಷ್ಟು ಕಷ್ಟ ಆಯಿತು. ಈ ಸಿನಿಮಾ ಅನೇಕರಿಗೆ ಸ್ಫೂರ್ತಿ ಕೊಟ್ಟಿದೆ. ವಯಸ್ಸಾದವರಿಗೆ ಮಾತ್ರವಲ್ಲ, ಯುವಕರಿಗೂ ಈ ಚಿತ್ರ ಸ್ಫೂರ್ತಿ ಆಗಿದೆ. ಮಕ್ಕಳು ತಮ್ಮ ತಂದೆ-ತಾಯಿಗೆ ಅದನ್ನು ಮಾಡಬೇಡಿ, ಇದನ್ನು ಮಾಡಬೇಡಿ ಎಂದು ಹೇಳಬಾರದು’ ಎಂದಿದ್ದಾರೆ ತೇಜಸ್ವಿಸೂರ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Mon, 11 November 24