AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಸಾಂಗ್ ಹಾಡಲು 3 ಕೋಟಿ ರೂಪಾಯಿ ಸಂಬಳ ಪಡೆಯುವ ಎ.ಆರ್. ರೆಹಮಾನ್

ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್ ಅವರು ಸಿಂಗರ್ ಆಗಿಯೂ ಫೇಮಸ್ ಆಗಿದ್ದಾರೆ. ಅವರ ಧ್ವನಿಯಲ್ಲಿ ಬಂದ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ಅವರ ಕಂಠಕ್ಕೆ ಸಖತ್ ಬೇಡಿಕೆ ಇದೆ. ಆ ಬೇಡಿಕೆಗೆ ತಕ್ಕಂತೆಯೇ ಅವರು ಸಂಬಳ ಪಡೆಯುತ್ತಾರೆ. ಎ.ಆರ್​. ರೆಹಮಾನ್ ಅವರು ಒಂದು ಹಾಡಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

1 ಸಾಂಗ್ ಹಾಡಲು 3 ಕೋಟಿ ರೂಪಾಯಿ ಸಂಬಳ ಪಡೆಯುವ ಎ.ಆರ್. ರೆಹಮಾನ್
ಎ.ಆರ್​. ರೆಹಮಾನ್
ಮದನ್​ ಕುಮಾರ್​
|

Updated on: Nov 11, 2024 | 4:58 PM

Share

ತಮ್ಮ ಸಂಗೀತದ ಮೂಲಕವೇ ಎಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ ಎ.ಆರ್​. ರೆಹಮಾನ್. ಅವರಿಗೆ ಇರುವ ಬೇಡಿಕೆ ದೊಡ್ಡದು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಅವರಿಗೆ ಖ್ಯಾತಿ ಇದೆ. ಆಸ್ಕರ್​ ಪ್ರಶಸ್ತಿ ಪಡೆದಿರುವ ಅವರು ಸಾವಿರಾರು ಸೂಪರ್​ ಹಿಟ್ ಗೀತೆಗಳನ್ನು ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ ಎ.ಆರ್​. ರೆಹಮಾನ್ ಅವರು ದುಬಾರಿ ಸಂಭಾವನೆ ಪಡೆಯುತ್ತಾರೆ. ವರದಿಗಳ ಪ್ರಕಾರ, ಒಂದು ಹಾಡಿಗೆ ಧ್ವನಿ ನೀಡಲು ಅವರು ಪಡೆಯುವ ಸಂಭಾವನೆ 3 ಕೋಟಿ ರೂಪಾಯಿ! ಸ್ಟಾರ್​ ಸಿಂಗರ್ಸ್​ ಎನಿಸಿಕೊಂಡ ಸೋನು ನಿಗಮ್, ಶ್ರೇಯಾ ಘೋಷಾಲ್ ಮುಂತಾದವರ ಸಂಭಾವನೆಗಿಂತಲೂ ಇದು 15 ಪಟ್ಟು ಅಧಿಕ ಮೊತ್ತ.

ಎ.ಆರ್​. ರೆಹಮಾನ್ ಅವರು ಪೂರ್ಣಾವಧಿ ಸಿಂಗರ್ ಅಲ್ಲ. ಅಂದರೆ, ಅವರ ಮುಖ್ಯ ಕಸುಬು ಹಾಡುಗಾರಿಕೆ ಅಲ್ಲ. ಸಂಗೀತ ನಿರ್ದೇಶಕನಾಗಿ ಅವರು ಬ್ಯುಸಿ ಆಗಿದ್ದಾರೆ. ಹಾಗಿದ್ದರೂ ಕೂಡ ಅಲ್ಲೊಂದು ಇಲ್ಲೊಂದು ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂಪಾಯಿ ನೀಡಬೇಕು.

ಅಷ್ಟಕ್ಕೂ ಎ.ಆರ್​. ರೆಹಮಾನ್ ಅವರು ಇಷ್ಟು ದೊಡ್ಡ ಮೊತ್ತವನ್ನು ಚಾರ್ಜ್​ ಮಾಡಲು ಕಾರಣ ಕೂಡ ಇದೆ. ತಮ್ಮ ಬಳಿ ಯಾರೂ ಕೂಡ ಬಂದು ಹಾಡಲು ಒತ್ತಾಯ ಮಾಡಬಾರದು ಎಂಬುದು ಎ.ಆರ್​. ರೆಹಮಾನ್ ಅವರ ಉದ್ದೇಶ. ಯಾಕೆಂದರೆ, ಅವರು ಗಾಯನಕ್ಕಿಂತಲೂ ಸಂಗೀತ ನಿರ್ದೇಶನಕ್ಕೆ ಹೆಚ್ಚು ಸಮಯ ನೀಡಬೇಕು. ಆದ್ದರಿಂದ ಗಾಯನಕ್ಕಾಗಿ ತಮ್ಮನ್ನು ಯಾರೂ ಕರೆಯಬಾರದು ಎಂದು 3 ಕೋಟಿ ರೂಪಾಯಿ ಸಂಭಾವನೆಯನ್ನು ಎ.ಆರ್​. ರೆಹಮಾನ್ ನಿಗದಿ ಮಾಡಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಕೆಲವು ನಿರ್ಮಾಪಕರು ಈ ದುಬಾರಿ ಸಂಬಳ ನೀಡಿ ಎ.ಆರ್​. ರೆಹಮಾನ್ ಅವರಿಂದಲೇ ಹಾಡಿಸುತ್ತಾರೆ.

ಇದನ್ನೂ ಓದಿ: ‘ಅಪ್ಪು ಸಿನಿಮಾಗೆ ರೆಹಮಾನ್ ಮ್ಯೂಸಿಕ್ ಮಾಡ್ತಾರೆ ಎಂದುಕೊಂಡಿದ್ದೆ’; ಹಳೆಯ ಘಟನೆ ನೆನೆದ ಗುರುಕಿರಣ್

ಭಾರತೀಯ ಚಿತ್ರರಂಗದಲ್ಲಿ ಸ್ಟಾರ್​ ಗಾಯಕರಾಗಿ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು ಪ್ರತಿ ಹಾಡಿಗೆ ಹಲವು ಲಕ್ಷ ರೂಪಾಯಿಗಳನ್ನು ಚಾರ್ಜ್​ ಮಾಡುತ್ತಾರೆ. ಪ್ರತಿ ಹಾಡಿಗೆ ಶ್ರೇಯಾ ಘೋಷಾಲ್ ಅವರು 25 ಲಕ್ಷ ರೂಪಾಯಿ ಪಡೆಯುತ್ತಾರೆ. ಸುನಿಧಿ ಚೌಹಾಣ್ ಅವರು 18ರಿಂದ 20 ಲಕ್ಷ ರೂಪಾಯಿ ಪಡೆಯುತ್ತಾರೆ. ಅರಿಜಿತ್ ಸಿಂಗ್​ ಕೂಡ ಇಷ್ಟೇ ಪ್ರಮಾಣದ ಸಂಬಳ ಡಿಮ್ಯಾಂಡ್ ಮಾಡುತ್ತಾರೆ. ಸೋನು ನಿಗಮ್ ಅವರು ಒಂದು ಹಾಡಿಗೆ 15ರಿಂದ 18 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ