‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ಪೂರ್ಣಗೊಳಿಸಿದ ಐರನ್‌ಮ್ಯಾನ್ 70.3 ಟ್ರಯಥ್ಲಾನ್ ಮತ್ತು ಅನುಪಮ್ ಖೇರ್ ಅವರ ‘ವಿಜಯ್ 69’ ಚಿತ್ರದ ಬಗ್ಗೆ ಇಬ್ಬರೂ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಚರ್ಚಿಸಿದ್ದಾರೆ. ಟ್ರಯಥ್ಲಾನ್‌ನಲ್ಲಿ ತೇಜಸ್ವಿ ಅವರ ಸಾಧನೆ ಮತ್ತು ಚಿತ್ರದಲ್ಲಿ ಅನುಪಮ್ ಅವರ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ.

‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ
ಅನುಪಮ್-ತೇಜಸ್ವಿ ಸೂರ್ಯ
Follow us
ರಾಜೇಶ್ ದುಗ್ಗುಮನೆ
|

Updated on:Nov 11, 2024 | 9:00 AM

ಸಂಸದ ತೇಜಸ್ವಿ ಸೂರ್ಯ ಅವರು ಟ್ರಯಥ್ಲಾನ್​ನಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಅದನ್ನು ಪೂರ್ತಿಗೊಳಿಸಿದ್ದರು. ಅನುಪಮ್ ಖೇರ್ ನಟನೆಯ ‘ವಿಜಯ್ 69’ ಸಿನಿಮಾದಲ್ಲಿಯೂ ಟ್ರಯಥ್ಲಾನ್ ಬಗ್ಗೆ ಇದೆ. ಇವರಿಬ್ಬರೂ ಸೇರಿ ಇನ್​ಸ್ಟಾಗ್ರಾಮ್ ಲೈವ್ ನಡೆಸಿದ್ದಾರೆ. ಇಬ್ಬರೂ ಟ್ರಯಾಥ್ಲನ್ ಬಗ್ಗೆ ಮಾತನಾಡಿದ್ದಾರೆ. ಅನುಪಮ್ ಅವರು ‘ವಿಜಯ್ 69’ ಚಿತ್ರಕ್ಕೆ ಹಾಕಿದ ಶ್ರಮಕ್ಕೆ ತೇಜಸ್ವಿ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋನ ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರಯಾಥ್ಲನ್​ ಹೇಗಿರುತ್ತದೆ ಎಂಬುದನ್ನು ಅವರು  ವಿವರಿಸಿದ್ದಾರೆ. ‘ಐರನ್​ ಮ್ಯಾನ್ 70.3 ಈವೇಂಟ್ ಗೋವಾದಲ್ಲಿ ನಡೆದಿತ್ತು. ಇದರಲ್ಲಿ ಟ್ರಯಾಥ್ಲನ್ ಇರುತ್ತದೆ. ಮೂರು ವಿವಿಧ ಚಟುವಟಿಕೆ ಇರುತ್ತವೆ. ಅರೇಬಿಯಾ ಸಮುದ್ರದಲ್ಲಿ 1.9 ಕಿಲೋ ಮೀಟರ್ ಈಜಬೇಕು. 19 ಕಿಲೋ ಸೈಕಲಿಂಗ್ ಇರುತ್ತದೆ, ಆ ಬಳಿಕ 21.1 ರನ್ನಿಂಗ್ ಇರುತ್ತದೆ’ ಎಂದಿದ್ದಾರೆ ತೇಜಸ್ವಿಸೂರ್ಯ. ಇದು ಹಾಫ್ ಐರನ್​ಮ್ಯಾನ್. ಇದನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸಿದ್ದಾರೆ.

ಅನುಪಮ್ ಅವರು ಸಿನಿಮಾ ಬಗ್ಗೆ ವಿವರಿಸಿದ್ದಾರೆ. ‘ಅಕ್ಷಯ್ ರಾಯ್ ಅವರು ಬಂದು ಕಥೆ ಹೇಳಿದಾಗ ಖುಷಿ ಆಯ್ತು. ಜನರು ನನ್ನನ್ನು ಲೆಜೆಂಡ್ ಎಂದು ಕರೆಯುತ್ತಿದ್ದರು. ಆದರೆ, ಈಗ ಅಂಕಲ್ ಎಂದು ಕರೆಯುತ್ತಾರೆ. ನಾನು ಅದನ್ನು ತಪ್ಪು ಎಂದು ಸಾಬೀತು ಪಡಿಸಬೇಕು ಎಂದುಕೊಂಡೆ. ನನಗೆ ಕಳೆದ ವರ್ಷ ಸ್ವಿಮ್ಮಿಂಗ್ ಬರುತ್ತಿರಲಿಲ್ಲ. ಇದಕ್ಕೆ ಈಜು ಕಲಿಯಬೇಕು ಎಂದರು. ನಂತರ ವಿಎಫ್​ಎಕ್ಸ್ ಮಾಡೋಣ ಎಂದರು ನಿರ್ದೇಶಕರು. ಆದರೆ, ನಾನು ಕಲಿಯುತ್ತೇನೆ ಎಂದು ಕಲಿತೆ’ ಎಂದಿದ್ದಾರೆ ಅನುಪಮ್ ಖೇರ್. ಅನುಪಮ್ ಅವರು ತೇಜಸ್ವಿಯನ್ನು ‘ಯೂತ್ ಐಕಾನ್’ ಎಂದು ಕರೆದಿದ್ದಾರೆ.

View this post on Instagram

A post shared by Anupam Kher (@anupampkher)

ಇದನ್ನೂ ಓದಿ: 68ನೇ ವಯಸ್ಸಿಗೆ ಈಜು ಕಲಿತ ಅನುಪಮ್ ಖೇರ್; ಈ ವಯಸ್ಸಲ್ಲಿ ಚಾಲೆಂಜ್ ಸ್ವೀಕರಿಸೋದೇಕೆ?

‘ನಾವು ಹಲವು ಬಾರಿ ರೀಟೇಕ್ ಮಾಡಿದ್ದೇವೆ. ಹೀಗಾಗಿ, ಸಾಕಷ್ಟು ಕಷ್ಟ ಆಯಿತು. ಈ ಸಿನಿಮಾ ಅನೇಕರಿಗೆ ಸ್ಫೂರ್ತಿ ಕೊಟ್ಟಿದೆ. ವಯಸ್ಸಾದವರಿಗೆ ಮಾತ್ರವಲ್ಲ, ಯುವಕರಿಗೂ ಈ ಚಿತ್ರ ಸ್ಫೂರ್ತಿ ಆಗಿದೆ. ಮಕ್ಕಳು ತಮ್ಮ ತಂದೆ-ತಾಯಿಗೆ ಅದನ್ನು ಮಾಡಬೇಡಿ, ಇದನ್ನು ಮಾಡಬೇಡಿ ಎಂದು ಹೇಳಬಾರದು’ ಎಂದಿದ್ದಾರೆ ತೇಜಸ್ವಿಸೂರ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:56 am, Mon, 11 November 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?