66ನೇ ವಯಸ್ಸಿಗೆ ಶಕ್ತಿಮಾನ್ ಆಗುತ್ತೇನೆ ಎಂದು ಹೊರಟ ಮುಕೇಶ್ ಖನ್ನಾ; ಪ್ರಸಾರ ಯಾವಾಗ?

ಮುಕೇಶ್ ಖನ್ನಾ ಅವರು 66 ನೇ ವಯಸ್ಸಿನಲ್ಲಿ ಶಕ್ತಿಮಾನ್ ಪಾತ್ರವನ್ನು ಮತ್ತೆ ನಿರ್ವಹಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಆದರೆ, ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 2027ರ ವೇಳೆಗೆ ಶಕ್ತಿಮಾನ್ ಧಾರಾವಾಹಿ ಮತ್ತೆ ಪ್ರಸಾರವಾಗುವ ಸಾಧ್ಯತೆ ಇದೆ ಎಂದು ಮುಕೇಶ್ ಹೇಳಿದ್ದಾರೆ.

66ನೇ ವಯಸ್ಸಿಗೆ ಶಕ್ತಿಮಾನ್ ಆಗುತ್ತೇನೆ ಎಂದು ಹೊರಟ ಮುಕೇಶ್ ಖನ್ನಾ; ಪ್ರಸಾರ ಯಾವಾಗ?
ಶಕ್ತಿಮಾನ್
Follow us
ರಾಜೇಶ್ ದುಗ್ಗುಮನೆ
|

Updated on: Nov 12, 2024 | 8:44 AM

ಮುಕೇಶ್ ಖನ್ನಾ ಅವರು ಶಕ್ತಿಮಾನ್ ಮೂಲಕ ಫೇಮಸ್ ಆಗಿದ್ದರು. 90ರ ದಶಕದಲ್ಲಿ ಈ ಶೋ ಸಾಕಷ್ಟು ಮನ್ನಣೆ ಪಡೆದಿತ್ತು. ಈಗ ಮುಕೇಶ್ ಅವರಿಗೆ 66 ವರ್ಷ. ಅವರು ಈಗ ಮತ್ತೆ ಶಕ್ತಿಮಾನ್ ಬಟ್ಟೆ ತೊಟ್ಟಿದ್ದಾರೆ. ಈ ಶೋನ ಮತ್ತೆ ತರೋದಾಗಿ ಮುಕೇಶ್ ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ. ‘ಆ ಶೋಗೆ ಇರುವ ಮರ್ಯಾದೆಯನ್ನು ಹಾಳು ಮಾಡಬೇಡಿ’ ಎಂದು ಅನೇಕರು ಕೋರಿದ್ದಾರೆ.

ಎಎನ್​ಐ ಜೊತೆ ಮಾತನಾಡಿರುವ ಮುಕೇಶ್ ಖನ್ನಾ, ‘ಈ ಬಟ್ಟೆ ನನ್ನಲ್ಲೇ ಇದೆ. ನನ್ನಲ್ಲೇ ಬೆರೆತು ಹೋಗಿದೆ. ಶಕ್ತಿಮಾನ್​ನಲ್ಲಿ ನಾನು ಉತ್ತಮವಾಗಿ ನಟಿಸಿದ್ದೆ. ಶೂಟಿಂಗ್ ಮಾಡುವಾಗ ಕ್ಯಾಮೆರಾ ಇದೆ ಎಂಬುದನ್ನೇ ಮರೆತಿದ್ದೆ. 1997ರಿಂದ 20005ರವರೆಗೆ ಶೋ ನಡೆದಿತ್ತು. ಈ ಪಾತ್ರ ಈಗಿನ ಜನರೇಷನ್ ತಲುಪಬೇಕು’ ಎಂದಿದ್ದಾರೆ. 2027ರ ವೇಳೆಗೆ ಈ ಶೋ ಪ್ರಸಾರ ಕಾಣುವ ಭರವಸೆಯನ್ನು ಅವರು ಹೊರಹಾಕಿದ್ದಾರೆ.

ಶಕ್ತಿಮಾನ್ ಪಾತ್ರ ಮಾಡಬೇಕು ಎಂದರೆ ಸಾಕಷ್ಟು ಎನರ್ಜಿ ಬೇಕು. ಆದರೆ, ಮುಕೇಶ್ ಅವರಿಗೆ ಈಗ ವಯಸ್ಸಾಗಿದೆ. ಅವರಲ್ಲಿ ಮೊದಲಿನ ಎನರ್ಜಿ ಇಲ್ಲ. ಹೀಗಾಗಿ, ಅವರು ಶಕ್ತಿಮಾನ್ ಪಾತ್ರ ಮಾಡಿದರೆ ಮೊದಲಿನಷ್ಟು ಶೋ ಉತ್ತಮವಾಗಿ ಮೂಡಿ ಬರುವುದಿಲ್ಲ ಎಂಬುದು ಅನೇಕರ ನಂಬಿಕೆ. ‘ಶಕ್ತಿಮಾನ್ ಈಗ ಫೈಟ್ ಮಾಡಿದರೆ ಆಸ್ಪತ್ರೆ ಸೇರಬೇಕು’ ಎಂದು ಕೆಲವರು ಹೇಳಿದ್ದಾರೆ. ‘ಮುಕೇಶ್ ಅವರು ಭೂತಕಾಲದಲ್ಲೇ ಸ್ಟಕ್ ಆಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆಯಾದ ನಟ ಶಕ್ತಿಮಾನ್​ ಆಗೋದು ಬೇಡ’: ಖಡಕ್​ ಆಗಿ ಹೇಳಿದ ಮುಖೇಶ್​ ಖನ್ನಾ

‘ಶಕ್ತಿಮಾನ್’ ಹೆಸರಲ್ಲಿ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿ ಇದೆ. ಇದನ್ನು ರಣವೀರ್ ಸಿಂಗ್ ಮಾಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಮುಕೇಶ್​ಗೆ ಅಸಮಾಧಾನ ಇದೆ. ‘ಬೆತ್ತಲೆ ಆಗಿ ಕಾಣಿಸಿಕೊಂಡವರಿಗೆ ಶಕ್ತಿಮಾನ್ ಪಾತ್ರ ಮಾಡುವ ಅಧಿಕಾರ ಇಲ್ಲ’ ಎಂದು ಮುಕೇಶ್ ಹೇಳಿದ್ದರು. ರಣವೀರ್ ಸಿಂಗ್ ಈ ಮೊದಲು ಬೆತ್ತಲೆ ಫೋಟೋಶೂಟ್ ಮಾಡಿ ವಿವಾದ ಸೃಷ್ಟಿ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.