AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನಟನಿಗೆ ಕೊಲೆ ಬೆದರಿಕೆ, ಮಗುವನ್ನೂ ಬಿಟ್ಟಿಲ್ಲ

ವಿಕ್ರಾಂತ್ ಮೆಸ್ಸಿ ಅಭಿನಯದ "ದಿ ಸಾಬರಮತಿ ರಿಪೋರ್ಟ್" ಚಿತ್ರವು 2002ರ ಗೋಧ್ರಾ ಘಟನೆಯನ್ನು ಆಧರಿಸಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ, ವಿಕ್ರಾಂತ್ ಮೆಸ್ಸಿ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ತಿಳಿದುಬಂದಿದೆ. ಚಿತ್ರವು ನವೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.

‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನಟನಿಗೆ ಕೊಲೆ ಬೆದರಿಕೆ, ಮಗುವನ್ನೂ ಬಿಟ್ಟಿಲ್ಲ
ಮಂಜುನಾಥ ಸಿ.
|

Updated on: Nov 12, 2024 | 12:44 PM

Share

‘ಮಿರ್ಜಾಪುರ್’ ವೆಬ್ ಸರಣಿ, ‘12ತ್ ಫೇಲ್’ ಸಿನಿಮಾಗಳ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ನಟ ವಿಕ್ರಾಂತ್ ಮೆಸ್ಸಿ ಇದೀಗ ‘ದಿ ಸಾಬರಮತಿ ರಿಪೋರ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಭಾರತದ ಇತಿಹಾಸದ ಕ್ರೂರ ಅಧ್ಯಾಯಗಳಲ್ಲಿ ಒಂದಾದ ಗೋಧ್ರಾ ಘಟನೆಯನ್ನು ಆಧರಿಸಿದ ಸಿನಿಮಾ ಅದಾಗಿದ್ದು, ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಟ ವಿಕ್ರಾಂತ್ ಮೆಸ್ಸಿಗೆ ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಬೆದರಿಕೆಗಳು ಬಂದಿವೆಯಂತೆ.

‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ವಿಕ್ರಾಂತ್ ಮಸ್ಸಿ, ‘ಹೌದು, ನನಗೆ ಸತತವಾಗಿ ಕೊಲೆ ಬೆದರಿಕೆಗಳು ಬರುತ್ತಲೇ ಇವೆ. ನನ್ನ ಇನ್​ಸ್ಟಾಗ್ರಾಂ ತೆರೆದು ನೋಡಿದರೆ ಎಲ್ಲರಿಗೂ ಅದು ತಿಳಿಯುತ್ತದೆ. ನನಗೆ ಇರಲಿ ನನ್ನ 9 ತಿಂಗಳು ಮಗುವನ್ನೂ ಬಿಡುತ್ತಿಲ್ಲ. ಮಗುವಿನ ಬಗ್ಗೆಯೂ ಸತತ ಬೆದರಿಕೆಗಳು ಬರುತ್ತಲೇ ಇವೆ. ಆದರೆ ನಾವು ಕಲಾವಿದರು, ನಮಗೆ ಕತೆ ಹೇಳುವುದಕ್ಕೆ ಬರುತ್ತದೆ ಅಷ್ಟೆ. ಅದನ್ನೇ ನಾವು ಮಾಡುತ್ತಿದ್ದೇವೆ’ ಎಂದಿದ್ದಾರೆ.

‘ಸಿನಿಮಾದ ಟ್ರೇಲರ್ ಅಷ್ಟೆ ಈಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಗೋಧ್ರಾ ಹತ್ಯಾಕಾಂಡಕ್ಕೆ ಮಾಧ್ಯಮದವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಆಧಾರವಾಗಿಟ್ಟುಕೊಂಡು ಆ ಕತೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಸಿನಿಮಾ ಸಂಪೂರ್ಣವಾಗಿ ನಿಜ ಘಟನೆಗಳ ಮೇಲೆ ಆಧಾರಿತವಾಗಿದೆ. ಸಿನಿಮಾವನ್ನು ಪ್ರೇಕ್ಷಕರು ನೋಡಿಲ್ಲ, ಈಗಲೇ ಸಿನಿಮಾದಲ್ಲಿ ಹಾಗೆ ಇರಬಹುದು, ಇಂಥಹವರನ್ನು ತಪ್ಪಿತಸ್ಥರನ್ನಾಗಿ ತೋರಿಸಿರಬಹುದು ಎಂದೆಲ್ಲ ಊಹಿಸಬೇಡಿ, ಸಿನಿಮಾ ನೋಡಿದರೆ ನಿಮಗೇ ಅದೆಲ್ಲ ಅರ್ಥವಾಗಲಿದೆ’ ಎಂದಿದ್ದಾರೆ ವಿಕ್ರಾಂತ್ ಮೆಸ್ಸಿ.

ಇದನ್ನೂ ಓದಿ:ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ; 4 ಹಂತಗಳಲ್ಲಿ ಭದ್ರತೆ

‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ಗುಜರಾತ್​ನ ‘ಗೋಧ್ರಾ’ನಲ್ಲಿ 2002, ಫೆಬ್ರವರಿ 27 ರಂದು ನಡೆದ ಹತ್ಯಾಕಾಂಡದ ಕತೆ ಹೇಳಲಾಗಿದೆ. ಹಿಂದಿ ಪತ್ರಕರ್ತನೊಬ್ಬ ಆ ಹತ್ಯಾಕಾಂಡದ ಘಟನೆಯನ್ನು ವರದಿ ಮಾಡುವ, ತನಿಖೆ ಮಾಡುವ ಕತೆ ಸಿನಿಮಾದಲ್ಲಿದೆ. ಸಿನಿಮಾವನ್ನು ಧೀರಜ್ ಸರ್ನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸಿ ಜೊತೆಗೆ ರಾಶಿ ಖನ್ನಾ, ರಿಧಿ ದೋಗ್ರಾ ಇನ್ನಿತರರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಟಿವಿ ಲೋಕದ ತಾರೆ ಏಕ್ತಾ ಕಪೂರ್. ಸಿನಿಮಾ ನವೆಂಬರ್ 15ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ