AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​​ಗೆ ತಮ್ಮದೇ ಸಿನಿಮಾದ ಗೀತ ಸಾಹಿತಿಯಿಂದ ಜೀವ ಬೆದರಿಕೆ; ರಾಯಚೂರಿನಲ್ಲಿ ಆರೋಪಿ ಅರೆಸ್ಟ್

ಸಲ್ಮಾನ್ ಖಾನ್ ಅವರಿಗೆ ಬಂದ ಜೀವಬೆದರಿಕೆ ಪ್ರಕರಣದಲ್ಲಿ ರಾಯಚೂರಿನ ಸೋಹೆಲ್ ಪಾಶಾ ಎಂಬ ಗೀತ ಸಾಹಿತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪಾಶಾ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪಾಶಾ ಪಬ್ಲಿಸಿಟಿಗಾಗಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಸಲ್ಮಾನ್​​ಗೆ ತಮ್ಮದೇ ಸಿನಿಮಾದ ಗೀತ ಸಾಹಿತಿಯಿಂದ ಜೀವ ಬೆದರಿಕೆ; ರಾಯಚೂರಿನಲ್ಲಿ ಆರೋಪಿ ಅರೆಸ್ಟ್
ಸಲ್ಮಾನ್ ಖಾನ್ Image Credit source: Variety
ರಾಜೇಶ್ ದುಗ್ಗುಮನೆ
|

Updated on:Nov 13, 2024 | 6:58 AM

Share

ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಬಂದ ಜೀವ ಬೆದರಿಕೆಗಳಿಗೆ ಲೆಕ್ಕವೇ ಇಲ್ಲದಂತೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಾಯಚೂರಿನಲ್ಲಿ ಸೋಹೆಲ್ ಪಾಶಾ ಎಂಬಾತನನ್ನು ಬಂಧಿಸಿದ್ದಾರೆ. ಶಾಕಿಂಗ್ ವಿಚಾರ ಎಂದರೆ ಈತ ಸಲ್ಮಾನ್ ಖಾನ್ ಮುಂಬರುವ ಸಿನಿಮಾದ ಗೀತ ಸಾಹಿತಿ ಆಗಿದ್ದರು! ಆತನೇ ಸಲ್ಮಾನ್​​ ಖಾನ್​ಗೆ ಬೆದರಿಕೆ ಹಾಕಿದ್ದರು.

ಸಲ್ಮಾನ್ ಖಾನ್ ಅವರನ್ನು ಕೊಲ್ಲೋದಾಗಿ ಮುಂಬೈ ಸಂಚಾರ ಪೊಲೀಸರಿಗೆ ನಿರಂತರವಾಗಿ ಸಂದೇಶ ಬರುತ್ತಲೇ ಇದೆ. ನವೆಂಬರ್ 7ರಂದು ಕೂಡ ಬೆದರಿಕೆ ಬಂದಿತ್ತು. ಐದು ಕೋಟಿ ರೂಪಾಯಿ ಕೊಡದೇ ಇದ್ದರೆ ಸಲ್ಮಾನ್ ಹಾಗೂ ಸೋಹೆಲ್​ನ (ಸಲ್ಲು ಸಹೋದರ) ಕೊಲೆ ಮಾಡುತ್ತೇವೆ ಎಂದು ಸೋಹೆಲ್ ಪಾಶಾ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ವೊರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಮುಂಬೈ ಪೊಲೀಸರು ನಿರಂತರವಾಗಿ ತನಿಖೆ ನಡೆಸಿದ್ದಾರೆ. ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಅದು ಕರ್ನಾಟಕದ ರಾಯಚೂರಿನ ವೆಂಕಟೇಶ್ ನಾರಾಯಣ ಎಂಬುವವರದು ಅನ್ನೋದು ಗೊತ್ತಾಗಿದೆ. ಅಲ್ಲಿ ಹೋಗಿ ನೋಡಿದಾಗ ಅವರ ಬಳಿ ಕೇವಲ ಬೇಸಿಕ್ ಸೆಟ್ ಇದ್ದು, ವಾಟ್ಸಾಪ್ ಇಲ್ಲ ಅನ್ನೋದು ಗೊತ್ತಾಗಿದೆ. ಬೇಸಿಕ್ ಸೆಟ್​ಗೆ ಮೂರನೇ ತಾರೀಕಿಗೆ ವಾಟ್ಸಾಪ್​ ಲಾಗಿನ್​ ಒಟಿಪಿ ಬಂದಿತ್ತು ಎಂಬುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ವೆಂಕಟೇಶ್ ನಾರಾಯಣ ರಾಯಚೂರಿನ ಮಾರುಕಟ್ಟೆಗೆ ದಿನಸಿ ತರಲು ಹೋಗಿದ್ದ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ; 4 ಹಂತಗಳಲ್ಲಿ ಭದ್ರತೆ

‘ನಾನು ಮಾರುಕಟ್ಟೆಗೆ ಹೋದಾಗ ಓರ್ವ ವ್ಯಕ್ತಿ ಬಂದು ಮೊಬೈಲ್ ಸರಿ ಇಲ್ಲ ನಿಮ್ಮ ಮೊಬೈಲ್ ನೀಡಿ, ಕರೆ ಮಾಡಿ ಕೊಡುತ್ತೇನೆ ಎಂದು ಕೋರಿದ್ದ’ ಎಂಬುದಾಗಿ ವೆಂಕಟೇಶ್ ನಾರಾಯಣ ಹೇಳಿದ್ದಾರೆ. ಈ ರೀತಿ ಕರೆ ಮಾಡಿದವನೇ ಸೋಹೆಲ್ ಪಾಶಾ. ನಂತರ ಮನೆಗೆ ಹೋಗಿ ಈತನ ಬಂಧಿಸಲಾಗಿದೆ. ಸದ್ಯ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ. ಪಾಶಾ ಪಬ್ಲಿಸಿಟಿಗೆ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Wed, 13 November 24