ಅನುಪಮ್ ಖೇರ್ ಅವರ ನಟನೆಯ ‘ವಿಜಯ್ 69’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿದೆ. ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆದರೆ, ಅವರು ಈವರೆಗೆ ಸ್ವಂತ ಮನೆ ಹೊಂದಿಲ್ಲ. ಈ ವಿಚಾರವನ್ನು ಸ್ವತಃ ಅನುಪಮ್ ಖೇರ್ ಅವರೇ ರಿವೀಲ್ ಮಾಡಿದ್ದಾರೆ. ಸ್ವಂತ ಮನೆ ಹೊಂದದೇ ಇರಲು ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಇದನ್ನು ಕೆಲವರು ಒಪ್ಪಿಕೊಂಡಿದ್ದಾರೆ.
ಅನುಪಮ್ ಖೇರ್ ಅವರು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದು, ಇದು ಬಾಡಿಗೆಯದ್ದು. ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಅಪಾರ್ಟ್ಮೆಂಟ್ನ ಬಾಡಿಗೆ ಪಡೆದು ಅಲ್ಲಿ ವಾಸವಾಗಿದ್ದೇನೆ. ನಾನು ಸ್ವಂತ ಮನೆ ಹೊಂದಬಾರದು ಎಂದು ನಿರ್ಧರಿಸಿದೆ. ಯಾರಿಗಾಗಿ ಈ ಸ್ವಂತ ಮನೆ? ಪ್ರತಿ ತಿಂಗಳು ಬಾಡಿಗೆ ಕಟ್ಟಿ ಹಾಯಾಗಿ ವಾಸ ಮಾಡಿ. ನೀವು ಮನೆ ಖರೀದಿ ಮಾಡಬೇಕು ಎಂದು ತೆಗೆದಿಟ್ಟ ಹಣವನ್ನು ಬ್ಯಾಂಕ್ನಲ್ಲಿ ಇಡಿ. ಅದರಿಂದ ಬಾಡಿಗೆ ಕಟ್ಟಿ’ ಎಂದಿದ್ದಾರೆ ಅವರು.
‘ನೀವು ಹೋದ ಬಳಿಕ ನಿಮ್ಮ ಮನೆಗಾಗಿ ನಿಮ್ಮವರು ಜಗಳ ಆಡಬಹುದು. ಅದರ ಬದಲು ಹಣವನ್ನು ಹಂಚುವುದು ಉತ್ತಮ. ನಾನು ಶಿಮ್ಲಾದಲ್ಲಿ ನನ್ನ ತಾಯಿಗಾಗಿ ಒಂದು ಮನೆಯನ್ನು ಖರೀದಿಸಿದೆ. ಏಳು ವರ್ಷಗಳ ಹಿಂದೆ ನಾನು ನನ್ನ ತಾಯಿಗೆ ಏನು ಬೇಕು ಎಂದು ಕೇಳಿದೆ. ಮನೆ ಬೇಕು ಎಂದು ಹೇಳಿದರು. ಹೀಗಾಗಿ ಮನೆ ಖರೀದಿಸಿದೆ. ನನ್ನ ತಂದೆ ಮೃತಪಟ್ಟ ಬಳಿಕ ಅವರು ಅಲ್ಲಿ ವಾಸವಾಗಿರಲಿಲ್ಲ’ ಎಂದಿದ್ದಾರೆ ಅನುಪಮ್ ಖೇರ್.
ಇದನ್ನೂ ಓದಿ: ‘ವಿಜಯ್ 69’ ಚಿತ್ರಕ್ಕೆ ಅನುಪಮ್ ಖೇರ್ ಹಾಕಿದ ಶ್ರಮ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ
‘ಒಂದು ಬೆಡ್ರೂಂ ಮನೆ ಬೇಕು ಎಂದರು. ನಾನು ಎಂಟು ಬೆಡ್ರೂಂ ಮನೆ ಕೊಡಿಸಿದೆ. ಹೆಚ್ಚಿನ ಕರೆಂಟ್ ಬಿಲ್ ಬರುತ್ತದೆ ಎಂದು ಅವರು ಅಲ್ಲಿಗೆ ಹೋದಾಗಲೆಲ್ಲ ಲೈಟ್ನ ಆರಿಸಿ ಕುಳಿತುಕೊಳ್ಳುತ್ತಾರೆ. ವಿದ್ಯುತ್ ಬಿಲ್ ಹೆಚ್ಚು ಬರಹುದು’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.