AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್, ಶಾರುಖ್​ ಖಾನ್ ಮಾತ್ರವಲ್ಲ ಸೈಫ್ ಅಲಿ ಖಾನ್​ಗೂ ಬಂದಿತ್ತು ಬೆದರಿಕೆ

ನಿಜ ಹೇಳಬೇಕೆಂದರೆ ಸೈಫ್-ಕರೀನಾ ಮದುವೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸೈಫ್ ಅವರನ್ನು ಮದುವೆಯಾಗಬೇಡಿ ಎಂದು ಕರೀನಾಗೆ ಹಲವರು ಸಲಹೆ ಕೂಡ ನೀಡಿದ್ದರು. ಆದರೆ ಸೈಫ್-ಕರೀನಾ ಯಾವುದಕ್ಕೂ ಗಮನ ಕೊಡುವ ಬದಲು ತಮ್ಮ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ 2012ರ ಅಕ್ಟೋಬರ್​ನಲ್ಲಿ ವಿವಾಹವಾದರು. ಮದುವೆಯಾದ ನಂತರ ನಟನಿಗೆ ಬೆದರಿಕೆಗಳು ಬರಲಾರಂಭಿಸಿದವು.

ಸಲ್ಮಾನ್, ಶಾರುಖ್​ ಖಾನ್ ಮಾತ್ರವಲ್ಲ ಸೈಫ್ ಅಲಿ ಖಾನ್​ಗೂ ಬಂದಿತ್ತು ಬೆದರಿಕೆ
ಸಲ್ಮಾನ್-ಸೈಫ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 12, 2024 | 8:12 AM

ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ಅವರ ಬಗ್ಗೆ ಮತ್ತೆ ಹೇಳುವ ಅಗತ್ಯವಿಲ್ಲ ಅಗತ್ಯವಿಲ್ಲ. ಇವರಿಬ್ಬರೂ ಪವರ್ ಫುಲ್ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳು ಮತ್ತು ಬಾಲಿವುಡ್ ಹೃದಯಗಳನ್ನು ಗೆದ್ದಿದ್ದಾರೆ. ಇಂದು ಕರೀನಾ – ಸೈಫ್ ತಮ್ಮ ಇಬ್ಬರು ಮಕ್ಕಳು ಮತ್ತು ಕುಟುಂಬದೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಸೈಫ್-ಕರೀನಾಗೆ ಬೆದರಿಕೆಯೊಂದು ಬಂದಿತ್ತು. ಅದರ ಹಿಂದಿನ ಕಾರಣ ಬಹಳ ವಿಚಿತ್ರ . ಅಂತರ್ಧರ್ಮೀಯ ವಿವಾಹದ ಕಾರಣ ಸೈಫ್-ಕರೀನಾಗೆ ಬೆದರಿಕೆಗಳು ಬಂದಿದ್ದವು. ಈ ಘಟನೆಯನ್ನು ಸ್ವತಃ ಸೈಫ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ನಿಜ ಹೇಳಬೇಕೆಂದರೆ ಸೈಫ್-ಕರೀನಾ ಮದುವೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸೈಫ್ ಅವರನ್ನು ಮದುವೆಯಾಗಬೇಡಿ ಎಂದು ಕರೀನಾಗೆ ಹಲವರು ಸಲಹೆ ಕೂಡ ನೀಡಿದ್ದರು. ಆದರೆ ಸೈಫ್-ಕರೀನಾ ಯಾವುದಕ್ಕೂ ಗಮನ ಕೊಡುವ ಬದಲು ತಮ್ಮ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ 2012ರ ಅಕ್ಟೋಬರ್​ನಲ್ಲಿ ವಿವಾಹವಾದರು. ಮದುವೆಯಾದ ನಂತರ ನಟನಿಗೆ ಬೆದರಿಕೆಗಳು ಬರಲಾರಂಭಿಸಿದವು.

ಸಂದರ್ಶನವೊಂದರಲ್ಲಿ ಸೈಫ್ ಅಲಿ ಖಾನ್ ಈ ಬಗ್ಗೆ ಮಾತನಾಡಿದ್ದರು. ‘ನಮ್ಮ ಮದುವೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ನನ್ನ ಮಾವ ರಣಧೀರ್ ಕಪೂರ್ ಅವರಿಗೆ ಅನಾಮಧೇಯ ಪತ್ರ ಬಂದಿತ್ತು. ಪತ್ರದಲ್ಲಿ ನಮ್ಮ ಕುಟುಂಬವನ್ನು ಕೊಲ್ಲುವುದಾಗಿ ಮತ್ತು ನಮ್ಮ ಮನೆಯ ಬಳಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಆದರೆ ಅದು ನಮಗೆ ಹೆಚ್ಚು ತೊಂದರೆ ಕೊಡಲಿಲ್ಲ. ಈ ಹಿಂದೆಯೂ ಕುಟುಂಬ ಇಂತಹ ಬೆದರಿಕೆಗಳನ್ನು ಎದುರಿಸಿದೆ’ ಎಂದು ಹೇಳಿದ್ದರು ಅವರು.

‘ಜನರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ನಾನು ಎಂದಿಗೂ ಯೋಚಿಸುವುದಿಲ್ಲ. ಬೆದರಿಕೆ ಹಾಕುವುದಕ್ಕೂ ಬೆದರಿಕೆಗಳನ್ನು ನಿಜವಾಗಿಸುವದಕ್ಕೂ ಬಹಳ ವ್ಯತ್ಯಾಸವಿದೆ. ಅಂತರ್ ಧರ್ಮೀಯ ವಿವಾಹವಾಗಿರುವುದರಿಂದ ನನ್ನ ಪೋಷಕರಿಗೂ ಇಂತಹ ಬೆದರಿಕೆಗಳು ಬಂದಿದ್ದವು’ ಎಂದು ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ದಕ್ಷಿಣ ಭಾರತ ಹಾಗೂ ಬಾಲಿವುಡ್ ನಡುವಿನ ವ್ಯಾತ್ಯಾಸ ವಿವರಿಸಿದ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಪೋಷಕರ ಬಗ್ಗೆ ಹೇಳೋದಾದರೆ ಶರ್ಮಿಳಾ ಟ್ಯಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ಅಂತರ್ಧರ್ಮೀಯ ವಿವಾಹ ಆಗಿದ್ದರು. ಸೈಫ್-ಕರೀನಾ ಕೂಡ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾದರು. ಅವರ ಮದುವೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ವೈರಲ್ ಆಗಿದ್ದವು.

2012 ರಲ್ಲಿ ಸೈಫ್ ಅಲಿ ಖಾನ್ ಅವರನ್ನು ಮದುವೆಯಾದ ನಂತರ, ನಟಿ 2016 ರಲ್ಲಿ ತಮ್ಮ ಮೊದಲ ಮಗ ತೈಮೂರ್ ಅಲಿ ಖಾನ್ಗೆ ಜನ್ಮ ನೀಡಿದರು. ನಂತರ 2021 ರಲ್ಲಿ, ಕರೀನಾ ತನ್ನ ಎರಡನೇ ಮಗ ಜೆಹ್ ಅಲಿ ಖಾನ್‌ಗೆ ಜನ್ಮ ನೀಡಿದರು. ಈಗ ನಟಿ ನಿರಂತರವಾಗಿ ತನ್ನ ಮಕ್ಕಳೊಂದಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:00 am, Tue, 12 November 24