ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಪುತ್ರಿ ವಮಿಕಾಳ (Vamika) ಮೊದಲ ವರ್ಷದ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದಲ್ಲಿ ಭರ್ಜರಿಯಾಗಿ ಆಚರಿಸಿದ್ದಾರೆ. ಸದ್ಯ ದ.ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಈ ದಂಪತಿಗಳು ಕೇಪ್ಟೌನ್ನಲ್ಲಿ ಬಯೋಬಬಲ್ನಲ್ಲಿದ್ದಾರೆ. ಆ ಮಿತಿಯ ನಡುವೆಯೂ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ ಎಂಬುದಕ್ಕೆ ಅನುಷ್ಕಾ ಪೋಸ್ಟ್ಗಳು ಸಾಕ್ಷಿ ನೀಡಿವೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅನುಷ್ಕಾ ಚಿತ್ರಗಳನ್ನು ಹಂಚಿಕೊಂಡಿದ್ದು, ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ‘‘ಸೂರ್ಯ ಪ್ರಕಾಶಮಾನವಾಗಿದ್ದ. ಬೆಳಕು ಬಹಳ ಚೆನ್ನಾಗಿತ್ತು. ಟೇಬಲ್ ಭರ್ತಿಯಾಗಿತ್ತು.ಇದೇ ರೀತಿ ನಮ್ಮ ಪುಟ್ಟ ಬಾಲೆ ಒಂದು ವರ್ಷ ಪೂರೈಸಿದಳು’’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.
ಅಲ್ಲದೇ ಅನುಷ್ಕಾ ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ವಿರಾಟ್ ಹಾಗೂ ಅನುಷ್ಕಾ ಪಾನೀಯ ಹಿಡಿದು ನಗುತ್ತಾ ಮಾತುಕತೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಈ ಚಿತ್ರದ ಮೂಲಕ ಸಂಭ್ರಮಕ್ಕೆ ಕಾರಣರಾದ ಎಲ್ಲರಿಗೂ ಅನುಷ್ಕಾ ಧನ್ಯವಾದಗಳನ್ನೂ ಹೇಳಿದ್ದಾರೆ. ‘‘ಆಪ್ತರಿಂದ ಈ ಸಂಜೆ ಮತ್ತಷ್ಟು ಖುಷಿಯಿಂದ ಕಳೆಯಿತು. ಬಯೋ ಬಬಲ್ನಲ್ಲಿ ಸಂಭ್ರಮ ಹೇಗೆ ಎಂದು ಯೋಚಿಸುತ್ತಿದ್ದೆ. ಆದರೆ ಎಲ್ಲರಿಂದ ಅದು ಸಾಧ್ಯವಾಯಿತು’’ ಎಂದು ಅವರು ಹೇಳಿದ್ದಾರೆ. ಪುತ್ರಿ ವಮಿಕಾ ಜತೆಯಿರುವ ಮತ್ತೊಂದು ಚಿತ್ರವನ್ನೂ ಅನುಷ್ಕಾ ಹಂಚಿಕೊಂಡಿದ್ದಾರೆ.
ಅನುಷ್ಕಾ ಹಂಚಿಕೊಂಡ ಚಿತ್ರಗಳು ಇಲ್ಲಿವೆ:
ವಿರಾಟ್ ಹಾಗೂ ಅನುಷ್ಕಾ ವಮಿಕಾಳನ್ನು ಕಳೆದ ವರ್ಷ ಜನವರಿ 11ರಂದು ಬರಮಾಡಿಕೊಂಡಿದ್ದರು. ಪುತ್ರಿಯ ಪ್ರೈವಸಿ ಕುರಿತು ದಂಪತಿ ತೀವ್ರ ಕಾಳಜಿ ವಹಿಸಿದ್ದಾರೆ. ಆದ್ದರಿಂದ ಆಕೆಯ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಅಲ್ಲದೇ ಪಾಪರಾಜಿಗಳಿಗೂ ಆಕೆಯ ಚಿತ್ರವನ್ನು ಚಿತ್ರಿಸದಂತೆ ದಂಪತಿ ಕೋರಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅನುಷ್ಕಾ, ವಮಿಕಾಳ ಪ್ರೈವಸಿಯನ್ನು ಎಲ್ಲರೂ ಗೌರವಿಸಿದ್ದಕ್ಕೆ ಧನ್ಯವಾದ ಹೇಳಿದ್ದರು.
ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ ಅನುಷ್ಕಾ:
ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ನಂತರ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಅದಾಗ್ಯೂ ನಿರ್ಮಾಣದ ಕೆಲಸಗಳಲ್ಲಿ ಅವರು ಸಕ್ರಿಯರಾಗಿದ್ದರು. ಇದೀಗ ನಟಿಯ ಹೊಸ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚುತ್ತಿದ್ದಾರೆ. ‘ಚಕ್ಡಾ ಎಕ್ಸ್ಪ್ರೆಸ್’ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ ತೆರೆಕಾಣಲಿದೆ. ಇದಲ್ಲದೇ ಮತ್ತೆರಡು ಚಿತ್ರಗಳಲ್ಲೂ ಅನುಷ್ಕಾ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ.
ಇದನ್ನೂ ಓದಿ:
ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡ್ರಾ ಅನುಷ್ಕಾ ಶರ್ಮಾ? ಕಂಬ್ಯಾಕ್ ಮಾಡಿದ ಕೊಹ್ಲಿ ಪತ್ನಿ
Anushka Shetty: ಖ್ಯಾತ ಸ್ಟಾರ್ ಜತೆ ತೆರೆಹಂಚಿಕೊಳ್ಳುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಲಿದ್ದಾರಾ ಅನುಷ್ಕಾ?
Published On - 2:16 pm, Wed, 12 January 22