ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅನುಷ್ಕಾ ಶರ್ಮಾ-ವಿರಾಟ್ ದಂಪತಿಯಿಂದ ಪೂಜೆ; ವಿಡಿಯೋ ವೈರಲ್
ಅನುಷ್ಕಾ ಅವರು ಪಿಂಕ್ ಬಣ್ಣದ ಸಲ್ವಾರ್ ಕಮೀಜ್ ಧರಿಸಿದ್ದಾರೆ. ವಿರಾಟ್ ಅವರು ಸಾಂಪ್ರದಾಯಿಕ ಧೋತಿ ತೊಟ್ಟಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಕೆ ಮಾಡುತ್ತಿರುವುದು ವಿಡಿಯೋದಲ್ಲಿದೆ.
ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ದೇವರ ಸಾನಿಧ್ಯಕ್ಕೆ ಹೆಚ್ಚು ತೆರಳುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ (Mahakaleshwar Jyotirlinga) ದೇವಾಲಯಕ್ಕೆ ಈ ದಂಪತಿ ತೆರಳಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ಫ್ಯಾನ್ ಪೇಜ್ಗಳು ಶೇರ್ ಮಾಡಿಕೊಳ್ಳುತ್ತಿವೆ. ಈ ದಂಪತಿಗೆ ದೇವರು ಒಳ್ಳೆಯದು ಮಾಡಲಿ ಎಂದು ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.
ಅನುಷ್ಕಾ ಅವರು ಪಿಂಕ್ ಬಣ್ಣದ ಸಲ್ವಾರ್ ಕಮೀಜ್ ಧರಿಸಿದ್ದಾರೆ. ವಿರಾಟ್ ಅವರು ಸಾಂಪ್ರದಾಯಿಕ ಧೋತಿ ತೊಟ್ಟಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಕೆ ಮಾಡುತ್ತಿರುವುದು ವಿಡಿಯೋದಲ್ಲಿದೆ. ಉಳಿದ ಭಕ್ತಾದಿಗಳು ಕೂಡ ಇವರ ಜೊತೆ ಇದ್ದರು. ಇತ್ತೀಚೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆ ಮೂರನೇ ಟೆಸ್ಟ್ ಮ್ಯಾಚ್ ಇಂದೋರ್ನಲ್ಲಿ ನಡೆಯಿತು. ಇಂದೋರ್ ಹಾಗೂ ಉಜ್ಜಯಿನಿ ಇರೋದು ಮಧ್ಯಪ್ರದೇಶದಲ್ಲಿ. ಹೀಗಾಗಿ, ಕೊಹ್ಲಿ ಅವರು ಅನುಷ್ಕಾ ಜೊತೆ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.
Anushka Sharma & Virat Kohli visit Mahakaleshwar temple in Ujjain.#ViratKohli #AnushkaSharma #Ujjain #Mahakaleshwar @viralbhayani77 pic.twitter.com/Y1TEt6dcTR
— Viral Bhayani (@viralbhayani77) March 4, 2023
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಗಳು ವಮಿಕಾ ಜೊತೆ ಹಿಮಾಲಯ ಪ್ರವಾಸ ಮಾಡಿದ್ದರು. ಆ ಸಂದರ್ಭದಲ್ಲಿ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಅವರು ಮತ್ತೊಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಅನುಷ್ಕಾ ಬಗ್ಗೆ ವಿರಾಟ್ ಮಾತು
‘ಕಳೆದ ಎರಡು ವರ್ಷಗಳಲ್ಲಿ ಹಲವು ಘಟನೆಗಳು ನಡೆದೆವು. ನಾವು ಮಗುವನ್ನು ಪಡೆದೆವು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗ ದೊಡ್ಡದು. ಅನುಷ್ಕಾ ನೋಡಿದಾಗ ನನ್ನಲ್ಲಿರುವ ಸಮಸ್ಯೆಗಳು ಏನೂ ಅಲ್ಲ ಎಂದೆನಿಸುತ್ತದೆ. ನೀವು ಹೇಗಿದ್ದೀರೋ ಹಾಗೆ ನಿಮ್ಮ ಕುಟುಂಬ ಒಪ್ಪಿಕೊಳ್ಳುತ್ತದೆ ಎಂದಾದರೆ ಅವರಿಂದ ಅದಕ್ಕಿಂತ ಹೆಚ್ಚಿನದ್ದನ್ನು ನೀವು ನಿರೀಕ್ಷಿಸಬಾರದು’ ಎಂದು ವಿರಾಟ್ ಕೊಹ್ಲಿ ಅವರು ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಹೇಳಿದ್ದರು.
‘ಸ್ಫೂರ್ತಿ ಬೇಕು ಎಂದಾಗ ನೀವು ಮೊದಲು ನೋಡೋದು ಮನೆಯ ಸದಸ್ಯರನ್ನು. ಅನುಷ್ಕಾ ನನಗೆ ದೊಡ್ಡ ಸ್ಫೂರ್ತಿ. ನನ್ನ ಜೀವನದಲ್ಲಿ ನಾನು ಬೇರೆಯದೇ ದೃಷ್ಟಿಕೋನ ಹೊಂದಿದ್ದೆ. ಆದರೆ, ಒಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದರೆ ನಿಮ್ಮೊಳಗೆ ಆ ಬದಲಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಜೀವನದ ಬಗ್ಗೆ ಅನುಷ್ಕಾ ದೃಷ್ಟಿಕೋನ ಭಿನ್ನವಾಗಿದೆ. ವಿಷಯಗಳನ್ನು ಒಪ್ಪಿಕೊಳ್ಳಲು ನಾನು ಅವರಿಂದ ಕಲಿತೆ’ ಎಂದಿದ್ದರು ವಿರಾಟ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 4 March 23