ಟಿ20 ವಿಶ್ವಕಪ್​ಗೆ ಸಾಕ್ಷಿಯಾಗಲು ದುಬೈಗೆ ತೆರಳಿದ್ದಾರಾ ಅನುಷ್ಕಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು

| Updated By: shivaprasad.hs

Updated on: Oct 17, 2021 | 5:22 PM

Virat Kohli | Anushka Sharma: ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇದೀಗ ಅನುಷ್ಕಾ ಹಂಚಿಕೊಂಡಿರುವ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

ಟಿ20 ವಿಶ್ವಕಪ್​ಗೆ ಸಾಕ್ಷಿಯಾಗಲು ದುಬೈಗೆ ತೆರಳಿದ್ದಾರಾ ಅನುಷ್ಕಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು
ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ
Follow us on

ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತದ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದು. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಈ ಜೋಡಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಪುತ್ರಿ ವಮಿಕಾಳೊಂದಿಗೆ ಅನುಷ್ಕಾ ಕೂಡ ತೆರಳಿದ್ದರು. ಅಲ್ಲಿ ತಂಡ ಜಯಗಳಿಸಿದ ನಂತರ ವಿರುಷ್ಕಾ ಡಿನ್ನರ್ ಡೇಟ್, ಪ್ರವಾಸ ಮೊದಲಾದೆಡೆ ತೆರಳಿದ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇಂಗ್ಲೆಂಡ್ ಪ್ರವಾಸ ಮುಗಿದ ಬೆನ್ನಲ್ಲೇ ಅನುಷ್ಕಾ‌ ಭಾರತಕ್ಕೆ ಮರಳಿದ್ದರು. ವಿರಾಟ್ ದುಬೈಗೆ ತೆರಳಿ ಐಪಿಎಲ್‌ನಲ್ಲಿ ಭಾಗಿಯಾಗಿದ್ದರು. ಇದೀಗ ಅಭಿಮಾನಿಗಳಿಗೆ ಸಂತಸದ ಸಮಾಚಾರವೊಂದು ಲಭ್ಯವಾಗಿದೆ.

ವಿರಾಟ್ ಕೊಹ್ಲಿ ಪ್ರಸ್ತುತ ಭಾರತ ತಂಡದೊಂದಿಗೆ ಟಿ20 ವಿಶ್ವಕಪ್ ಭಾಗವಾಗಿದ್ದಾರೆ. ಐಪಿಎಲ್ ಬಯೋಬಬಲ್ ನಿಂದ ಅವರು ನೇರವಾಗಿ ಭಾರತ ತಂಡದ ಬಯೋಬಬಲ್ ಗೆ ತೆರಳಿದ್ದಾರೆ. ಅಚ್ಚರಿಯ ವಿಚಾರವೆಂದರೆ ಅನುಷ್ಕಾ ಕೂಡ ದುಬೈಗೆ ತೆರಳಿದ್ದಾರೆ.‌ ಅವರು ಮತ್ತು ವಿರಾಟ್ ಕೊಹ್ಲಿ ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರೂ ಕೂಡ ಬಯೋಬಬಲ್ ಕಾರಣ ಪ್ರತ್ಯೇಕ ವಾಸದಲ್ಲಿದ್ದಾರೆ. ಒಂದೇ ಹೋಟೆಲ್‌ನಲ್ಲಿ ವಿರಾಟ್ ಇದ್ದರೂ ಕೂಡ ಭೇಟಿಯಾಗಲು ಸಾಧ್ಯವಾಗದ್ದನ್ನು ಅನುಷ್ಕಾ ಪೋಸ್ಟ್ ಮುಖಾಂತರ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು‌ ಹಂಚಿಕೊಂಡಿರುವ ಅನುಷ್ಕಾ, ಅದರಲ್ಲಿ ಮಹಡಿಗಳಾಚೆಗೆ ಇರುವ ವಿರಾಟ್ ಕೊಹ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೋಟೆಲ್ ಎದುರು ವಿರಾಟ್ ನಿಂತು ‘ಹಾಯ್’ ಮಾಡುತ್ತಿರುವ ದೃಶ್ಯವನ್ನೂ ಅವರು ಹಂಚಿಕೊಂಡಿದ್ದಾರೆ.‌ಇದಕ್ಕೆ‌ ಕ್ಯಾಪ್ಶನ್ ನೀಡಲು ಗೊಂದಲವಿದೆ‌ ಎಂದೂ ಬರೆದುಕೊಂಡಿರುವ ಅವರು ಎರಡು ಕ್ಯಾಪ್ಶನ್‌ ಹಂಚಿಕೊಂಡಿದ್ದಾರೆ. ಒಂದರಲ್ಲಿ ‘ಕ್ವಾರಂಟೈನ್ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ’ ಎಂಬರ್ಥದಲ್ಲಿ ಬರೆದುಕೊಂಡಿದ್ದರೆ, ಮತ್ತೊಂದರಲ್ಲಿ ‘ಬಯೋಬಬಲ್ ಸಮಯದಲ್ಲಿ ನಮ್ಮ ಪ್ರೀತಿ’ ಎಂದು ಬರೆದಿದ್ದಾರೆ. ಈ‌ ಮೂಲಕ ತಾವು ದುಬೈ ತಲುಪಿರುವ, ಕ್ವಾರಂಟೈನ್ ನಲ್ಲಿರುವ ವಿಚಾರವನ್ನು ಅನುಷ್ಕಾ‌ ಬಹಿರಂಗಪಡಿಸಿದ್ದು, ಈ ಸಮಯದಲ್ಲಿ ವಿರಾಟ್ ಭೇಟಿಯಾಗಲು ಸಾಧ್ಯವಾಗದ ಕುರಿತು ಬೇಸರ ಹೊರಹಾಕಿದ್ದಾರೆ.

ವಿರಾಟ್ ಹಾಗೂ ಅನುಷ್ಕಾ 2017ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ಈ ವರ್ಷದ ಆರಂಭದಲ್ಲಿ ಪುತ್ರಿ ವಮಿಕಾ‌ ಜನಿಸಿದ್ದಳು. ಅನುಷ್ಕಾ ಸದ್ಯ ನಟನೆಯಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದು, ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಚಿರಂಜೀವಿಗೆ ಯಾವಾಗಲೂ ಭಾನುವಾರ ವಿಶೇಷವಾಗಿತ್ತು’; ಕಾರಣ ವಿವರಿಸಿದ ಮೇಘನಾ

‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್​ ಸ್ಟೋರಿ