ಇಂದು (ಅಕ್ಟೋಬರ್ 14) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ವೀಕ್ಷಿಸಲು ಸಾಕಷ್ಟು ಸೆಲೆಬ್ರಿಟಿಗಳು ತೆರಳುತ್ತಿದ್ದಾರೆ. ಈಗಾಗಲೇ ಈ ಭಾಗದ ಹೋಟೆಲ್ ರೂಂಗಳು ಬುಕ್ ಆಗಿವೆ. ಈ ಮ್ಯಾಚ್ ವೀಕ್ಷಿಸಲು ನಟಿ ಹಾಗೂ ವಿರಾಟ್ ಕೊಹ್ಲಿ (Virat Kohli) ಪತ್ನಿ ಅನುಷ್ಕಾ ಶರ್ಮಾ ಕೂಡ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಟೀಂ ಇಂಡಿಯಾ ಮ್ಯಾಚ್ ವೀಕ್ಷಣೆಗೆ ಅನುಷ್ಕಾ ಶರ್ಮಾ ಅವರು ಆಗಮಿಸಿರಲಿಲ್ಲ. ಅವರು ಪ್ರೆಗ್ನೆಂಟ್ ಎನ್ನುವ ಕಾರಣಕ್ಕೆ ಪಂದ್ಯ ವೀಕ್ಷಣೆಗೆ ಬರುತ್ತಿಲ್ಲ ಎಂದು ಅನೇಕರು ಊಹಿಸಿದ್ದರು. ಆದರೆ, ಇದನ್ನು ಅನುಷ್ಕಾ ಶರ್ಮಾ ಸುಳ್ಳು ಮಾಡಿದ್ದಾರೆ. ಫ್ಲೈಟ್ನಲ್ಲಿ ಅನುಷ್ಕಾ, ಸಚಿನ್ ತೆಂಡೂಲ್ಕರ್ ಹಾಗೂ ದಿನೇಶ್ ಕಾರ್ತಿಕ್ ಪೋಸ್ ನೀಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.
ಇನ್ನು, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಹೊರ ಬರುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಎಲ್ಲರ ಕಣ್ಣು ಅನುಷ್ಕಾ ಶರ್ಮಾ ಅವರ ಹೊಟ್ಟೆಯ ಮೇಲೇ ಇತ್ತು. ಆದರೆ, ಯಾವುದೇ ಬೇಬಿ ಬಂಪ್ ಕಾಣಿಸಲಿಲ್ಲ. ಈ ಮೂಲಕ ಎದ್ದಿರುವ ವದಂತಿಗೆ ಅವರು ಫುಲ್ಸ್ಟಾಪ್ ಏಳೆದಂತೆ ಆಗಿದೆ.
Sachin Tendulkar with Dinesh Karthik and Anushka Sharma in the flight to Ahmedabad.#viratkohli #anushkasharma pic.twitter.com/j8O3whTADn
— 𝙒𝙧𝙤𝙜𝙣🥂 (@wrogn_edits) October 14, 2023
#WATCH | Gujarat: Actress Anushka Sharma arrives in Ahmedabad for the India Vs Pakistan ICC Cricket World Cup match in Ahmedabad today pic.twitter.com/vTJVYXsg68
— ANI (@ANI) October 14, 2023
ಇದನ್ನೂ ಓದಿ: ಕೊನೆಯಾಯಿತು ಅನುಷ್ಕಾ ಶರ್ಮಾ ತಮ್ಮನ ಲವ್ ಸ್ಟೋರಿ; ಯುವ ನಟಿಯ ಜೊತೆ ಬ್ರೇಕಪ್
ಅನುಷ್ಕಾ ಶರ್ಮಾ ಜೊತೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಈ ಪಂದ್ಯ ವೀಕ್ಷಿಸಲು ಅಹಮದಾಬಾದ್ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಲಕ್ಷಾಂತರ ರೂಪಾಯಿಗೆ ಈ ಪಂದ್ಯದ ಟಿಕೆಟ್ಗಳು ಮಾರಾಟ ಆಗಿವೆ. ಈ ಪಂದ್ಯ ಸಾಕಷ್ಟು ಹೈವೋಲ್ಟೇಜ್ನಿಂದ ಕೂಡಿರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ