ಕೋಲ್ಕತ್ತಾ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ಹಾಡು ಹೇಳಲು ಕೋರಿದ ಅಭಿಮಾನಿ; ಸಿಟ್ಟಾದ ಅರಿಜಿತ್ ಸಿಂಗ್

|

Updated on: Sep 21, 2024 | 7:30 AM

ಇಂಗ್ಲೆಂಡ್​ಗೆ ತೆರಳಿದ ವೇಳೆ ಅಭಿಮಾನಿಯೋರ್ವ ಅರಿಜಿತ್ ಅವರೇ ಬರೆದ ‘ಪ್ರೊಟೆಸ್ಟ್​..’ (ಪ್ರತಿಭಟನೆ) ಸಾಂಗ್​ನ ಹಾಡೋಕೆ ಕೇಳಿದ್ದಾನೆ. ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಈ ಹಾಡನ್ನು ಅವರು ಹಾಡಬೇಕು ಎಂಬುದು ಕೋರಿಕೆ ಆಗಿತ್ತು. ಇದನ್ನು ಅವರು ಖಂಡಿಸಿದ್ದಾರೆ.

ಕೋಲ್ಕತ್ತಾ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ಹಾಡು ಹೇಳಲು ಕೋರಿದ ಅಭಿಮಾನಿ; ಸಿಟ್ಟಾದ ಅರಿಜಿತ್ ಸಿಂಗ್
ಅರಿಜಿತ್
Follow us on

ಸೆಲೆಬ್ರಿಟಿಗಳ ಮೂಡ್​ ಯಾವಾಗ ಹೇಗೆ ಇರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ಸೆಲೆಬ್ರಿಟಿಗಳು ಅಭಿಮಾನಿಗಳ ವಿರುದ್ಧ ಸಖತ್ ಸಿಟ್ಟಾದ ಉದಾಹರಣೆ ಸಾಕಷ್ಟಿದೆ. ಈಗ ಗಾಯಕ ಅರಿಜಿತ್ ಸಿಂಗ್ ಕೂಡ ಅಭಿಮಾನಿ ವಿರುದ್ಧ ಸಿಟ್ಟಾಗಿದ್ದಾರೆ. ಪದೇ ಪದೇ ಪ್ರತಿಭಟನೆ ಹಾಡು ಎಂದು ಕೂಗುತ್ತಿದ್ದವನ ವಿರುದ್ಧ ಅವರು ಓಪನ್ ಆಗಿಯೇ ಸಿಟ್ಟು ಹೊರಹಾಕಿದ್ದಾರೆ. ಪ್ರತಿಭಟನೆ ಮಾಡೋದಾದರೆ ಕೋಲ್ಕತ್ತ ಹೋಗು ಎಂದು ಹೇಳಿದ್ದಾರೆ.

ಅರಿಜಿತ್ ಸಿಂಗ್ ಅವರು ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ಕಾರ್ಯಕ್ರಮ ನೀಡಿದ್ದರು. ಅರಿಜಿತ್ ಸಿಂಗ್ ಅವರು 1999ರ ‘ರಮ್ತಾ ಜೋಗಿ..’ ಹಾಡನ್ನು ಹಾಡುತ್ತಿದ್ದರು. ಈ ವೇಳೆ ಅಭಿಮಾನಿಯೋರ್ವ ಅರಿಜಿತ್ ಅವರೇ ಬರೆದ ‘ಪ್ರೊಟೆಸ್ಟ್​..’ (ಪ್ರತಿಭಟನೆ) ಸಾಂಗ್​ನ ಹಾಡೋಕೆ ಕೇಳಿದ್ದಾನೆ. ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಈ ಹಾಡನ್ನು ಅವರು ಹಾಡಬೇಕು ಎಂಬುದು ಕೋರಿಕೆ ಆಗಿತ್ತು.

ಆದರೆ, ಅರಿಜಿತ್ ಇದನ್ನು ಒಪ್ಪಿಲ್ಲ. ಅವರು ನೋಡುವಷ್ಟು ನೋಡಿ ಆ ಬಳಿಕ ಸಿಟ್ಟು ಹೊರಹಾಕಿದ್ದಾರೆ. ‘ಇದು ಅದಕ್ಕೆ ಜಾಗ ಅಲ್ಲ. ಪ್ರತಿಭಟನೆಯ ಸಾಂಗ್ ಕೇಳಲು ಜನ ಇಲ್ಲಿಗೆ ಬಂದಿಲ್ಲ. ಅವರು ನನ್ನ ಹಾಡನ್ನು ಕೇಳು ಬಂದಿದ್ದಾರೆ. ಅದು ನನ್ನ ಕೆಲಸ ಅಲ್ಲವೇ? ಈಗ ಬೇಡ’ ಎಂದು ಅರಿಜಿತ್ ಬುದ್ಧಿಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತ ಕಾರ್ಯಕ್ರಮದ ವೇದಿಕೆ ಮೇಲೆ ಉಗುರು ಕಟ್​ ಮಾಡಿ ಟ್ರೋಲ್​ ಆದ ಅರಿಜಿತ್​ ಸಿಂಗ್​ 

‘ನಿನಗೆ ನಿಜಕ್ಕೂ ನೋವಾಗುತ್ತಿದ್ದರೆ ಕೋಲ್ಕತ್ತ ಹೋಗು. ಅಲ್ಲಿ ಕೆಲವರನ್ನು ಸೇರಿಸು. ಅನೇಕ ಬೆಂಗಾಲಿ ಜನರು ಇಲ್ಲಿದ್ದಾರೆ. ರಸ್ತೆಗೆ ಇಳಿದು ಪ್ರತಿಭಟನೆ ಮಾಡು’ ಎಂದು ಸಿಟ್ಟಲ್ಲೇ ಅರಿಜಿತ್ ಸಿಂಗ್ ಹೇಳಿದ್ದಾರೆ.

ಕೇಳಿದ ಹಾಡು ಯಾವುದು?

ಅರಿಜಿತ್ ಸಿಂಗ್ ಅವರು ಆಗಸ್ಟ್ 28ರಂದು ಯೂಟ್ಯೂಬ್​ನಲ್ಲಿ ಸಾಂಗ್ ಒಂದನ್ನು ರಿಲೀಸ್ ಮಾಡಿದ್ದರು. ಈ ಹಾಡನ್ನು ಅವರೇ ಬರೆದು, ಅವರೇ ಹಾಡಿ, ಅವರೇ ಸಂಗೀತ ಸಂಯೋಜನೆ ಕೂಡ ಮಾಡಿದ್ದರು. ಕೋಲ್ಕತ್ತಾದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಈ ಹಾಡು ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.