ಸಂಗೀತ ಕಾರ್ಯಕ್ರಮದ ವೇದಿಕೆ ಮೇಲೆ ಉಗುರು ಕಟ್​ ಮಾಡಿ ಟ್ರೋಲ್​ ಆದ ಅರಿಜಿತ್​ ಸಿಂಗ್​

ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗಲೇ ಅರಿಜಿತ್​ ಸಿಂಗ್​ ಅವರು ಉಗುರು ಕಟ್​ ಮಾಡಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಅವರು ಯಾಕೆ ಈ ರೀತಿ ಮಾಡಿದರು ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಬಹುತೇಕರು ಅರಿಜಿತ್​ ಸಿಂಗ್​ ಅವರನ್ನು ಟ್ರೋಲ್​ ಮಾಡಿದ್ದಾರೆ. ಆದರೆ ಕೆಲವರು ಅವರ ಪರವಾಗಿ ವಾದ ಮಾಡಿದ್ದಾರೆ.

ಸಂಗೀತ ಕಾರ್ಯಕ್ರಮದ ವೇದಿಕೆ ಮೇಲೆ ಉಗುರು ಕಟ್​ ಮಾಡಿ ಟ್ರೋಲ್​ ಆದ ಅರಿಜಿತ್​ ಸಿಂಗ್​
ಅರಿಜಿತ್​ ಸಿಂಗ್​
Follow us
ಮದನ್​ ಕುಮಾರ್​
|

Updated on: May 07, 2024 | 10:49 PM

ಖ್ಯಾತ ಗಾಯಕ ಅರಿಜಿತ್​ ಸಿಂಗ್​ (Arijit Singh) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರ ಹಲವಾರು ಹಾಡುಗಳು ಸೂಪರ್​ ಹಿಟ್​ ಆಗಿವೆ. ಇತ್ತೀಚಿನ ವರ್ಷಗಳಲ್ಲಿ ಹಲವು ಬಾಲಿವುಡ್​ ಸಿನಿಮಾಗಳ ಗೆಲುವಿಗೆ ಅವರ ಹಾಡುಗಳು (Arijit Singh Songs) ಕೂಡ ಕಾರಣ ಆಗಿವೆ. ಇಷ್ಟೆಲ್ಲ ಖ್ಯಾತಿ ಹೊಂದಿರುವ ಅರಿಜಿತ್​ ಸಿಂಗ್​ ಅವರನ್ನು ಈಗ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ (Troll) ಮಾಡಲಾಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ಅವರ ಒಂದು ವರ್ತನೆ. ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಅರಿಜಿತ್​ ಸಿಂಗ್​ ಉಗುರು ಕತ್ತರಿಸಿದ್ದಾರೆ! ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ವರದಿಗಳ ಪ್ರಕಾರ, ಇತ್ತೀಚೆಗೆ ದುಬೈನಲ್ಲಿ ಅರಿಜಿತ್​ ಸಿಂಗ್​ ಅವರು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ವೇದಿಕೆಯಲ್ಲಿ ಹಾಡು ಹೇಳುತ್ತಿರುವಾಗಲೇ ಅವರು ನೈಲ್​ ಕಟ್ಟರ್​ ಬಳಸಿ ತಮ್ಮ ಉಗುರು ಕತ್ತರಿಸಿಕೊಂಡಿದ್ದಾರೆ. ಇದನ್ನು ಅನ್​ಪ್ರೊಫೆಷನಲ್​ ವರ್ತನೆ ಎಂದು ನೆಟ್ಟಿಗರು ದೂರಿದ್ದಾರೆ. ಸೋಶಿಯಲ್​ ಮೀಡಿಯಾ ಬಳಕೆದಾರರೊಬ್ಬರ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

ಅರಿಜಿತ್​ ಸಿಂಗ್​ ಅವರನ್ನು ಕೋಟ್ಯಂತರ ಮಂದಿ ಗೌರವಿಸುತ್ತಾರೆ. ಅವರ ಕಲೆಗೆ ಮರ್ಯಾದೆ ಕೊಡುತ್ತಾರೆ. ಆದರೆ ಈಗ ಅವರು ಸಂಗೀತ ಕಾರ್ಯಕ್ರಮದ ನಡುವೆಯೇ ಉಗುರು ಕತ್ತರಿಸುವ ಮೂಲಕ ತಮ್ಮದೇ ಗೌರವ ಕಡಿಮೆ ಮಾಡಿಕೊಂಡಿದ್ದಾರೆ ಎಂಬುದು ಹಲವರ ಅಭಿಪ್ರಾಯ. ‘ಮನುಷ್ಯನಿಗೆ ಜನಪ್ರಿಯತೆ ಸಿಕ್ಕರೆ ಹೀಗೆಯೇ ಆಗುತ್ತದೆ’ ಎಂದು ಅನೇಕರು ಖಾರವಾಗಿ ಕಮೆಂಟ್​ ಮಾಡಿದ್ದಾರೆ. ಆ ಮೂಲಕ ಅರಿಜಿತ್​ ಸಿಂಗ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

‘ಕೇವಲ ಉಗುರು ಕಟ್​ ಯಾಕೆ ಮಾಡುತ್ತೀರಿ. ಅಣ್ಣ? ನೀವು ವೇದಿಕೆ ಮೇಲೆ ಸ್ನಾನವನ್ನೂ ಮಾಡಿ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ‘ಈ ರೀತಿ ಮಾಡುವ ಮೂಲಕ ಅರಿಜಿತ್​ ಸಿಂಗ್ ಅವರು ಪ್ರೇಕ್ಷಕರಿಗೆ ಅವಮಾನ ಮಾಡಿದ್ದಾರೆ. ವೇದಿಕೆಗೆ ಅವರು ಅಗೌರವ ಸಲ್ಲಿಸಿದ್ದಾರೆ. ಇದು ತುಂಬ ಅಸಹ್ಯ ವರ್ತನೆ’ ಎಂದು ಮತ್ತೊಬ್ಬರು ಕಮೆಂಟ್​ ಮಾಡಿ ಕಿವಿ ಹಿಂಡಿದ್ದಾರೆ.

ಇದನ್ನೂ ಓದಿ: ಗುಂಪಿನಲ್ಲಿ ಅರಿಜಿತ್​ ಸಿಂಗ್​​ ಕೈ ಎಳೆದ ಮಹಿಳಾ ಅಭಿಮಾನಿ; ಗಾಯಗೊಂಡ ಗಾಯಕನ ವಿಡಿಯೋ ವೈರಲ್​

ಇನ್ನೂ ಕೆಲವರು ಅರಿಜಿತ್​ ಸಿಂಗ್​ಗೆ ಬೆಂಬಲ ನೀಡಿದ್ದಾರೆ. ವೇದಿಕೆ ಮೇಲೆ ಸಂಗೀತ ಕಾರ್ಯಕ್ರಮ ನಡೆಯುತ್ತಿರುವಾಗಲೇ ಅವರು ಉಗುರು ಕಟ್​ ಮಾಡಿದ್ದಕ್ಕೂ ಕಾರಣ ಇದೆ ಎಂದು ಬೆಂಬಲಿಗರು ವಾದ ಮಾಡಿದ್ದಾರೆ. ‘ಉಗುರು ಇರುವ ಕಾರಣದಿಂದ ಅವರಿಗೆ ಗಿಟಾರ್​ ನುಡಿಸಲು ಆಗುತ್ತಿರಲಿಲ್ಲ. ಹಾಗಾಗಿ ಕೂಡಲೇ ಉಗುರು ಕಟ್​ ಮಾಡಿಕೊಂಡರು. ಗಿಟಾರ್​ ನುಡಿಸುವವರಿಗೆ ಇದು ಅರ್ಥ ಆಗುತ್ತದೆ’ ಎಂದು ಕೆಲವರು ಅರಿಜಿತ್​ ಸಿಂಗ್ ಪರವಾಗಿ ಕಮೆಂಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.