ಅರಿಜಿತ್ ಚಿತ್ರರಂಗ ತೊರೆಯಲು ಸಲ್ಮಾನ್ ಖಾನ್ ಕಾರಣ?

ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿ, ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದ್ದಾರೆ. ಅವರು ಸಿನಿಮಾಗಳಲ್ಲಿ ಹಾಡುವುದನ್ನು ನಿಲ್ಲಿಸಿದ್ದರೂ, ಸಂಗೀತ ಕೆಲಸ ಮುಂದುವರಿಸಲಿದ್ದಾರೆ. ಈ ನಿರ್ಧಾರಕ್ಕೆ ಸಲ್ಮಾನ್ ಖಾನ್ ಅವರೊಂದಿಗಿನ ಹಳೆಯ ವಿವಾದವೇ ಕಾರಣವೆಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 'ಮಾತೃಭೂಮಿ' ಹಾಡು ಅವರ ಕೊನೆಯ ಬಾಲಿವುಡ್ ಹಾಡಾಗಿರಬಹುದು ಎಂದು ಊಹಿಸಲಾಗಿದೆ.

ಅರಿಜಿತ್ ಚಿತ್ರರಂಗ ತೊರೆಯಲು ಸಲ್ಮಾನ್ ಖಾನ್ ಕಾರಣ?
ಸಲ್ಮಾನ್-ಅರಿಜಿತ್
Edited By:

Updated on: Jan 29, 2026 | 12:00 PM

ತಮ್ಮ ಮಧುರ ಧ್ವನಿ ಮತ್ತು ಸರಳ ಗಾಯನದಿಂದ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದ ಗಾಯಕ ಅರಿಜಿತ್ ಸಿಂಗ್, ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಎಲ್ಲರಿಗೂ ದೊಡ್ಡ ಆಘಾತ ತಂದಿದೆ. ಅವರ ನಿವೃತ್ತಿಯ ಸುದ್ದಿಯನ್ನು ಚಲನಚಿತ್ರೋದ್ಯಮ ಹಾಗೂ ಅವರ ಅಭಿಮಾನಿಗಳು ಅರಗಿಸಿಕೊಳ್ಳುತ್ತಿಲ್ಲ. ಅರಿಜಿತ್ ಸಂಗೀತ ಕೆಲಸ ನಿಲ್ಲಿಸುವುದಿಲ್ಲವಂತೆ. ಅವರು ಸಿನಿಮಾಗಳಲ್ಲಿ ಹಾಡುವುದನ್ನು ಮಾತ್ರ ನಿಲ್ಲಿಸಿದ್ದಾರೆ. ಅವರು ಚಿತ್ರರಂಗದಿಂದ ದೂರ ಉಳಿಯಲು ಸಲ್ಲು ಕಾರಣ ಎಂದೆಲ್ಲ ಹೇಳಲಾಗುತ್ತಿದೆ.

ಸಲ್ಮಾನ್ ಮತ್ತು ಅರಿಜಿತ್ ನಡುವಿನ ವಿವಾದವು ತುಂಬಾ ಹಳೆಯದು. ಇಬ್ಬರೂ ಕೆಲವು ತಿಂಗಳ ಹಿಂದೆ ಈ ವಿವಾದವನ್ನು ಬಗೆಹರಿಸಿದ್ದರು. ಸಲ್ಮಾನ್ ಅವರ ಮುಂಬರುವ ಚಿತ್ರ ‘ಬ್ಯಾಟಲ್ ಆಫ್ ಗಾಲ್ವಾನ್’ ಚಿತ್ರಕ್ಕಾಗಿ ಅರಿಜಿತ್ ಒಂದು ಹಾಡನ್ನು ಸಹ ಹಾಡಿದ್ದಾರೆ. ಅದುವೇ ‘ಮಾತೃಭೂಮಿ’ ಹಾಡು. ಈ ಹಾಡು ಬಹುಶಃ ಅರಿಜಿತ್ ಅವರ ಕೊನೆಯ ಹಾಡಾಗಿರಬಹುದು. ಅರಿಜಿತ್ ಅವರ ಈ ನಿರ್ಧಾರದಲ್ಲಿ ಸಲ್ಮಾನ್ ಖಾನ್ ಪಾತ್ರವಿದೆಯೇ ಎಂಬ ಪ್ರಶ್ನೆ ಮೂಡಿದೆ.

‘ಮಾತೃಭೂಮಿ’ ಹಾಡು ನಾಲ್ಕು ದಿನಗಳ ಹಿಂದೆ ಬಿಡುಗಡೆಯಾಯಿತು. ಈ ಹಾಡನ್ನು ಹಿಮೇಶ್ ರೇಶಮ್ಮಿಯಾ ಸಂಯೋಜಿಸಿದ್ದಾರೆ. ಸಲ್ಮಾನ್ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ ನಂತರವೇ ಅರಿಜಿತ್ ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ‘ಸಲ್ಮಾನ್ ಹಾಡಿನಲ್ಲಿ ಸರಿಯಾಗಿ ಲಿಪ್-ಸಿಂಕ್ ಮಾಡದೇ ಇರುವುದನ್ನು ನೋಡಿದ ನಂತರ ಅರಿಜಿತ್ ವೃತ್ತಿಜೀವನಕ್ಕೆ ಬೈ ಹೇಳಿದ್ದಾರೆ’ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಮತ್ತು ಅರಿಜಿತ್ ಸಿಂಗ್ ನಡುವಿನ ವಿವಾದ 2014 ರಲ್ಲಿ ಪ್ರಾರಂಭವಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರಿಜಿತ್ ಅವರು ಸಲ್ಮಾನ್ ಅವರನ್ನು ಕೆಣಕಿದ್ದರು. ಸಲ್ಮಾನ್ ಖಾನ್ ಮತ್ತು ರಿತೇಶ್ ದೇಶಮುಖ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹೋಸ್ಟ್ ಮಾಡುತ್ತಿದ್ದರು. ವೇದಿಕೆಯಲ್ಲಿ ಅರಿಜಿತ್ ಅವರನ್ನು ‘ನೀವು ನಿದ್ರಿಸುತ್ತಿದ್ದೀರಾ?’ ಎಂದು ಸಲ್ಲು ಕೇಳಿದಾಗ, ಅವರು ‘ನೀವು ನಿದ್ರಿಸುತ್ತಿದ್ದೀರಿ’ ಎಂದು ಉತ್ತರಿಸಿದರು. ಅರಿಜಿತ್ ಪರೋಕ್ಷವಾಗಿ ಸಲ್ಮಾನ್ ಮತ್ತು ರಿತೇಶ್ ಅವರ ನಿರೂಪಣೆಯನ್ನು ಟೀಕಿಸಿದ್ದರು. ಅದರ ನಂತರ, ಸಲ್ಮಾನ್ ಅವರ ಚಿತ್ರಗಳಿಂದ ಅರಿಜಿತ್ ಅವರ ಹಾಡುಗಳನ್ನು ತೆಗೆದುಹಾಕಲಾಯಿತು. ನಂತರ, ಅರಿಜಿತ್ ಕೂಡ ಸಾರ್ವಜನಿಕವಾಗಿ ಸಲ್ಮಾನ್ ಅವರಿಗೆ ಕ್ಷಮೆಯಾಚಿಸಿದರು.

ಇದನ್ನೂ ಓದಿ: ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?

‘ಬಿಗ್ ಬಾಸ್’ ವೇದಿಕೆಯಲ್ಲಿ ಅರಿಜಿತ್ ಜೊತೆಗಿನ ವಿವಾದದ ಬಗ್ಗೆ ಸಲ್ಮಾನ್ ಪ್ರತಿಕ್ರಿಯಿಸಿದ್ದರು. ‘ಅರಿಜಿತ್ ಮತ್ತು ನಾನು ಈಗ ಒಳ್ಳೆಯ ಸ್ನೇಹಿತರು. ನಮ್ಮ ನಡುವೆ ಸ್ವಲ್ಪ ತಪ್ಪು ತಿಳುವಳಿಕೆ ಇತ್ತು ಮತ್ತು ಆ ತಪ್ಪು ತಿಳುವಳಿಕೆ ನನ್ನಿಂದಲೇ ಉಂಟಾಗಿದೆ’ ಎಂದು ಸಲ್ಮಾನ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.