‘ಬಾರ್ಡರ್ 2’ ಸಿನಿಮಾ ಯಶಸ್ಸು: ‘ಬಾರ್ಡರ್ 3’ ಬರೋದು ಖಚಿತ
ಇತ್ತೀಚೆಗೆ ಬಿಡುಗಡೆ ಆದ ‘ಬಾರ್ಡರ್ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಸಖತ್ ಕಲೆಕ್ಷನ್ ಆಗುತ್ತಿದೆ. ಈ ಸಿನಿಮಾದ ಗೆಲುವಿನ ಖುಷಿಯಲ್ಲಿ ಇರುವ ನಿರ್ಮಾಪಕರು ‘ಬಾರ್ಡರ್ 3’ ಮಾಡಲು ನಿರ್ಧರಿಸಿದ್ದಾರೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ಸೀಕ್ವಲ್ ಮಾಡುವುದು ಖಚಿತ ಎಂಬ ಸುದ್ದಿ ಕೇಳಿಬಂದಿದೆ.

‘ಬಾರ್ಡರ್’ ಸಿನಿಮಾ 1997ರಲ್ಲಿ ಬಿಡುಗಡೆ ಆಗಿತ್ತು. ಸುಮಾರು 3 ದಶಕದ ಬಳಿಕ ಆ ಸಿನಿಮಾಗೆ ಸೀಕ್ವೆಲ್ ಬಂತು. ‘ಬಾರ್ಡರ್ 2’ (Border 2) ಸಿನಿಮಾ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನಿಂದ ನಿರ್ಮಾಪಕರಿಗೆ ಖುಷಿ ಆಗಿದೆ. ಹಾಗಾಗಿ ‘ಬಾರ್ಡರ್ 3’ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿ ಕೇಳಿ ಪ್ರೇಕ್ಷಕರಿಗೆ ಖುಷಿ ಆಗಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ‘ಬಾರ್ಡರ್ 3’ (Border 3) ಬರುವುದು ಖಚಿತ ಎಂದು ಹೇಳಿದ್ದಾರೆ.
‘ಬಾರ್ಡರ್ 2’ ಸಿನಿಮಾ ಜನವರಿ 23ರಂದು ಬಿಡುಗಡೆ ಆಯಿತು. ಅನುರಾಗ್ ಸಿಂಗ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ಧವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ.
ವೀಕೆಂಡ್ ಮತ್ತು ಗಣರಾಜ್ಯೋತ್ಸವದ ರಜೆ ಅಕ್ಕಪಕ್ಕದಲ್ಲೇ ಬಂದಿದ್ದರಿಂದ ‘ಬಾರ್ಡರ್ 2’ ಸಿನಿಮಾಗೆ ತುಂಬಾ ಅನುಕೂಲ ಆಯಿತು. ಮೊದಲ ದಿನ ಈ ಸಿನಿಮಾಗೆ 32.10 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 40.59 ಕೋಟಿ ರೂಪಾಯಿ ಗಳಿಕೆ ಆಯಿತು. 3ನೇ ದಿನ ಬರೋಬ್ಬರಿ 57.20 ಕೋಟಿ ರೂಪಾಯಿ ಬಾಚಿಕೊಂಡಿತು.
ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದರು. ಅಂದು 63.59 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 5ನೇ ದಿನವಾದ ಮಂಗಳವಾರ (ಜ.27) 23.31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಯಶಸ್ಸಿನಿಂದಾಗಿ ನಿರ್ಮಾಪಕರಿಗೆ ಲಾಭ ಆಗಿದೆ. ಆದ್ದರಿಂದ ‘ಬಾರ್ಡರ್ 3’ ಸಿನಿಮಾ ಮಾಡಲು ಅವರು ರೆಡಿಯಾಗಿದ್ದಾರೆ.
ಇದನ್ನೂ ಓದಿ: Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ
‘ಬಾರ್ಡರ್ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆ ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ, ಮೋನಾ ಸಿಂಗ್, ಸೋನಮ್ ಬಾಜ್ವಾ ಮುಂತಾದವರು ನಟಿಸಿದ್ದಾರೆ. ಸಿನಿಮಾದ ಯಶಸ್ಸಿನಿಂದ ಎಲ್ಲರೂ ಫುಲ್ ಖುಷ್ ಆಗಿದ್ದಾರೆ. ದೇಶಭಕ್ತಿ ಕಥಾಹಂದರದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ‘ಬಾರ್ಡರ್ 2’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




