ಅರಿಜಿತ್ ಸಿಂಗ್ ಹಾಡು ನಿಲ್ಲಿಸಿದ್ದು ಏಕೆ? ಕೊಟ್ಟ ಕಾರಣ ಏನು?
Arijit Singh retirement: ಅರಿಜಿತ್ ಸಿಂಗ್ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಸಂಗೀತ ಪ್ರೇಮಿಗಳಿಗೆ ತೀವ್ರ ಆಘಾತ ತಂದಿದೆ. ಅರಿಜಿತ್ ಅವರ ಈ ನಿರ್ಣಯವನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೆ ಅರಿಜಿತ್ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಮ್ಮ ಈ ನಿರ್ಣಯಕ್ಕೆ ಸ್ಪಷ್ಟ ಕಾರಣ ನೀಡಿಲ್ಲ ಆದರೆ ಟ್ವಿಟ್ಟರ್ನಲ್ಲಿ ಈ ಬಗ್ಗೆ ತುಸು ವಿವರವಾಗಿ ಬರೆದುಕೊಂಡಿದ್ದಾರೆ.

ಅರಿಜಿತ್ ಸಿಂಗ್ (Arijit Singh), ಭಾರತದ ಮಾತ್ರವಲ್ಲ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಹಾಡುಗಾರರಲ್ಲಿ ಒಬ್ಬರು. ವಿಶ್ವದ ಅತ್ಯಂತ ಜನಪ್ರಿಯ, ದುಬಾರಿ ಗಾಯಕಿ ಟೇಲರ್ವ ಸ್ವಿಫ್ಟ್ಗಿಂತಲೂ ಅತಿ ಹೆಚ್ಚು ಅಭಿಮಾನಿಗಳನ್ನು ಅವರು ಸ್ಪಾಟಿಫೈ ಹಾಗೂ ಇತರೆ ವೇದಿಕೆಗಳಲ್ಲಿ ಹೊಂದಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಕೇಳಲಾಗುವ ಹಾಡುಗಳು ಸಹ ಅರಿಜಿತ್ ಸಿಂಗ್ ಅವರದ್ದೇ ಆಗಿರುತ್ತವೆ. ಅರಿಜಿತ್ ಸಿಂಗ್ ಪ್ರಸ್ತುತ ಭಾರತ ಅತ್ಯಂತ ಬೇಡಿಕೆಯ ಗಾಯಕರು. ವೃತ್ತಿ ಜೀವನದ ಪರಮೋಚ್ಛ ಸ್ಥಿತಿಯಲ್ಲಿ ಅರಿಜಿತ್ ಸಿಂಗ್ ಇದ್ದರು, ಇಂಥಹಾ ಸಮಯದಲ್ಲಿ ಅವರು ಗಾಯಕನದಿಂದ ಹಠಾತ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ನಿನ್ನೆ ರಾತ್ರಿ ಹಠಾತ್ತನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅರಿಜಿತ್ ಸಿಂಗ್, ತಾವು ಗಾಯನ ನಿಲ್ಲಿಸುತ್ತಿರುವುದಾಗಿಯೂ, ಮುಂದೆ ಯಾವುದೇ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಘೋಷಿಸಿದ್ದಾರೆ. ಇದು ಸಂಗೀತ ಪ್ರೇಮಿಗಳಿಗೆ ತೀವ್ರ ಆಘಾತ ತಂದಿದೆ. ಅರಿಜಿತ್ ಅವರ ಈ ನಿರ್ಣಯವನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೆ ಅರಿಜಿತ್ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಮ್ಮ ಈ ನಿರ್ಣಯಕ್ಕೆ ಸ್ಪಷ್ಟ ಕಾರಣ ನೀಡಿಲ್ಲ ಆದರೆ ಟ್ವಿಟ್ಟರ್ನಲ್ಲಿ ಈ ಬಗ್ಗೆ ತುಸು ವಿವರವಾಗಿ ಬರೆದುಕೊಂಡಿದ್ದಾರೆ.
ಖಾಸಗಿತನ ಇಷ್ಟಪಡುವ ಅರಿಜಿತ್ ಸಿಂಗ್, ತಮ್ಮ ಟ್ವಿಟ್ಟರ್ ಖಾತೆಯನ್ನು ಪಬ್ಲಿಕ್ ಮಾಡಿಲ್ಲ, ಅವರು ಅನುಮತಿ ನೀಡುವ ಫಾಲೋವರ್ಗಳಿಗೆ ಮಾತ್ರವೇ ಅವರ ಪೋಸ್ಟ್ ಕಾಣುತ್ತದೆ. ಅರಿಜಿತ್ ಸಿಂಗ್ ಅವರ ನಿವೃತ್ತಿ ಘೋಷಣೆಯನ್ನು ಅವರ ಕೆಲವು ಫಾಲೋವರ್ಗಳು ವಿರೋಧಿಸಿದ್ದು, ಫಾಲೋವರ್ಗಳಿಗೆ ಅರಿಜಿತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಣಯಕ್ಕೆ ಕಾರಣವನ್ನು ಅವರು ತಮ್ಮ ಪೋಸ್ಟ್ ಒಂದಲ್ಲಿ ತಿಳಿಸಿದ್ದು, ಪೋಸ್ಟ್ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ಸಿನಿಮಾ ಹಾಡು ಹೇಳಲು ಹಣ ಕೇಳಲ್ಲ ಅರಿಜಿತ್ ಸಿಂಗ್; ವಿವರಿಸಿದ ಗಾಯಕ
No No No Arijit ….you cannot do this …. Bro just say it’s prank 🥲… #arijitsingh #whoami pic.twitter.com/JrYB7XujHh
— VIRENDRA SHAH (@Virendr36129334) January 27, 2026
‘ನನ್ನ ಈ ನಿರ್ಣಯಕ್ಕೆ ಒಂದು ಕಾರಣ ಎಂದು ಇಲ್ಲ, ಬದಲಿಗೆ ಹಲವು ಕಾರಣಗಳಿವೆ. ಈ ನಿರ್ಧಾರವನ್ನು ಬಹಳ ಹಿಂದಿನಿಂದ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ ಆದರೆ ಈಗ ಸರಿಯಾದ ಧೈರ್ಯವನ್ನು ಒಗ್ಗೂಡಿಸಿಕೊಂಡು ನಿರ್ಣಯ ಪ್ರಕಟಿಸಿದ್ದೇನೆ. ನನ್ನ ಈ ನಿರ್ಣಯಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಒಂದೆಂದರೆ ನನಗೆ ಯಾವುದೇ ವಿಷಯ ಬಹಳ ಬೇಗ ಬೋರ್ ಎನಿಸುತ್ತದೆ. ಇದೇ ಕಾರಣಕ್ಕೆ ನಾನು ಲೈವ್ ಶೋ ಮಾಡುವಾಗಲೂ ಸಹ ಪದೇ ಪದೇ ಸಂಗೀತ, ರಾಗಗಳನ್ನು ಬದಲಾಯಿಸುತ್ತಾ ಇರುತ್ತೇನೆ. ಈಗ ನನಗೆ ಬೋರ್ ಆಗಿದೆ, ಹಾಡುಗಾರಿಕೆ ಏಕತಾನತೆ ಎನಿಸಿದೆ, ಈಗ ನಾನು ಜೀವನ ಸಾಗಿಸಲು ಬೇರೆ ಸಂಗೀತ ಮಾಡಬೇಕು ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ‘ಹೊಸ ಗಾಯಕರ ಕೆಲಸಗಳನ್ನು ನೋಡಲು ನಾನು ಉತ್ಸುಕನಾಗಿದ್ದೇನೆ, ಯಾರಾದರೂ ಹೊಸ ಗಾಯಕರು, ನಿಜಕ್ಕೂ ನನಗೆ ಹಾಡಿನ ಮೂಲಕ ಸ್ಪೂರ್ತಿ ತುಂಬಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ಅರಿಜಿತ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




