ಸಿನಿಮಾ ಹಾಡು ಹೇಳಲು ಹಣ ಕೇಳಲ್ಲ ಅರಿಜಿತ್ ಸಿಂಗ್; ವಿವರಿಸಿದ ಗಾಯಕ
ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಅವರು ಹಾಡುಗಳಿಗೆ ಹಣ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಶೋಗಳಿಗೆ ಅವರು ಎಷ್ಟು ಚಾರ್ಜ್ ಮಾಡುತ್ತಾರೆ ಎಂಬ ಮಾಹಿತಿಯನ್ನು ಅವರ ಮ್ಯಾನೇಜರ್‌ನಿಂದ ಪಡೆಯಬಹುದು ಎಂದು ಹೇಳಿದ್ದಾರೆ. ಅವರ ಸರಳತೆ ಮತ್ತು ದಾನ ಕಾರ್ಯಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ.

ಗಾಯಕ ಅರಿಜಿತ್ ಸಿಂಗ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಹಲವು ಶೋಗಳನ್ನು ಅವರು ಆಯೋಜನೆ ಮಾಡುತ್ತಾರೆ. ಇದರೆಡರಿಂದಲೂ ಅರಿಜಿತ್ (Arijith Singh) ಅವರು ಸಾಕಷ್ಟು ಹಣ ಮಾಡುತ್ತಾರೆ. ಆದರೂ ಸಿಂಪಲ್ ಆಗಿರೋದು ಅವರ ಹೆಚ್ಚುಗಾರಿಕೆ ಎನ್ನಬಹುದು. ಅವರು ಹಾಡಿದ್ದಕ್ಕೆ ಯಾವುದೇ ಹಣ ಚಾರ್ಜ್ ಮಾಡುವುದಿಲ್ಲವಂತೆ. ಈ ಬಗ್ಗೆ ಅವರು ಹೇಳಿಕೊಂಡಿದ್ದರು.
ಅರಿಜಿತ್ ಸಿಂಗ್ ಅವರು ಎಷ್ಟು ಹಣವನ್ನು ಪ್ರತಿ ಸಾಂಗ್ ಗೆ ಚಾರ್ಜ್ ಮಾಡುತ್ತಾರೆ ಎಂಬ ಬಗ್ಗೆ ಚರ್ಚೆಗಳು ಮೊದಲಿನಿಂದಲೂ ಇವೆ. ಇದಕ್ಕೆ ಅವರ ಕಡೆಯಿಂದ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಈಗ ಸಂದರ್ಶನ ಒಂದರಲ್ಲಿ ಅವರಿಗೆ ಈ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು. ಆದರೆ, ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದರು.
‘ಅರಿಜಿತ್ ಸಿಂಗ್ ಅವರು ಹಾಡು ಹಾಡಿದ್ದಕ್ಕೆ ಎಷ್ಟು ಹಣ ಪಡೆಯುತ್ತಾರೆ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಾನು ಹಾಡು ಹೇಳಲು ಯಾವುದೇ ಹಣ ಚಾರ್ಜ್ ಮಾಡೋದಿಲ್ಲ. ಆದಾಗ್ಯೂ ನಾನು ಹಾಡಿದ್ದಕ್ಕೆ ಅವರೇ ಹಣ ನೀಡುತ್ತಾರೆ’ ಎಂದು ಅರಿಜಿತ್ ಸಿಂಗ್ ಅವರು ಹೇಳಿದರು. ಅಂದರೆ ಅರಿಜಿತ್ ಸಿಂಗ್ ಅವರು ಹಾಡು ಹೇಳುವುದಕ್ಕೂ ಮೊದಲು ಸಂಭಾವನೆ ಬಗ್ಗೆ ಮಾತನಾಡೋದಿಲ್ಲ. ‘ನೀವೆ ಎಷ್ಟು ಹಣ ಎಂದು ನೀಡಿ’ ಎಂದು ಕೇಳಬಹುದು.
View this post on Instagram
ಇನ್ನು ಶೋಗಳಿಗೆ ಎಷ್ಟು ಚಾರ್ಜ್ ಮಾಡುತ್ತಾರೆ ಎಂಬುದನ್ನು ಅರಿಜಿತ್ ಸಿಂಗ್ ಅವರು ರಿವೀಲ್ ಮಾಡಿಲ್ಲ. ಇದಕ್ಕಾಗಿ ಮ್ಯಾನೇಜರ್ನ ಕಾಂಟ್ಯಾಕ್ಟ್ ಮಾಡಿ ಎಂದು ಹೇಳಿದ್ದಾರೆ. ಅರಿಜಿತ್ ಸಿಂಗ್ ಅವರು ಒಂದು ಶೋ ನಡೆಸಲು ಕೋಟ್ಯಂತರ ರೂಪಾಯಿ ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ: ರೆಸ್ಟೋರೆಂಟ್ ಓಪನ್ ಮಾಡಿದ ಅರಿಜಿತ್ ಸಿಂಗ್; ಊಟದ ಬೆಲೆ ಕೇವಲ 40 ರೂಪಾಯಿ
ಅರಿಜಿತ್ ಸಿಂಗ್ ಅವರು ಪಶ್ಚಿಮ ಬಂಗಾಳದವರು. ಅವರು ಆಗಾಗ ತಮ್ಮ ಹುಟ್ಟೂರಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಅವರು ಸ್ಕೂಟರ್ನಲ್ಲಿ ಓಡಾಡುತ್ತಾರೆ. ಬಡವರಿಗೋಸ್ಕರ ಅವರು ಅಲ್ಲಿ ಹೋಟಲ್ ಆರಂಭಿಸಿದ್ದು, ಕಡಿಮೆ ಬೆಲೆಯಲ್ಲಿ ಊಟ ನೀಡುತ್ತಿದ್ದಾರೆ. ಎಷ್ಟೇ ಹಣ ಮಾಡಿದರೂ ಅವರು ಯಾವಾಗಲೂ ದವಲತ್ತು ತೋರಿಸುವ ಕೆಲಸ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







