AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸ್ಟೋರೆಂಟ್ ಓಪನ್ ಮಾಡಿದ ಅರಿಜಿತ್ ಸಿಂಗ್; ಊಟದ ಬೆಲೆ ಕೇವಲ 40 ರೂಪಾಯಿ

Arijit Singh: ಭಾರತದ ಖ್ಯಾತ ಗಾಯಕ ಅರಿಜಿತ್ ಸಿಂಗ್. ಅವರ ಒಂದು ಲೈವ್ ಶೋಗೆ ಲಕ್ಷಾಂತರ ಮಂದಿ ಟಿಕೆಟ್ ಖರೀದಿಸಿ ಬರುತ್ತಾರೆ. ಆದರೆ ಅರಿಜಿತ್ ದುಂದು ವೆಚ್ಚಕ್ಕಲ್ಲದೆ ತಮ್ಮ ಸರಳತೆಯಿಂದ ಜನಪ್ರಿಯರು. ಹಲವು ಸೆಲೆಬ್ರಿಟಿಗಳ ರೀತಿಯಲ್ಲಿ ಅರಿಜಿತ್ ಸಹ ಹೋಟೆಲ್ ಬ್ಯುಸಿನೆಸ್​ಗೆ ಕಾಲಿಟ್ಟಿದ್ದಾರೆ. ಆದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಊಟ ನೀಡುತ್ತಿದ್ದಾರೆ ಅರಿಜಿತ್.

ರೆಸ್ಟೋರೆಂಟ್ ಓಪನ್ ಮಾಡಿದ ಅರಿಜಿತ್ ಸಿಂಗ್; ಊಟದ ಬೆಲೆ ಕೇವಲ 40 ರೂಪಾಯಿ
Arijit Singh
 ಶ್ರೀಲಕ್ಷ್ಮೀ ಎಚ್
| Edited By: |

Updated on: May 10, 2025 | 6:56 PM

Share

ಸೆಲೆಬ್ರಿಟಿಗಳಿಗೆ ತಮ್ಮದೇ ಆದ ಉದ್ಯಮ ಹೊಂದಿರುತ್ತಾರೆ. ರೆಸ್ಟೋರೆಂಟ್​ನ ಆರಂಭಿಸಿ ಅಲ್ಲಿ ಊಟಕ್ಕೆ ದುಬಾರಿ ಬೆಲೆಯನ್ನು ನಿಗದಿ ಮಾಡೋದು ಗೊತ್ತೇ ಇದೆ. ಈಗ ಖ್ಯಾತ ಗಾಯಕ ಅರಿಜಿತ್ ಸಿಂಗ್ ಕೂಡ ಹೋಟೆಲ್ ಆರಂಭಿಸಿದ್ದಾರೆ. ಹಾಗಂತ ಇದ್ಯಾವುದೂ ದುಬಾರಿ ಹೋಟೆಲ್ ಅಲ್ಲ. ಇಲ್ಲಿ ಒಂದು ಊಟಕ್ಕೆ ಅವರು ಚಾರ್ಜ್ ಮಾಡೋದು ಕೇವಲ 40 ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಒಳ್ಳೆಯ ಗುಣಮಟ್ಟದ ಊಟದ ಜೊತೆಗೆ ಕಡಿಮೆ ಬೆಲೆಯಲ್ಲಿ ಆಹಾರ ದೊರೆಯುವಂತೆ ಮಾಡುವುದು ಅವರ ಉದ್ದೇಶ.

ಅರಿಜಿತ್ ಸಿಂಗ್ ಅವರ ಹುಟ್ಟೂರು ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್​ನವರು. ಅವರು ಹುಟ್ಟೂರಿಗೆ ಏನನ್ನಾದರೂ ಮಾಡಬೇಕು ಎಂದು ಕನಸು ಕಂಡವರು. ಆ ಕನಸು ಈಗ ಈಡೇರಿದೆ. ಸಾಮಾನ್ಯ ಜನರಿಗೆ ಊಟ ಕೊಡುವ ಉದ್ದೇವನ್ನು ಅವರು ಹೊಂದಿದ್ದಾರೆ. ವಿಶೇಷ ಎಂದರೆ ಅರಿಜಿತ್ ಸಿಂಗ್ ತಂದೆ ಗುರುದಯಾಳ ಸಿಂಗ್ ಅವರು ರೆಸ್ಟೋರೆಂಟ್​ನ ಉದ್ಯಮ ಹೊಂದಿದ್ದಾರೆ.

ಅರಿಜಿತ್ ಸಿಂಗ್ ರೆಸ್ಟೋರೆಂಟ್​ನಲ್ಲಿ ಒಂದು ಊಟದ ಬೆಲೆ 40 ರೂಪಾಯಿ ಮಾತ್ರ. ಹಾಗಂದ ಮಾತ್ರಕ್ಕೆ ಎಲ್ಲರಿಗೂ ಇಲ್ಲಿ 40 ರೂಪಾಯಿ ಅಲ್ಲ. ವಿದ್ಯಾರ್ಥಿಗಳಿಗೆ 40 ರೂಪಾಯಿಯಲ್ಲಿ ಊಟ ಸಿಗಲಿದೆ. ಇದರ ಜೊತೆಗೆ ಅಗತ್ಯ ಇರುವವರಿಗೂ ಕಡಿಮೆ ಬೆಲೆಯಲ್ಲಿ ಆಹಾರ ದೊರೆಯಲಿದೆ. ಈ ವಿಚಾರಕ್ಕೆ ಅವರು ಮೆಚ್ಚುಗೆ ಪಡೆದಿದ್ದಾರೆ.

ಇದನ್ನೂ ಓದಿ:ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?

ಅರಿಜಿತ್ ಸಿಂಗ್ ಅವರಿಗೆ ದೇಶದ ಬಗ್ಗೆ ಅಪಾರ ಕಾಳಜಿ ಹಾಗೂ ಪ್ರೀತಿ ಇದೆ. ಅಬು ಧಾಬಿಯಲ್ಲಿ ಅವರ ಶೋ ಇತ್ತು. ಆದರೆ, ಪಾಕಿಸ್ತಾನ ಮತ್ತು ಭಾರತದ ದಾಳಿ ಬಳಿಕ ಈ ಶೋನ ಮುಂದಕ್ಕೆ ಹಾಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸೋದಾಗಿ ಅವರು ಹೇಳಿದ್ದಾರೆ.

ಅರಿಜಿತ್ ಸಿಂಗ್ ಅವರು 18ನೇ ವಯಸ್ಸಿಗೆ ವೃತ್ತಿ ಜೀವನ ಆರಂಭಿಸಿದರು. 300ಕ್ಕೂ ಅಧಿಕ ಹಾಡುಗಳನ್ನು ಅವರು ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡುಗಳನ್ನು ಹಾಡಿದ್ದು ಕಡಿಮೆ ಎನ್ನಬಹುದು. ಆದರೆ, ಹಿಂದಿಯಲ್ಲಿ ಅವರ ಹಾಡಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ