AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಿವರಾಜ್​ಕುಮಾರ್ ತಾಯಿಯಾಗಿ ಗುರುತಿಸಿದ್ರು’; 80ರ ದಶಕದ ಕಥೆ ಹೇಳಿಕೊಂಡಿದ್ದ ಪಾರ್ವತಮ್ಮ

Shivarajkumar Birthday: ಪಾರ್ವತಮ್ಮ ಅವರು ರಾಜ್ ಕುಮಾರ್ ಅವರ ಪತ್ನಿ ಮತ್ತು ಶಿವರಾಜ್ ಕುಮಾರ್ ಅವರ ತಾಯಿಯಾಗಿ ಹೆಚ್ಚು ಗುರುತಿಸಲ್ಪಟ್ಟರು. ಶಿವರಾಜ್ ಕುಮಾರ್ ಅವರ ಚಿತ್ರರಂಗ ಪ್ರವೇಶದ ನಂತರ, ಅವರನ್ನು "ಶಿವರಾಜ್ ಕುಮಾರ್ ಅವರ ತಾಯಿ" ಎಂದು ಕರೆಯಲಾರಂಭಿಸಿದ್ದು ಅವರಿಗೆ ಸಂತೋಷವನ್ನು ನೀಡಿತು. ಈ ಬಗ್ಗೆ ಅವರ ಅಪರೂಪದ ಸಂದರ್ಶನವೊಂದು ಈಗ ಮತ್ತೆ ಸುದ್ದಿಯಾಗಿದೆ.

‘ಶಿವರಾಜ್​ಕುಮಾರ್ ತಾಯಿಯಾಗಿ ಗುರುತಿಸಿದ್ರು’; 80ರ ದಶಕದ ಕಥೆ ಹೇಳಿಕೊಂಡಿದ್ದ ಪಾರ್ವತಮ್ಮ
ಶಿವಣ್ಣ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 12, 2025 | 7:35 AM

Share

ಪಾರ್ವತಮ್ಮ ಅವರು ನಿರ್ಮಾಪಕಿ ಆಗಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರನ್ನು ಅನೇಕರು ರಾಜ್​ಕುಮಾರ್ ಪತ್ನಿ ಎಂದು ಗುರುತಿಸುತ್ತಿದ್ದರು. ಯಾವಾಗ ಶಿವರಾಜ್​ಕುಮಾರ್ ಚಿತ್ರರಂಗದಲ್ಲಿ ಮಿಂಚಿದರೋ ಆಗ ‘ಶಿವರಾಜ್​ಕುಮಾರ್ ಅಮ್ಮ ಇವರು’ ಎಂದು ಗುರುತಿಸಲು ಆರಂಭಿಸಿದರಂತೆ. ಈ ಬಗ್ಗೆ ಪಾರ್ವತಮ್ಮ ಅವರಿಗೆ ಖುಷಿ ಇತ್ತು. ಈ ಬಗ್ಗೆ ಹಳೆಯ ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಇಂದು (ಜುಲೈ 12) ಶಿವರಾಜ್​ಕುಮಾರ್ ಜನ್ಮದಿನ. ಈ ವೇಳೆ ಈ ಹಳೆಯ ಘಟನೆಯನ್ನು ನೆನಪಿಸಿಕೊಳ್ಳೋಣ.

ಆಗಿನ ಕಾಲದಲ್ಲಿ ಈ ರೀತಿ ಮಾಧ್ಯಮಗಳು, ಯೂಟ್ಯೂಬ್ ಇರಲಿಲ್ಲ. ಸೆಲೆಬ್ರಿಟಿಗಳು ನೀಡುವ ಸಂದರ್ಶನ ಟಿವಿಯಲ್ಲಿ ಪ್ರಸಾರ ಮಾಡಲು ಕೆಲವೇ ಮಾಧ್ಯಮಗಳು ಇದ್ದವು. ಈಗ ಶಿವರಾಜ್​ಕುಮಾರ್ ಹಾಗೂ ಪಾರ್ವತಮ್ಮ ಅವರ ಅಪರೂಪದ ಸಂದರ್ಶನ ಒಂದು ಸಿಕ್ಕಿದೆ. ‘ಆನಂದ್’ ಹಿಟ್ ಆದ ಬಳಿಕ ಶಿವಣ್ಣ ಅವರು ಈ ಸಂದರ್ಶನ ನೀಡಿದ್ದರು.

‘ಶಿವರಾಜ್​ಕುಮಾರ್ ತಾಯಿ ಎಂದು ಕೆಲವರು ಹೇಳಿದರು. ಶಿವರಾಜ್​ಕುಮಾರ್ ತಾಯಿ ಅಂತೀರಲ್ಲೋ, ಅವರು ಮೊದಲು ರಾಜ್​ಕುಮಾರ್ ಪತ್ನಿ ಎಂದು ಅವರಿಗೆ ಹೇಳಲಾಯಿತು. ನನಗೆ ಶಿವರಾಜ್​ಕುಮಾರ್ ತಾಯಿ ಎಂದರೂ ಖುಷಿ ಆಗುತ್ತದೆ, ರಾಜ್​ಕುಮಾರ್ ಪತ್ನಿ ಎಂದರೂ ಖುಷಿ ಆಗುತ್ತದೆ’ ಎಂದು ಪಾರ್ವತಮ್ಮ ಹೇಳಿದ್ದರು. ‘ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪಾರ್ವತಮ್ಮ ಅವರು ವಿವರಿಸಿದ್ದರು.

ಇದನ್ನೂ ಓದಿ
Image
ಶಿವಣ್ಣ ಹುಟ್ಟಿದ ಬಳಿಕ ಸಂಜೆಯಿಂದ ಬೆಳಗ್ಗಿನವರೆಗೆ ಸ್ವೀಟ್ ಹಂಚಿದ್ದ ರಾಜ್​
Image
ದಳಪತಿ ವಿಜಯ್ ಚಿತ್ರದಲ್ಲಿ ನನ್ನ ಪಾತ್ರ ವೇಸ್ಟ್ ಮಾಡಿದರು; ಸಂಜಯ್ ದತ್ ಬೇಸರ
Image
ನಟ ದರ್ಶನ್ ಬಳಿಯೂ ಇತ್ತು ಹಮ್ಮರ್; ಮಾರಿದ್ದು ಏಕೆ?
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ತಿರುವು; ಭೂಮಿಕಾಗೆ ಅವಳಿ ಮಕ್ಕಳು

ಶಿವರಾಜ್​ಕುಮಾರ್ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಬಾರಿ ಅವರಿಗೆ ಬರ್ತ್​ಡೇ ವಿಶೇಷ. ಏಕೆಂದರೆ ಅವರು ಕ್ಯಾನ್ಸರ್​ನ ಎದುರಿಸಿ ಬಂದಿದ್ದಾರೆ. ಅವರು ಕ್ಯಾನ್ಸರ್ ಸಂಪೂರ್ಣ ಗೆದ್ದಿರುವುದರಿಂದ ಸಾವು ಗೆದ್ದು ಬಂದಂತೆ ಆಗಿದೆ ಆಗಿದೆ ಎನ್ನಬಹುದು. ಆದರೆ, ಅವರು ದೊಡ್ಡ ಮಟ್ಟದಲ್ಲಿ ಬರ್ತ್ಡೇ ಆಚರಿಸಿಕೊಳ್ಳಲು ಯಾವಾಗಲೂ ಆದ್ಯತೆ ನೀಡುವುದಿಲ್ಲ. ಈ ಬಾರಿಯೂ ಅದೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ. ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು

ಶಿವರಾಜ್​ಕುಮಾರ್ ಬರ್ತ್​ಡೇ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಇದೆ. ಪರಭಾಷೆಯಲ್ಲೂ ಅವರು ನಟಿಸುತ್ತಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 am, Sat, 12 July 25

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!